
ಬೆಳಗಾವಿ ಕುಣಿಸುತ್ತಿರುವ BAR ಗಳು
ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಬಾರ್ ರೆಸ್ಟೋರೆಂಟ್, ವೈನ್ ಶಾಪ್ ಗಳು ಹೇಳಿದಂತೆ ಅಬಕಾರಿ ಮತ್ತು ಪೊಲೀಸ್ ಇಲಾಖೆಯವರು ಕೇಳುತ್ತಾರೋ ಅಥವಾ ಇವರು ಹೇಳಿದಂತೆ ಅವರು ಕೇಳುತ್ತಾರೋ? ಸಹಜವಾಗಿ ಇಂತಹುದೊಂದು ಪ್ರಶ್ನೆ ಬೆಳಗಾವಿಗರನ್ನು ಅಷ್ಟೇ ಅಲ್ಲ ರಾಜ್ಯದ ಜನರನ್ನು ಕಾಡುತ್ತಿದೆ.ಆದರೆ ಇದಕ್ಕೆಲ್ಲ ಸ್ಪಷ್ಟ ಉತ್ತರ ಕೊಡಬೇಕಾದವರು ಜಾಣ ಕಿವುಡತನ ತೋರಿದ್ದು ಪರಿಸ್ಥಿಗೆ ಹಿಡಿದ ಕೈಗನ್ನಡಿ. ಬೆಳಗಾವಿಯ ವಾಸ್ತವತೆಯನ್ನು ಗಮನಿಸಿದರೆ, ಇಲ್ಲಿ ಮದ್ಯದ ಅಂಗಡಿಗಳು, ರೆಸ್ಟೋರೆಂಟ್ ಗಳು ಹೇಳಿದಂತೆ ಅದರ ಮೇಲೆ ನಿಯಂತ್ರಣ ಹೊಂದಿದ ಅಬಕಾರಿ ಮತ್ತು ಪೊಲೀಸ್ ಇಲಾಖೆಯವರು…