ಬೆಳಗಾವಿಯಲ್ಲಿ ನಡೆದ ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್‌ನ 9ನೇ ವಾರ್ಷಿಕ ರಾಷ್ಟ್ರೀಯ ಮಹಾ ಅಧಿವೇಶನದಲ್ಲಿ ಸರ್ವಾನುಮತದಿಂದ ತೆಗೆದುಕೊಂಡ ನಿರ್ಣಯಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸಲ್ಲಿಸುತ್ತಾ, ಅವುಗಳನ್ನು ಆದಷ್ಟು ಶೀಘ್ರವಾಗಿ ಅನುಷ್ಠಾನಗೊಳಿಸಬೇಕೆಂದು ಸಭೆ ಒಕ್ಕೊರಲಿನಿಂದ ಒತ್ತಾಯಿಸುತ್ತದೆ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಪ್ರಸ್ತುತ ಶಾಶ್ವತ ಆಯೋಗವು, ಎಚ್ ಕಾಂತರಾಜು ಹಿಂದುಳಿದ ವರ್ಗಗಳ ಆಯೋಗ ನಡೆಸಿದ, ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಜಾತಿವಾರು ಜನಗಣತಿ)ಯ ವರದಿಯನ್ನು ಕೂಡಲೇ ಪೂರ್ಣಗೊಳಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂಬ ನಿರ್ಣಯವನ್ನು ಸಭೆ ಸರ್ವಾನುಮತದಿಂದ ಅಂಗೀಕರಿಸಿತು.
1931 ರಲ್ಲಿ ಭಾರತದಲ್ಲಿ ಬ್ರಿಟಿಷ್ ಸರ್ಕಾರ ಭಾರತದಲ್ಲಿರುವ ಸಮಸ್ತರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೊನೆಯದಾಗಿದ್ದು, ಮತ್ತೆ ಸಮೀಕ್ಷೆಯನ್ನು ಕೈಗೆತ್ತಿಕೊಳ್ಳುವ ಅನಿವಾರ್ಯತೆ ಇರುವುದರಿಂದ, ಪ್ರಸ್ತುತ ಭಾರತ ಸರ್ಕಾರ 1948 ಸೆನ್ಸಸ್ ಆಕ್ಟ್ ಗೆ ತಿದ್ದುಪಡಿ ತಂದು ಶೇಕಡ 100ರಷ್ಟು ಭಾರತದ ಜನಸಂಖ್ಯೆಯ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳಬೇಕೆಂದು ಭಾರತ ಸರ್ಕಾರವನ್ನು ಸಭೆ ಸರ್ವಾನುಮತದಿಂದ ಒತ್ತಾಯಿಸುತ್ತದೆ.
ಭಾರತದಲ್ಲಿ ಬದುಕು ಮಾಡುತ್ತಿರುವ ಹನ್ನೆರಡು ಕೋಟಿಗೂ ಮೀರಿದ ಕುರುಬ ಸಮುದಾಯದ ಸಮಾನಾರ್ಥಕ (ಕುರುಬ, ಕುರುಮನ್, ಕುರುಂಬನ್, ಧನಗರ್, ರಾಯ್ಕರ್, ದೇವಾಸಿ, ರಬಾರಿ, ಗಡ್ಡಿ, ಭರ್ಕಾವಾಲ್, ಮಲ್ಲಾರಿ, ಮೇ ಶಾಲ್, ಕಟ್ಟುನಾಯಕನ್, ಗೋವಾಲ, ಬಫೆಲ್ ಮುಂತಾದ) ಹೆಸರಿನ ಎಲ್ಲರನ್ನೂ ಒಳಗೊಂಡಂತೆ ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ) ಸೇರಿಸಬೇಕೆಂದು ಭಾರತ ಸರ್ಕಾರವನ್ನು ಸಭೆ ಸರ್ವಾನುಮತದಿಂದ ಒತ್ತಾಯಿಸುತ್ತದೆ.
ಹಾಗೂ ಈಗಾಗಲೇ ಬೀದರ್, ಗುಲ್ಬರ್ಗ ಹಾಗೂ ಯಾದಗಿರಿ ಜಿಲ್ಲೆಗಳ ಗೊಂಡ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿಸುವ ಕರ್ನಾಟಕ ಸರ್ಕಾರದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬೇಕು ಎಂಬ ನಿರ್ಣಯವನ್ನು ಸಭೆ ಸರ್ವಾನುಮತದಿಂದ ಅಂಗೀಕರಿಸಿತು.
ಕರ್ನಾಟಕ ಸರ್ಕಾರ ಇತ್ತೀಚಿಗೆ ಮಾಡಿರುವ ಶಿಫಾರಸ್ಸಿನಂತೆ ಕರ್ನಾಟಕದ ಕುರುಬರು ಮತ್ತು ಇತರೆ ಉಪಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಕೇಂದ್ರ ಸರ್ಕಾರ ಸೇರಿಸಬೇಕು ಎಂಬ ನಿರ್ಣಯವನ್ನು ಸಭೆ ಸರ್ವಾನುಮತದಿಂದ ಅಂಗೀಕರಿಸಿತು.
ಯಶಸ್ವಿ ಸಮಾವೇಶ.
ಗಡಿನಾಡ ಬೆಳಗಾವಿಯಲ್ಲಿ ಕುರುಬರ ರಾಷ್ಟ್ರೀಯ ಮಟ್ಟದ ಸಮಾವೇಶ ಅತ್ಯಂತ ಯಶಸ್ವಿಯಾಗಿದೆ. ಇಂದು ಮಂಡಿಸಲಾದ ಬೇಡಿಕೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಈಡೇರಿಕೆಗೆ ಆಧ್ಯತೆ ನೀಡಬೇಕು.
ರಾಜೇಂದ್ರ ಸಣ್ಣಕ್ಕಿ. ಕುರುಬ ಸಮಾಜದ ಮುಖಂಡರು
ಭಾರತ ಸರ್ಕಾರ, ರಾಜ್ಯ ಶಾಸಕಾಂಗ ಮತ್ತು ಕೇಂದ್ರದ ಸಂಸತ್ತಿನಲ್ಲಿ ಮಹಿಳೆಯರಿಗೆ ಶೇಕಡ 33 ರಷ್ಟು ಪ್ರಾತಿನಿಧ್ಯ ನೀಡಲು ತೆಗೆದುಕೊಂಡ ತೀರ್ಮಾನವನ್ನು ನಾವು ಸ್ವಾಗತಿಸುತ್ತಾ, ಇವರಲ್ಲಿ ಅಲ್ಪಸಂಖ್ಯಾತರು ಮತ್ತು ಇತರೆ ಹಿಂದುಳಿದ ವರ್ಗದ ಮಹಿಳೆಯರಿಗೂ ಮೀಸಲಾತಿ ಕಡ್ಡಾಯ ಅವಕಾಶವಿರುವಂತೆ ಶಾಸನ ರಚನೆ ಮಾಡಲು ಭಾರತ ಸರ್ಕಾರವನ್ನು ಸಭೆ ಸರ್ವಾನುಮತದಿಂದ ಒತ್ತಾಯಿಸುತ್ತದೆ
ಭಾರತದ ಸ್ವಾತಂತ್ರ್ಯಕ್ಕೆ ಪ್ರಥಮ ಕಹಳೆಯನ್ನು ಮೊಳಗಿಸಿ ಹುತಾತ್ಮರಾದ ಅಪ್ಪಟ ದೇಶಪ್ರೇಮಿ ವೀರ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿ, ಅಭಿವೃದ್ಧಿ ಮಾಡಬೇಕೆಂದು ಭಾರತ ಸರ್ಕಾರವನ್ನು ಸಭೆ ಸರ್ವಾನುಮತದಿಂದ ಒತ್ತಾಯಿಸುತ್ತದೆ.
ಕುರಿ ನಡೆದಾಡುವ ಬ್ಯಾಂಕ್ • ಅದು ನಮ್ಮ ಸಂಪತ್ತು ಮತ್ತು ಅನ್ನ, ಅಂತಹ ಕುರಿಗಳನ್ನು ಸಾಕುವ ಅಲೆಮಾರಿ ಕುರುಬ ಸಮುದಾಯ ಸ್ವಯಂ ರಕ್ಷಣೆಗಾಗಿ ಭದ್ರತೆಯನ್ನು ಒದಗಿಸಲು ಮತ್ತು ಕುರಿ ಮೇಕೆಗಳನ್ನು ಮೇಯಿಸಲು ಕಂದಾಯ ಸರ್ವಾನುಮತದಿಂದ ಒತ್ತಾಯಿಸಲಾಯಿತು. ಭೂಮಿಯನ್ನೂ ಕಾಯ್ದಿರಿಸುವಂತೆ ಸರ್ಕಾರವನ್ನು ಸಭೆ ಸರ್ಕಾರದ
ಅಲೆಮಾರಿ ಕುರಿಗಾಯಿಗಳ ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಅನ್ನಕ್ಕಾಗಿ, ಸಂಚಾರಿ ಶಾಲೆಗಳು, ಸಂಚಾರಿ ಆಸ್ಪತ್ರೆಗಳು ಮತ್ತು ಸಂಚಾರಿ ಆಹಾರ ವಿತರಣೆಯ ಕಾರ್ಯವನ್ನು ಕೂಡಲೇ ಕೈಗೆತ್ತಿಗೊಳ್ಳಲು ಸರ್ಕಾರವನ್ನು ಸಭೆ ಸರ್ವಾನುಮತದಿಂದ ಒತ್ತಾಯಿಸುತ್ತದೆ.
ಪ್ರಕೃತಿ ವಿಕೋಪ, ಪ್ರವಾಸ, ಅಪಘಾತ, ವಿಪತ್ತುಗಳಲ್ಲಿ ದೌರ್ಜನ್ಯಗೊಳಗಾಗಿ ಹಾಗೂ ಹಲ್ಲೆಗೊಳಗಾಗಿ ಮೃತಪಟ್ಟ ಕುರಿಗಳು ಮತ್ತು ಹೆರಿಗಾಯಿಗಳಿಗೆ ಸೂಕ್ತ ರೀತಿಯ ಪರಿಹಾರ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಸಭೆ ಸರ್ವಾನುಮತದಿಂದ ಒತ್ತಾಯಿಸುತ್ತದೆ.
ಕುರಿ ಸಾಗಾಣಿಕೆಯೇ ನಮ್ಮ ವೃತ್ತಿಯಾಗಿ ಮತ್ತು ಅನ್ನವಾಗಿರುವ ಉದ್ಯಮವನ್ನು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸಲು ಕರ್ನಾಟಕ ರಾಜ್ಯ ಸರ್ಕಾರ ಒಂದು ಸಾವಿರ ಕೋಟಿ ರೂಪಾಯಿ ಆವರ್ತ ನಿಧಿಯನ್ನು ತೆಗೆದಿರಿಸಬೇಕು ಮತ್ತು NCDC ಸಾಲಸೌಲಭ್ಯದಲ್ಲಿ ಸರಕಾರದ ವತಿಯಿಂದ ಪ್ರೋತ್ಸಾಹ ನಿಧಿ 75% ಮತ್ತು ಫಲಾನುಭವಿ ನಿಧಿ 25% ಮಾದರಿಯಲ್ಲಿ ಕರ್ನಾಟಕ ಸಹಕಾರ ಮಹಾಮಂಡಲದ ಮೂಲಕ ಅನುಷ್ಠಾನಗೊಳಿಸಲು ಮತ್ತು ಪ್ರತಿ ವರ್ಷ ಕೊಡಲು ಸರ್ಕಾರವನ್ನು ಸಭೆ ಸರ್ವಾನುಮತದಿಂದ ಒತ್ತಾಯಿಸುತ್ತದೆ. ಕುರಿ ಮತ್ತು ಮೇಕೆ ನೂರು ಕೋಟಿ ಅನುದಾನ
, ಕರ್ನಾಟಕದ ಮಾದರಿಯನ್ನು ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಪರಿಗಣಿಸಿ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸುತ್ತದೆ.-
ಭಾರತ ಸರ್ಕಾರದ ಅಡಿಯಲ್ಲಿ ಬರುವ ಓಬಿಸಿ ಗಳಿಗೆ ಶಿಕ್ಷಣ ಮತ್ತು ಉದ್ಯೋಗಗಳನ್ನು ಒದಗಿಸುವ ಮೀಸಲಾತಿಯಲ್ಲಿ ಓಬಿಸಿ ಪಟ್ಟಿಯನ್ನು ಮರು ವರ್ಗೀಕರಣ ಮಾಡಲು ಕೇಂದ್ರ ಸರ್ಕಾರವನ್ನು ಸಭೆ ಸರ್ವಾನುಮತದಿಂದ ಒತ್ತಾಯಿಸುತ್ತದೆ.
ಕುರುಬ ಸಮುದಾಯದ ಸಂಸ್ಕೃತಿ, ಸಂಸ್ಕಾರ ಮತ್ತು ಇತಿಹಾಸವನ್ನು ನಮ್ಮ ಡೊಳ್ಳಿನ ಹಾಡುಗಳ ಮೂಲಕ ಸಾದರ ಪಡಿಸಲು ಪ್ರತ್ಯೇಕ ಡೊಳ್ಳು ಪ್ರಾಧಿಕಾರವನ್ನು ರಚಿಸಿ, ಅನುಷ್ಠಾನನಿಸಲು ರಾಜ್ಯ ಸರ್ಕಾರವನ್ನು ಸಭೆ ಸರ್ವಾನುಮತದಿಂದ ಒತ್ತಾಯಿಸುತ್ತದೆ.
ಕುರಿ ಮತ್ತು ಕುರಿ ಉತ್ಪನ್ನಗಳ ಮಾರಾಟವನ್ನು, ಹಾಲು ಮತ್ತು ಹಾಲು ಉತ್ಪನ್ನಗಳ (KMF) ಮಾರಾಟದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕೆಂದು ರಾಜ್ಯ ಸರ್ಕಾರವನ್ನು ಸಭೆ ಸರ್ವಾನುಮತದಿಂದ ಒತ್ತಾಯಿಸುತ್ತದೆ.