ಪಾಲಿಕೆ ಆರೋಗ್ಯ ಶಾಖೆಯ ಯಡವಟ್ಟು.
138 ಪಿಕೆಗಳ ವಿವಾದ. ತಪ್ಪು ಮುಚ್ವಿಕೊಳ್ಳಲು ಹೋಗಿ ತಮ್ಮ ಕಾಲ ಮೇಲೆ ಕಲ್ಲು ಹಾಕಿಕೊಂವರು ಯಾರು?.
ಸಂಬಳ ಪಾವತಿ ಅಸಾಧ್ಯ ಎಂದ ಪಾಲಿಕೆ ಆಯುಕ್ತರು.
ಅವರ ಸಂಬಳ ಕೊಡಿ ಎಂದು ಗುತ್ತಿಗೆದಾರನಿಗೆ ಒತ್ತಡ. ಅದಕ್ಕೂ ತಮಗೂ ಸಂಬಂಧವಿಲ್ಲ ಎಂದ ಸ್ಥಾಯಿ ಸಮಿತಿ ಅಧ್ಯಕ್ಷರು.
ಆದರೆ ಅಧ್ಯಕ್ಷರ ಹೆಸರು ಉಲ್ಲೇಖಿಸಿ ಆರೋಗ್ಯ ನೀರಿಕ್ಷಕರು ಪತ್ರ ಬರೆದಿದ್ದು ಯಾಕೆ? ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಹಿಂಜರಿಕೆ ಏಕೆ?
ಬೆಳಗಾವಿ.
ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯಿಂದ ಇಡೀ ಪಾಲಿಕೆಯ ಆರೋಗ್ಯ ಹದಗೆಟ್ಟಿದೆ. ಎಲ್ಲರೂ ಅದರ ಬಗ್ಗೆ ಆಡಿಕೊಳ್ಳುವಂತಾಗಿದೆ.
ಆದರೂ ಖಡಕ್ ಕ್ರಮ ಎನ್ನುವುದು ಆಗುತ್ತಿಲ್ಲ. ಎಲ್ಲರೂ ಇನ್ನಷ್ಟು ಆರೋಗ್ಯ ಕ್ಷೀಣಿಸಿದ ಮೇಲೆಯೇ ಸಂಪೂರ್ಣ ಶಸ್ತ್ರ ಚಿಕಿತ್ಸೆ ಮಾಡಬೇಕು ಎನ್ನುವಂತೆ ಕಾದು ಕುಳಿತಂತಿದೆ.
ಇಲ್ಲಿ ನೇರಾ ನೇರ ಹೇಳಬೇಕೆಂದರೆ, ಮಹಾನಗರ ಪಾಲಿಕೆಯಲ್ಲಿ 138 ಪೌರ ಕಾರ್ಮಿಕರ ವಿಷಯದಲ್ಲಿ ಆರೋಗ್ಯ ಶಾಖೆಯಿಂದಲೇ ನೂರೆಙಟು ಯಡವಟ್ಟುಗಳಾಗಿವೆ .ಅದೇ ಕಾರಣದಿಂದ ಪಾಲಿಕೆ ಆಯುಕ್ತರು ಅವರ ಸಂಬಳ ಕೊಟ್ಟಿಲ್ಲ. ಕಡತವನ್ನೂ ವಾಪಸ್ಸು ಕಳಿಸಿದ್ದಾರೆ. ಅದಷ್ಟೇ ಆಗಿದ್ದರೆ ಆಯಿತು ಬಿಡಿ ಎನ್ನಬಹುದಿತ್ತು.

ಆದರೆ ಇದೆಲ್ಲದರ ನಡುವೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರೇ ಗುತ್ತಿಗೆದಾರನ ವಿರುದ್ಧ ಗಂಭೀರ ಮತ್ತು ಗುರುತರ ಆರೋಪ ಮಾಡಿದ್ದಾರೆ.
ಗುತ್ತಿಗೆದಾರ ವೈ. ಬಿ ಗೊಲ್ಲರ ಬಳಿ ನಿಯಮಾನುಸಾರ ಇರಬೇಕಾದಷ್ಟು ಪಿಕೆಗಳು ಇಲ್ಲ ಎನ್ನುವುದು ಸೇರಿದಂತೆ ಇನ್ನೂ ಕೆಲ ಆರೋಪ ಉಲ್ಲೇಖ ಮಾಡಿ ಅವರನ್ನು ಕಪ್ಪುಪಟ್ಡಿಗೆ ಸೇರಿಸಬೇಕು ಎನ್ನುವ ಎಚ್ಚರಿಕೆ ನೀಡಿದ್ದರು. ಅಂದರೆ ಇಲ್ಲಿ ಗುತ್ತಿಗೆದಾರನದ್ದು ತಪ್ಪಿದೆ ಎಂದೇ ಅರ್ಥ.
ಹೀಗಿರುವಾಗ ಮತ್ತು ಇಷ್ಟೆಲ್ಲ ಲೋಪಗಳಿರುವಾಗ ಸಂಬಂಧಿಸಿದ ಆರೋಗ್ಯ ನಿರೀಕ್ಷರ,. ಆರೋಗ್ಯ ಶಾಖೆಯ ಅಧಿಕಾರಿಗಳು ಮೌನ ವಹಿಸಿದ್ದು ಯಾಕೆ ಎನ್ನುವ ಪ್ರಶ್ನೆ ಹಲವು ಸಂಶಯಗಳಿಗೆ ಆಸ್ಪದ ಉಂಟು ಮಾಡುತ್ತಿದೆ.

ಮತ್ತೊಂದು ಸಂಗತಿ ಎಂದರೆ, ಸ್ಥಾಯಿ ಸಮಿತಿ ಅಧ್ಯಕ್ಷರು 138 ಪಿಕೆಗಳ ವಿವಾದ ನಮಗೆ ಸಂಬಂಧವೇ ಇಲ್ಲ.ಮೇಲಾಗಿ ಆ ಪಿಕೆಗಳ ಸಂಬಳ ನಾವು ಕೊಡಿ ಅಂತನೂ ಗುತ್ತಿಗೆದಾರನಿಗೆ ಹೇಳಿಲ್ಲ ಎಂದು ಹೇಳಿದ್ದರು.
ಹೆದರೋ ಮಾತೇ ಇಲ್ಲ..!

https://ebelagavi.com/index.php/2023/10/05/k-5/
ಹಾಗಿದ್ದರೆ ಅಧ್ಯಕ್ಷರ ಗಮನಕ್ಕೆ ಬಾರದೇನೆ ಆರೋಗ್ಯ ನಿರೀಕ್ಷಕರು ಆ ಪಿಕೆಗಳ ಸಂಬಳ ಪಾವತಿಸಿ ಎಂದು ಪತ್ರ ನೀಡಿದ್ದು ಯಾಕೆ? ಇಲ್ಲಿ ಆ ಪತ್ರದ ಮೇಲೆ ಆರೋಗ್ಯ ನೀರಿಕ್ಷಕರು ಸ್ಥಾಯಿ ಸಮಿತಿ ಅಧ್ಯಕ್ಷರ ಹೆಸರು ಉಲ್ಲೇಖ ಮಾಡಿ ಸಹಿ ಸಿಕ್ಕಾ ಹಾಕಿ ಸಂಬಳ ಪಾವತಿಗೆ ಪತ್ರ ನೀಡಿದ್ದಾರೆ. ಅಂದರೆ ಇಲ್ಲಿ ಆರೋಗ್ಯ ಶಾಖೆಯ ಅಧಿಕಾರಿಗಳು ಹೇಳೊದೊಂದು ಮಾಡೊದೊಂದು ಮಾಡ್ತಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.
ಈಗ ಆರೋಗ್ಯಶಾಖೆಗೆ ಚಿಕಿತ್ಸೆ ನೀಡಬೇಕಾದ ಹೊಣೆ ಆಯುಕ್ತರ ಮೇಲಿದೆ. ತಪ್ಪು ಮಾಡಿದ ಆರೋಗ್ಯ ಶಾಖೆಯ ಸಿಬ್ಬಂದಿಗಳ ವಿರುದ್ಧ ಯಾವ ಕ್ರಮಕ್ಕೆ ಮುಂದಾಗುತ್ತಾರೆ ಎನ್ನುವುದನ್ನು ಕಾದು ನೋಡಬೇಕು.