
ಬೆಳಗಾವಿಯಲ್ಲಿ ಸರ್ಕಾರಿ ಜಾತ್ರೆ
ಡಿಸೆಂಬರ 4 ರಿಂದ 15 ರವರೆಗೆ ಅಧಿವೇಶನ. ಒಲ್ಲದ ಮನಸ್ಸಿನಿಂದ ಅಧಿವೇಶನಕ್ಕೆ ರೆಡಿಯಾದ ಸರ್ಕಾರ. ಅಧಿವೇಶನಕ್ಕೆ 20 ಕೋಟಿ ವೆಚ್ಚ. ಹೈರಾಣಾಗುತ್ತಿರುವ ಬೆಳಗಾವಿ ಅಧಿಕಾರಿಗಳು. ಬೆಳಗಾವಿ. ಗಡಿನಾಡ ಬೆಳಗಾವಿ ಮತ್ತೇ ಬರೊಬ್ಬರಿ ಹತ್ತು ದಿನಗಳ ಸರ್ಕಾರಿ ಜಾತ್ರೆಗೆ ಸಜ್ಜಾಗುತ್ತಿದೆ. ಈ ಜಾತ್ರೆಗೆ ಬರುವ ಭಕ್ತರಿಗೆ ವಸತಿ, ಊಟೋಪಚಾರದ ವ್ಯವಸ್ಥೆಯ ಬಗ್ಗೆ ಅರ್ಚಕರು ತಲೆಬಿಸಿ ಮಾಡಿಕೊಂಡಿದ್ದಾರೆ. ಇಲ್ಲಿ ಏನಾದರೂ ಹೆಚ್ಚುಕಡಿಮೆ ಆಗಿ ದೊಡ್ಡ ಮತ್ತು ಸಣ್ಣ ಸಣ್ಣ’ದೇವರು’ ಮುನಿಸಿಕೊಂಡರೆ ಅರ್ಚಕರ ನೌಕರಿ ಖತಂ. ಅಂದ ಹಾಗೆ ಈ ಹತ್ತು…