2047ಕ್ಕೆ ಭಾರತ ವಿಶ್ವಗುರು..!

ಬೆಳಗಾವಿ.

ಭಾರತ ವಿಶ್ವಗುರುವಾಗಲು ಹಿಂದೂ ಸಮಾಜದ ಹೆಗ್ಗುರುತುಗಳು ಭರವಸೆ ಮೂಡಿಸುತ್ತಿವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ಹೇಳಿದರು

RSS ಪಥ ಸಂಚಲನ ನಂತರ ಲಿಂಗರಾಜ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮುಂಬರುವ 2047ರ ಹೊತ್ತಿಗೆ ಭಾರತ ದೇಶ ವಿಶ್ವಗುರುವಾಗಲಿದೆ ಎಂದು ದೇಶದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ, 2047ರ ಹೊತ್ತಿಗೆ ಭಾರತವನ್ನು ಇಸ್ಲಾಂಮಿಕ್ ರಾಷ್ಟ್ರ ಮಾಡುತ್ತೇವೆ ಎಂದು ಪಾಪ್ಯೂಲರ್ ಪ್ರಂಟ್ನವರು ಹೇಳಿಕೆ ನೀಡಿದ್ದಾರೆ.

ಭಗವಂತ ಯಾರಿಗೆ ಆಶೀರ್ವಾದ ಮಾಡುತ್ತಾನೆ ನೋಡೋಣ. ಭಾರತ ವಿಶ್ವಗುರುವಾಗಲಿ. ಅದು ನಮ್ಮ ನಿಮ್ಮೆಲ್ಲರ ಸದಾಶಯವೂ ಕೂಡ. ಇದಕ್ಕೆ ಪೂರಕವಾದಂತೆ ಸರ್ವ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಭಾರತದಲ್ಲಿ ಹಿಂದೂ ಸಮಾಜದ ಹೆಜ್ಜೆಗುರುತುಗಳು ಭರವಸೆಯನ್ನು ಮೂಡಿಸುತ್ತಿವೆ ಎಂದು ವಿಶ್ವಾಸ ವ್ಯಕ್ತಪಡಿದರು.

ಸಮೃದ್ಧಿ, ಸುರಕ್ಷೆ, ಸಾಮರಸ್ಯ ಅಗತ್ಯ…

ದೇಶದ ಅಖಂಡತೆಗೆ ಶಕ್ತಿಯ ಮೂರು ಪ್ರಮುಖ ಸಂಗತಿಗಳಾದ ಸಮೃದ್ಧಿ, ಸುರಕ್ಷೆ ಮತ್ತು ಸಾಮರಸ್ಯ ಅಗತ್ಯವಾಗಿದೆ ಎಂದು ರವೀಂದ್ರ ಪ್ತಿರಪಾದಿಸಿದರು.
ದೇಶಕ್ಕೆ ಸೈನ್ಯ ಶಕ್ತಿ, ರಾಜ ಶಕ್ತಿ ಹಾಗೂ ಲೋಕಶಕ್ತಿಯೂ ಕೂಡ ಅಷ್ಟೇ ಮುಖ್ಯವಾಗಿದೆ. ಆದರೆ, ಆರ್ ಎಸ್ ಎಸ್ ಲೋಕಶಕ್ತಿಯ ಕ್ಷೇತ್ರದಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡಿದೆ. ಶಕ್ತಿಯ ಆರಾಧನೆಯ ಜೊತೆಗೆ ಯೋಗ್ಯವಾದ ನಡವಳಿಕೆಯನ್ನು ಸ್ಥಾಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.


ಜೆಎಸ್ ಎಸ್ ಪದವಿ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಬಿ.ಎಲ್.ಮಜುಕರ್ ಮುಖ್ಯಅತಿಥಿಗಳಾಗಿ ಆಗಮಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಕೃಷ್ಣಾನಂದ ಕಾಮತ, ಅಶೋಕ ಶಿಂತ್ರೆ, ದಿಲೀಪ್ ವೇರ್ಣೇಕರ್, ಪರಮೇಶ್ವರ ಹೆಗಡೆ, ಕೃಷ್ಣಾ ಭಟ್ ಸೇರಿದಂತೆ ಸುಮಾರು 2000ಕ್ಕೂ ಅಧಿಕ ಆರ್ ಎಸ್ ಎಸ್ ಸ್ವಯಂ ಸೇವಕರು ಪಾಲ್ಗೊಂಡಿದ್ದರು. ನಗರ ಕಾರ್ಯವಾಹಗಳಾದ ಶಿವಾನಂದ ನಾರೋಟಿ ಸ್ವಾಗತಿಸಿದರು. ನಗರ ಸಹಕಾರ್ಯವಾಹ ರಮೇಶ ಧೋತ್ರೆ ವಂದಿಸಿದರು. ಉಪನ್ಯಾಸಕರಾದ ಶುಭಂ ಕಾರ್ಯಕ್ರಮ ನಿರೂಪಿಸಿದರು.

ಶಿಸ್ತುಬದ್ಧ ಪಥಸಂಚಲನ

ಬೆಳಗಾವಿ: ವಿಜಯದಶಮಿ ನಿಮಿತ್ತ ನಗರದಲ್ಲಿ ರವಿವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಶಿಸ್ತುಬದ್ಧ ಈ ಪಥಸಂಚಲನ ಪ್ರತಿಯೊಬ್ಬರಲ್ಲಿಯೂ ರಾಷ್ಟ್ರಾಭಿಮಾನವನ್ನು ಜಾಗೃತಗೊಳಿಸುವಲ್ಲಿ ಯಶಸ್ವಿಯಾಯಿತು.
ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ಬಳಿಯ ಸರ್ದಾರ್ ಮೈದಾನದಿಂದ ಸಂಜೆ ಆರಂಭಗೊಂಡ ಪಥ ಸಂಚಲನ ಚೆನ್ನಮ್ಮ ಸರ್ಕಲ್, ಕಾಕತಿವೇಸ್, ಶನಿವಾರ ಖೂಟ, ಗಣಪತಿ ಗಲ್ಲಿ, ನರಗುಂದಕರ ಭಾವೆ ವೃತ್ತ, ಶನಿಮಂದಿರ ರಸ್ತೆ, ಅನಂತಶಯನ ಗಲ್ಲಿ, ಟಿಳಕ್ ಚೌಕ್, ರಾಮಲಿಂಗಖಿಂಡ ಗಲ್ಲಿ, ಕಾಲೇಜು ರಸ್ತೆ ಮೂಲಕ ಲಿಂಗರಾಜು ಕಾಲೇಜ್ ಮೈದಾನದಲ್ಲಿ ಸಮಾರೋಪಗೊಂಡಿತು

ಸುಮಾರು ಎರಡು ಸಾವಿರಕ್ಕೂ ಅಧಿಕ ಗಣವೇಷಧಾರಿಗಳು ಪಾಲ್ಗೊಂಡಿದ್ದ ಈ ಪಥಸಂಚಲನ ದೇಶಾಭಿಮಾನ ಮೂಡಿಸುವಲ್ಲಿ ಯಶಸ್ವಿಯಾಯಿತು. ಪಥಸಂಚಲನ ಸಾಗುವ ರಸ್ತೆಗಳಲ್ಲಿ ರಂಗೋಲಿ ಬಿಡಿಸಿ ಸ್ವಾಗತ ಕೋರಲಾಯಿತು. ಕೆಲವು ಪ್ರಮುಖ ಸ್ಥಳಗಳಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ ನೆರದಿದ್ದ ಸಾರ್ವಜನಿಕರು ಗಣವೇಷಧಾರಿಗಳ ಮೇಲೆ ಪುಷ್ಪಾರ್ಚಣೆಗೈದು ಸಂಭ್ರಮಿಸಿದರು.
ಗಲ್ಲಿ ಗಲ್ಲಿಗಳಲ್ಲಿ ಪಥಸಂಚಲನ ಸಾಗುತ್ತಿದ್ದಂತೆಯೇ ಭಾರತ ಮಾತಾಕಿ ಜೈಕಾರಗಳು ಮುಗಿಲಮುಟ್ಟಿದ್ದವು. ಅಲ್ಲಲ್ಲಿ, ಚಿಕ್ಕ ಚಿಕ್ಕ ಮಕ್ಕಳನ್ನು ಮಹಾಪುರುಷರ ವೇಷದಲ್ಲಿ ಸಜ್ಜುಗೊಳಿಸಿದ್ದು ಗಮನ ಸೆಳೆಯಿತು

Leave a Reply

Your email address will not be published. Required fields are marked *

error: Content is protected !!