ಬೆಳಗಾವಿ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬರುವ ಸಂತಮೀರಾ ಶಾಲೆಯ ಹಿಂಭಾಗದಲ್ಲಿ ಹತ್ತಕ್ಕೂ ಹೆಚ್ಚು ಬೀದಿನಾಯಿಗಳನ್ನು ತಿಂದುಹಾಕಿದ್ದು ಯಾವುದು?
ಇಂತಹುದೊಂದು ಪ್ರಶ್ನೆಯ ನಡುವೆ ಅದು ಚಿರತೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಇದು ಒಂದು ರೀತಿಯ ಆತಂಕಕ್ಕೂ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ
ಆದರೆ ಅರಣ್ಯ ಇಲಾಖೆಯ ಕೆಲವರ ಪ್ರಕಾರ, ಆ ಹೆಜ್ಜೆ ಗುರುತು ಚಿರತೆಯದ್ದಲ್ಲ. ಬೇರೆಯದ್ದು ಇರಬೇಕು ಈ ಬಗ್ಗೆ ತಪಾಸಣೆ ನಡೆದಿದೆ ಎಂದು ಗೊತ್ತಾಗಿದೆ.
ಸಂತಮೀರಾ ಶಾಲೆಯ ಸುತ್ತ ಮುತ್ತ ಸುಮಾರುಹತ್ತಕ್ಕೂ ಹೆಚ್ಚು ನಾಯಿಗಳು ಇರುತ್ತಿದ್ದವು. ಆದರೆ ಅವು ಇಂದು ಸತ್ತಿವೆ ಹೀಗಾಗಿ ಇ್ಉ ಚಿರತೆಯದ್ದೇ ಕೆಲಸ ಇರಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.
ಆದರೆ ಈ ಘಟನೆಯ ಸತ್ಯಾಸತ್ಯತೆ ಬಗ್ಗೆ ಅರಣ್ಯ ಮತ್ತು ಪೊಲೀಸ್ ಇಲಾಖೆಯವರು ವಿಚಾರಣೆ ನಡೆಸಿದ್ದಾರೆ.