ಬೆಳಗಾವಿ.
ಉಳಿದ ವಿಷಯ ಏನೇ ಇರಲಿ. ಬೆಳಗಾವಿ ರಾಜ್ಯೋತ್ಸವ ಆಚರಣೆ ವಿಚಾರದಲ್ಲಿ ಬೆಳಗಾವಿ ಅಧಿಕಾರಿಗಳು ಪಟ್ಟ ಶ್ರಮಕ್ಕೊಂದು ‘ಸಲಾಂ’ ಹೇಳಲೇಬೇಕು.

ಇಡೀ ರಾಜ್ಯದ ಕನ್ನಡಿಗರು ಬೆಳಗಾವಿ ರಾಜ್ಯೋತ್ಸವ ದತ್ತ ತಿರುಗಿ ನೋಡುವ ಹಾಗೆ ಮಾಡಿದ್ದಾರೆ.. ಹೀಗಾಗಿ ಬೆಳಗಾವಿಯಲ್ಲಿ ಒಂದು ದಿನ ಮುಂಚಿತವಾಗಿಯೇ ರಾತ್ರಿ ಹೊತ್ತು ಕನ್ನಡ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ಸರ್ಕಾರ ರಾಜ್ಯೋತ್ಸವಕ್ಕೆ ಅನುದಾನ ಕೊಡುತ್ತೋ ಅಥವಾ ಬಿಡುತ್ತೋ ಎರಡನೇ ಮಾತು. ಆದರೆ ಅಧಿಕಾರಿಗಳು ರಾಜ್ಯೋತ್ಸವ ಆಚರಣೆಗೆ ವಿಶೇಷ ಮರೆಗು ಕೊಟ್ಟಿದ್ದನ್ನು ಗಮನಿಸಿದರೆ ವಾವ್ ಎನ್ನದೇ ಎರಡು ಮಾತಿಲ್ಲ.

ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಈ ನಿಟ್ಡಿನಲ್ಲಿ ರಾತ್ರಿ ಹಗಲೆನ್ನದೇ ಶ್ರಮಿಸಿದ್ದಾರೆ. ಇವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ವಿದ್ಯಾವತಿ ಭಜಂತ್ರಿ ಅವರು ಸಾಥ್ ನೀಡಿದ್ದಾರೆ. ಇದೊಂದು ರೀತಿಯಲ್ಲಿ ಟೀಂ ವರ್ಕ. ಆ,ರೀತಿ ಕೆಲಸ ಮಾಡುವಲ್ಲಿ ಡಿಸಿ ನಿತೇಶ ಪಾಟೀಲ ಮತ್ತು ಆಯುಕ್ತ ಅಶೋಕ ದುಡಗುಂಟಿ ಯಶಸ್ವಿಯಾಗಿದ್ದಾರೆ

ಇದೆಲ್ಲದರ ಪರಿಣಾಮ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ತಡರಾತ್ರಿ ಆದರೂ ಕೂಡ ಕನ್ನಡಿಗರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಇನ್ನೂ ಕೆಲವರು ರಸ್ತೆ ಪಕ್ಕ ವೇದಿಕೆ ನಿರ್ಮಿಸುವಲ್ಲಿ ಮಗ್ನರಾಗಿದ್ದರು. ಕನ್ನಡ ಹಾಡುಗಳು ಸದ್ದು ಮಾಡತೊಡಗಿದ್ದವು. ಈ ಕನ್ನಡದ ಹಬ್ಬವನ್ನು ಕಣ್ತುಂಬಿಕೊಳ್ಳಲು ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರು ಚನ್ನಮ್ಮ ವೃತ್ತಕ್ಕೆ ಆಗಮಿಸಿದ್ದರು.
ಇನ್ನು ಪೊಲೀಸ್ ಆಯುಕ್ತ ಸಿದ್ರಾಮಪ್ಪ ಅವರು ಈ ಹಬ್ಬಕ್ಕೆ ಯಾರದ್ದೂ ಕೆಟ್ಡ ಕಣ್ಣು ಬೀಳದ ಹಾಗೆ ವ್ಯವಸ್ಥೆ ಮಾಡಿದ್ದಾರೆ . ಡಿಸಿಪಿ, ಎಸಿಪಿ, ಸಿಪಿಐಗಳ ಜತೆಗೆ ಹೊರಗಿನ ಸಿಬ್ಬಂದಿಗಳು ಬಂದೋಬಸ್ತಿಗೆ ಬಂದಿದ್ದಾರೆ.
