Headlines

ಮೇಯರ್ ಪತ್ರದ ದುರುಪಯೋಗ..?

ಬೆಳಗಾವಿ ದಕ್ಷಿಣ ಕ್ಷೇತ್ರದ ಮೀಸಲಾತಿಯನ್ನೇ ಬದಲಾಯಿಸುವೆ ಎಂದವನ ಸ್ಥಿತಿ ಎಲ್ಲಿಗೆ ಬಂತು ಗೊತ್ತಾ?

ಆಡಳಿತ ಪಕ್ಷದವರೂ ನಡು ನೀರಿನಲ್ಲಿ ಕೈಬಿಟ್ಟರಾ?

ಮೇಯರ್ ಪತ್ರದ ದುರುಪಯೋಗದ ಹಿಂದಿರುವ ಕಾಣದ ಕೈ ಯಾರದ್ದು? ಮೇಯರ್ ಪತ್ರ ಆರೋಗ್ಯ ಸ್ಥಾಯಿ ಸಮಿತಿಗೆ ಬಂದಿದ್ದು ಹೇಗೆ?

ಪಾಲಿಕೆಗೆ ಸುಪ್ರೀಂ ಎನ್ನುವ ಮೇಯರ್ ಪತ್ರದ ಬಗ್ಗೆ ಸ್ಥಾಯಿ ಸಮಿತಿಯಲ್ಲಿ ಚರ್ಚೆ ನಡೆಸಿದ್ದು ಸರಿಯೇ?

ಇದು ಮೇಯರ್ ಗೆ ಮಾಡಿದ ಅವಮಾನ ಅಲ್ಲವೇ? ಸ್ಥಾಯಿ ಸಮಿತಿಗೆ ಸದಸ್ಯರಲ್ಲದವರು ಸಭೆಗೆ ಹೋಗಲು ಅವಕಾಶ ಇದೆಯೇ?

ಬೆಳಗಾವಿ.

ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಗೆ ಮೇಯರ್ ಸುಪ್ರೀಂ. ಆದರೆ ಇಲ್ಲಿ ಅವರು ಕೊಟ್ಟ ಪತ್ರವನ್ನೇ ಅಧಿಕಾರಿಯೊಬ್ಬರು ದುರುಪಯೋಗ ಪಡಿಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.

ಒಂದು ರೀತಿಯಲ್ಲಿ ಮೇಯರ್ ಗೌರವಕ್ಕೆ ಚ್ಯುತಿ ತರುವ ಕೆಲಸವನ್ನು ಇಲ್ಲಿ ವ್ಯವಸ್ಥಿತವಾಗಿ ಮಾಡಲಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಆ ಅಧಿಕಾರಿ ಹಿಂದೆ ಇರುವ ಕಾಣದ ಕೈ ಯಾವುದು ಎನ್ನುವುದು ಕೂಡ ಜಗಜ್ಜಾಹೀರವಾಗಬೇಕಾಗಿದೆ.

ನಿಯಮಾವಳಿ ಉಲ್ಲಂಘಿಸಿ 138 ಪೌರ ಕಾರ್ಮಿಕರ ನೇಮಕದಲ್ಲಿ ಮೇಯರ್ ಕೊಟ್ಟ ಪತ್ರದ ಬಗ್ಗೆ ಪರಿಸರ‌ ಅಧಿಕಾರಿ ಹನುಮಂತ ಕಲಾದಗಿ ನಗರಸೇವಕರಿಗೆ ತಪ್ಪು ಮಾಹಿತಿ ನೀಡಿ ಆಡಳಿತ ಪಕ್ಷಕ್ಕೆ ಮುಜುಗರ ಉಂಟು ಮಾಡಿದರು ಎನ್ನುವ ಮಾತು ಕೇಳಿ ಬಂದಿತು

ಫಾಲಿಕೆಯ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ಹನುಮಂತ ಕೊಂಗಾಲಿ ಅವರು ಮೇಯರ್ ಪತ್ರವನ್ನು ಕಲಾದಗಿ ಅವರಿಗೆ ಓದಲು ಹೇಳಿದಾಗ‌ ಈ ಹೂರಣ ಬೆಳಕಿಗೆ ಬಂದಿತು.

ಈಗ ಮೇಯರ್ ಪತ್ರದ ದುರುಪಯೋಗದಲ್ಲಿ ಇವರೊಬ್ಬರೇ ಇದ್ದಾರಾ ಅಥವಾ ಇವರ ಜೊತೆ ಮತ್ಯಾರಾದರೂ ಸೇರಿದ್ದಾರಾ ಹೇಗೆ ಎನ್ನುವುದು ಗೊತ್ತಾಗಬೇಕಿದೆ..

ಗಮನಿಸಬೇಕಾದ ಸಂಗತಿ ಎಂದರೆ, ಪಾಲಿಕೆಯಲ್ಲಿ 138 ಪೌರ ಕಾರ್ಮಿಕರ ನೇಮಕ ವಿವಾದ ಶುರುವಾದಾಗಿನಿಂದ ಮೇಯರ್ ಪತ್ರ ಕೊಟ್ಟಿದ್ದಾರೆ. ಅವರ ಪತ್ರದ ಆಧಾರದಲ್ಲಿ‌ ಈ ನೇಮಕ ತೆಗೆದುಕೊಳ್ಳಲಾಗಿದೆ ಎಂದು ಹೇಳುತ್ತ ಬರಲಾಯಿತು.. ಅಚ್ವರಿ ಸಂಗತಿ ಎಂದರೆ, ಆರೋಗ್ಯ ಸ್ಥಾಯಿ‌ ಸಮಿತಿಯ ಕೆಲವರೂ ಸಹ ಮೇಯರ್ ಪತ್ರದ ನೆಪ ಕೊಡುತ್ತ ಬಂದಿದ್ದರು. ಆದರೆ ಅದನ್ನು ಒರೆಗೆ ಹಚ್ಚುವ ಕೆಲಸವನ್ನು ಯಾರೂ ಮಾಡಿರಲಿಲ್ಲ.

ಇಲ್ಲಿ ಮೇಯರ್ ಪತ್ರ ಕೊಟ್ಟರೂ ಸಹ ಅದು ನೇರವಾಗಿ ಕೌನ್ಸಿಲ್ ಗೆ ಹೋಗಬೇಕು. ಆದರೆ ಅದು ಆರೋಗ್ಯ ಸ್ಥಾಯಿ ಸಮಿತಿಗೆ ಹೇಗೆ ಬಂದಿತು? ಅದನ್ನು ಸ್ಥಾಯಿ ಸಮಿತಿಗೆ ತರಲು ಸಂಬಂಧಿಸಿದ ಅಧಿಕಾರಿಗೆ ನಿರ್ದೇಶನ ಕೊಟ್ಟವರು ಯಾರು ? ಎನ್ನುವ ಪ್ರಶ್ನೆ ಆಡಳಿತ ಪಕ್ಷದವರನ್ನು ಕಾಡುತ್ತಿದೆ.

ಹೀಗಾಗಿ ಇಂದು ನಡೆದ ಸಭೆಯಲ್ಲಿ ಪಿಕೆಗಳ ನೇಮಕದಲ್ಲಿ ಮೇಯರ್ ತಪ್ಪಿಲ್ಲ ಎನ್ನುವುದು ಸ್ಪಷ್ಡವಾಯಿತು.

ಆದರೆ ಈ ಪ್ರಕರಣ ಹೊರಬಂದಾಗಿನಿಂದ ಆಡಳಿತ ಬಿಜೆಪಿ ವರ್ಚಸ್ಸಿಗೆ ಧಕ್ಕೆ ಬಂದಿರುವುದಂತೂ ಸತ್ಯ.

ಈ ಹಿನ್ನೆಲೆಯಲ್ಲಿ ಶಾಸಕ ಅಭಯ ಪಾಟೀಲ ಮತ್ತು ಉತ್ತರ ಕ್ಷೇತ್ರದ ಮಾಜಿ ಶಾಸಕ ಅನಿಲ ಬೆನಕೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ‌ . ಅಷ್ಟೇ ಅಷ್ಟೇ ಅಲ್ಲ ಅನಗತ್ಯವಾಗಿ ಪಿಕೆಗಳ ನೇಮಕ ವಿಷಯದಲ್ಲಿ ಗೊಂದಲ ಸೃಷ್ಟಿಸಿ ಪಕ್ಷದ ಚರ್ಚಸ್ದಿಗೆ ಧಕ್ಕೆ ತಂದವರ ವಿರುದ್ಧ ಶಿಸ್ತು ಕ್ರಮದ ಬಗ್ಗೆ ಚಿಂತನೆ ನಡೆಸಿದ್ದಾರೆ‌.

ಬೇರೆ ಸಮಿತಿಗಳಲ್ಲಿ ಅನಗತ್ಯ ಹಸ್ತಕ್ಷೇಪ ಸರಿಯೇ?

ಮಹಾನಗರ ಪಾಲಿಕೆಯಲ್ಲಿ ರಚಿಸಲಾಗಿರುವ ಸ್ಥಾಯಿ ಸಮಿತಿಗಳಲ್ಲಿ‌ ಸಮರ್ಥರನ್ನು ನೇಮಕ ಮಾಡಲಾಗಿದೆ. ಆದರೆ ಆ ಕಮಿಟಿಯವರಿಗೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸಲು ಪಕ್ಷದಲ್ಲಿನ ಕೆಲ ವಿಘ್ನ ಸಂತೋಷಿಗಳು ಬಿಡುತ್ತಿಲ್ಲ . ಈಗ ಅದು ಚರ್ಚೆಗೆ ಗ್ರಾಸವಾಗಿದೆ.

ಒಂದು ಸ್ಥಾಯಿ ಸಮಿತಿಯ ಪ್ರಮುಖರ ಎನಿಸಿಕೊಂಡವರು ಪ್ರತಿಯೊಂದು ಸ್ಥಾಯಿ ಸಮಿತಿಗೆ ಹೋಗಿ ಮೂಗುತೂರಿಸುವ ಕೆಲಸ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎನ್ನುವ ದೂರು ಶಾಸಕರ ಕಿವಿಗೆ ಅಪ್ಪಳಿಸಿದೆ.

ನಿಯಮಾನುಸಾರ ಆಯಾ ಸ್ಥಾಯಿ ಸಮಿತಿಗೆ ಆಯಾ ಸದಸ್ಯರು, ಮೇಯರ್, ಉಪಮೇಯರ್ ಮತ್ತು ಆಡಳಿತ ಪಕ್ಷದ ನಾಯಕರು ಹೋಗಬಹುದು. ಆದರೆ ಇಲ್ಲಿ ಎಲ್ಲ‌ ನಗರಸೇವಕರು ಪ್ರತಿಯೊಂದು ಸಭೆಗೆ ಹೋಗುತ್ತಿದ್ದಾರೆ. ಹೀಗಾಗಿ ಆ ಸಭೆಗಳು ತನ್ನ ಮಹತ್ವವನ್ನು ಕಳೆದುಕೊಂಡಿವೆ.. ಅಷ್ಟೇ ಅಲ್ಲ ಅಲ್ಲಿ ಹಾಜರಾದವರು ಅನಗತ್ಯ ವಿವಾದ‌ ಸೃಷ್ಟಿಸುವ ಕೆಲಸ ಮಾಡುತ್ತಿರುವುದು ಹೊಸ ತಲೆನೋವಾಗಿ ಪರಿಣಮಿಸಿದೆ.

ಈ ಹಿನ್ನೆಲೆಯಲ್ಲಿ ಶಾಸಕ ಅಭಯ ಪಾಟೀಲರು ಅಂತಹ ಕಿರಿಕ್ ಗಳಿಗೆ ಪಾಠ ಕಲಿಸಬೇಕಾದ‌ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಪಕ್ಷದ ವರ್ಚಸ್ದಿಗೆ ಪೆಟ್ಟು ಬೀಳುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ, ಬಿಜೆಪಿಯಲ್ಲಿಯೇ ಕೆಲ ನಗರಸೇವಕರು ಔತಣ ಕೂಟದ ನೆಪದಲ್ಲಿ ಗುಂಪುಗಾರಿಕೆ ನಡೆಸಿದ್ದು ಹೊಸ ಬೆಳವಣಿಗೆಯಾಗಿದೆ.

Leave a Reply

Your email address will not be published. Required fields are marked *

error: Content is protected !!