ಇಲ್ಲಿ ಜಾತಿ ಸಂಬಂಧವೇ ಇಲ್ಲ ಎಂದ ಸತೀಶ್,
ಅಭಯ ವಿರುದ್ಧ ದಲಿತಾಸ್ತ್ರ, ಸತೀಶ ವಿರುದ್ಧ ಮರಾಠಾಸ್ತ್ರ,
ಸಚಿವರ ವಿರುದ್ಧವೇ ರಾಜ್ಯಪಾಲರಿಗೆ ಪತ್ರ ಬರೆದ ಮೇಯರ್.
ವಿರೋಧ ಪಕ್ಷಕ್ಕೆ ಮೇಯರ್ ಪತ್ರ ಕಾಣೆ ಬಗ್ಗೆ ಹೇಳಿದ್ದು ಯಾರು?.
138 ಪಿಕೆ ನೇಮಕ ವಿರುದ್ಧ ಕ್ರಮ ಎಂದ ಸಚಿವರು
(ಇ ಬೆಳಗಾವಿ ವಿಶೇಷ)
ಬೆಳಗಾವಿ.
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಭಿವೃದ್ಧಿ ಬದಲು ಈಗ ವಿವಾದಾಸ್ಪದ ವಿಷಯವೇ ಹೆಚ್ಚು ಚರ್ಚೆ ಆಗುತ್ತಿದೆ,
ಹಿಂದೆ ಕನ್ನಡ, ಮರಾಠಿ ವಿವಾದ ನಡೆಯುತ್ತಿತ್ತು, ಈಗ ಬಿಜೆಪಿ- ಕಾಂಗ್ರೆಸ್ ವಾದ ವಿವಾದ ಮುನ್ನೆಲೆಗೆ ಬರುತ್ತಿದೆ,
ಇಲ್ಲಿ ಯಾವೊಂದು ವಾರ್ಡಗಳಿಗೆ ಅನುದಾನ ಬರುತ್ತಿಲ್ಲ. ಸಭೆಯಲ್ಲಿ ಸರಿಯಾಗಿ ಅಭಿವೃದ್ಧಿ ವಿಷಯಗಳೇ ಚರ್ಚೆಗೆ ಬರುತ್ತಿಲ್ಲ. ಬರೀ ವಾದ ವಿವಾದ ಅಷ್ಟೇ ನಡೆಯುತ್ತಿದೆ.
ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದ ಸೇಡು ತೀರಿಸಿಕೊಳ್ಳುವ ಕಸರತ್ತನ್ನು ವಿರೋಧ ಪಕ್ಷದವರು ಮಾಡುತ್ತಲೇ ಇದ್ದಾರೆ, ವಾರ್ಡಗಳಿಗೆ ಸರಿಯಾಗಿ ಅನುದಾನ ಬರುತ್ತಿಲ್ಲ ಎನ್ನುವ ಅಸಮಾಧಾನ ಎಲ್ಲ ನಗರಸೇವಕರಲ್ಲಿದೆ.
ವಾದ ಪ್ರತಿವಾದ..
ವಿರೋಧ ಪಕ್ಷದವರು ಗೊತ್ತುವಳಿಗೆ ಸಹಿ ಮಾಡಿದ ಮೇಯರ್ ಪತ್ರ ಎಲ್ಲಿದೆ ? ಜೊತೆಗೆ 138 ಪಿಜೆಗಳ ಅಕ್ರಮ ನೇಮಕದಲ್ಲಾದ ಭ್ರಷ್ಟಾಚಾರ ದ ಬಗ್ಗೆ ತನಿಖೆಗೆ ಪಟ್ಟು ಹಿಡಿದಿದ್ದಾರೆ.

ಆದರೆ ಆಡಳಿತ ಪಕ್ಷದವರು ಆಸ್ತಿ ತೆರಿಗೆ ಪರಿಷ್ಕರಣೆಯಲ್ಲಿ ಕೌನ್ಸಿಲ್ ಗೊತ್ತುವಳಿಯನ್ನು ಯಾವ ಕಾರಣದಿಂದ ಆಯುಕ್ತರು ತಿದ್ದುಪಡಿ ಮಾಡಿದರು ಎನ್ನುವುದನ್ನು ಹೇಳಿದರೆ ಖೇಲ್ ಖತಂ ಎನ್ನುತ್ತಿದ್ದಾರೆ.
ಆದರೆ ಎರಡೂ ಕಡೆಯಿಂದ ಸ್ಪಷ್ಟ ಉತ್ತರ ಬರುತ್ತಿಲ್ಲ. ಮೇಲಾಗಿ ಈ ವಿವಾದ ಈಗ ಜಾತಿ ಸ್ವರೂಪ ಪಡೆದುಕೊಂಡಿದೆ.

ಶಾಸಕ ಅಭಯ ಪಾಟೀಲರ ವಿರುದ್ಧ ದಲಿತ ಅಸ್ತ್ರ ಪ್ರಯೋಗ ಮಾಡಲಾಗಿದೆ. ಬಿಜೆಪಿಯವರು ಇದಕ್ಕೆ ಕೌಂಟರ್ ಎನ್ನುವಂತೆ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಮರಾಠಾ ಅಸ್ತ್ರ ಪ್ರಯೋಗಿಸಿದ್ದಾರೆ. ಈ ಬಗ್ಗೆ ಅನೇಕ ಮರಾಠಾ ಸಮಾಜದವರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅದು ವೈರಲ್ ಕೂಡ ಆಗುತ್ತಿದೆ

ಪತ್ರ ನಾಪತ್ತೆ ವಿವಾದ ಸೃಷ್ಟಿ?
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮೇಯರ್ ಪತ್ರ ಕಾಣೆಯಾಗಿದೆ ಎಂದು ಸುದ್ದಿ ಹಬ್ಬಿಸಿ ವಿರೋಧ ಪಕ್ಷಗಳ ಕೈಗೆ ಅಸ್ತ್ರ ಕೊಟ್ಟವರು ಯಾರು?
ಸಚಿವ ಸತೀಶ ಜಾರಕಿಹೊಳಿ ಮತ್ತು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲರ ನಡುವೆ ರಾಜಕೀಯ ಸಂಘರ್ಷಕ್ಕೆ ಕಾರಣವಾದ ಈ ವಿಷಯದ ಬಗ್ಗೆ ಆಡಳಿತ ಅಷ್ಟೇ ಅಲ್ಲ ವಿರೋಧ ಪಕ್ಷದವರೂ ತೆಲೆ ಬಿಸಿಮಾಡಿಕೊಂಡಿದ್ದಾರೆ.

ಹೀಗಾಗಿ ಕಳೆದ ದಿ.21 ರಂದು ನಡೆದ ಘಟನಾವಳಿಗಳನ್ನು ಮೆಲುಕು ಹಾಕುತ್ತ ಹೊರಟರೆ ಅನೇಕ ರೋಚಕ ಕಹಾನಿಗಳು ಕಿವಿಗೆ ಅಪ್ಪಳಿಸುತ್ತವೆ, ಇಲ್ಲಿ ಎಲ್ಲರೂ ಅಂದುಕೊಂಡಂತೆ ಮೇಯರ್ ಪತ್ರ ಕಾಣೆಯಾಗಿದ್ದರೆ, ದಿ., 21 ರಂದು ಸಭೆ ಆರಂಭದಲ್ಲಿಯೇ ವಿರೋಧ ಪಕ್ಷದವರು ಇದನ್ನು ಪ್ರಸ್ತಾಪ ಮಾಡುತ್ತಿದ್ದರು, ಆದರೆ ಎಲ್ಲಿಯೂ ಈ ವಿಷಯ ಪ್ರಸ್ತಾಪ ಆಗಲಿಲ್ಲ. ಬದಲಾಗಿ ಮೇಯರ್ ಆ ಪತ್ರಕ್ಕೆ ಸಹಿ ಮಾಡಿದ್ದಾರೊ ಇಲ್ಲವೊ ಎನ್ನುವ ವಿಷಯದ ಬಗ್ಗೆ ಚರ್ಚೆ ಆಗಿತ್ತು,
ಆದರೆ ಹತ್ತು ನಿಮಿಷಗಳ ಕಾಲ ಮುಂದೂಡಿದ ಸಭೆ ಆರಂಭಗೊಂಡ ನಂತರ ವಿರೋಧ ಪಕ್ಷದ ನಾಯಕ ಅಜೀಮ್ ಪಟವೇಗಾರ ಅವರು ಮೇಯರ್ ಪತ್ರ ಕಾಣೆಯಾಗಿದ್ದರ ಬಗ್ಗೆ ಪ್ರಸ್ತಾಪ ಮಾಡಿದರು, ಅಂದರೆ ಇಲ್ಲಿ ವಿರಾಮದ ಸಂದರ್ಭದಲ್ಲಿಯೇ ವಿರೋಧ ಪಕ್ಷದ ನಾಯಕರ ಕೈಗೆ ಈ ಅಸ್ತ್ರವನ್ನು ತಲುಪಿಸಲಾಗಿದೆ ಎನ್ನುವುದು ಸ್ಪಷ್ಟ.
ಗಮನಿಸಬೇಕಾದ ಸಂಗತಿ ಎಂದರೆ, ಮೇಯರ್ ಆ ಪತ್ರಕ್ಕೆ ಸಹಿ ಮಾಡಿದ್ದಾರೋ ಅಥವಾ ಇಲ್ಲವೋ ಎನ್ನುವುದನ್ನು ಖುದ್ದು ಅವರೇ ಸ್ಪಷ್ಟಪಡಿಸಬೇಕು. ಆದರೆ ಅದೆಲ್ಲಾ ಚರ್ಚೆಯ ಹಂತದಲ್ಲಿರುವಾಗಲೇ
‘ನೋಡ್ ಒರಿಜಿನಲ್ ಹೇಂಗ್ ಗಾಯಬ್ ಮಾಡೇವಿ ಅದನ್. ಎಂದು ವಿರೋಧ ಪಕ್ಷದವರಿಗೆ ಹೇಳಿದ್ದು ಈ ಎಲ್ಲ ವಿವಾದಕ್ಕೆ ಕಾರಣವಾಯಿತು ಎಂದು ಹೇಳಲಾಗಿದೆ..
ಇನ್ನು 138 ಪಿಕೆಗಳ ಅಕ್ರಮ ನೇಮಕದ ಬಗ್ಗೆಯೂ ಸಚಿವ ಸತೀಶ ಜಾರಕಿಹೊಳಿ ಪ್ರಸ್ತಾಪ ಮಾಡಿದರು, ಇದರ ಬಗ್ಗೆ ಬಿಜೆಪಿಗರೇ ತನಿಖೆ ಮಾಡಿಸಿ ಎಂದು ಮುಕ್ತವಾಗಿ ಸಭೆಯಲ್ಲಿ ಹಲವು ಬಾರಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು,