ನಗರ ಸೇವಕರ ಭರ್ಜರಿ ಸ್ಟೆಪ್ಸ್..!
ಶಾಸಕರ ಕುಟುಂಬ ಸಹ ದಾಂಡಿಯಾದಲ್ಲಿ ಭಾಗಿ.
ರಾಣಿ ಚೆನ್ನಮ್ಮ ನಗರದಲ್ಲಿ ಹೆಚ್ಚುತ್ತಿರುವ ಜನ. ಅಚ್ಚುಕಟ್ಟಾದ ವ್ಯವಸ್ಥೆ.
ಬೆಳಗಾವಿ
ನವರಾತ್ರಿ ಸಂದರ್ಭದಲ್ಲಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಆಯೋಜನೆ ಮಾಡಿದ ದಾಂಡಿಯಾಗೆ ಭರಪೂರ ರಿಸ್ಪಾನ್ಸ್ ಸಿಗುತ್ತಿದೆ.

ಬೆಳಗಾವಿ ದಕ್ಷಿಣ ಕ್ಷೇತ್ರ ಅಷ್ಟೇ ಅಲ ಸಲ್ಲ ಉತ್ತರ, ಗ್ರಾಮೀಣ ಕ್ಷೇತ್ರದ ಜನ ಕೂಡ ಇಲ್ಲಿ ಬರುತ್ತಿದ್ದಾರೆ. ಹೀಗಾಗಿ ದಿನ ಕಳೆದಂತೆ ದಟ್ಟನೆ ಹೆಚ್ಚಾಗುತ್ತಿದೆ.

ರಾಣಿ ಚನ್ನಮ್ಮ ನಗರದಲ್ಲಿರುವ ವಿಶಾಲವಾದ ಮೈದಾನದಲ್ಲಿ ಅಭಯ ಪಾಟೀಲರು ದಾಂಡಿಯಾವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದಾರೆ.

ಗುರುವಾರ ಸಂಜೆ ಶಾಸಕರ ಪತ್ನಿ ಸೇರಿದಂತೆ ಕುಟುಂಬ ದಾಂಡಿಯಾದಲ್ಲಿ ಮಗ್ನವಾಗಿತ್ತು. ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ನಗರಸೇವಕಿಯರು ದಾಂಡಿಯಾದಲ್ಲಿ ಭಾಗವಹಿಸಿದ್ದರು.