Headlines

ಪಾಲಿಕೆಯಲ್ಲಿ ತಿಳಿದವರ ತಪ್ಪುಗಳು..!

ಪಾಲಿಕೆ ಬಿಜಿಪಿ ಹಿಡಿತ ತಪ್ಪಿಸಲು ಕಾಂಗ್ರೆಸ್ ಮತ್ತೇ ಸ್ಕೆಚ್.

ಅಧಿವೇಶನ ಸಂದರ್ಭದಲ್ಲಿಯೇ ಮುಹೂರ್ತ ಫಿಕ್ಸ್ ಮಾಡಿತಾ ಕಾಂಗ್ರೆಸ್.?

ಶಾಸಕ ಅಭಯ ಪಾಟೀಲ ಮಧ್ಯಪ್ರವೇಶದಿಂದ ತಪ್ಪಿದ ಸೂಪರ್ ಸೀಡ್. ಹೀಗಾಗಿ ಎರಡನೇ ಹಂತದ ಹೋರಾಟಕ್ಕೆ ಸಜ್ಜಾದ ಕಾಂಗ್ರೆಸ್.

ಬಿಜಿಪಿಯಲ್ಲಿ ‘ತಿಳಿದವರ’ ತಪ್ಪುಗಳೇ ಕಂಟಕವಾಗುವ ಸಾಧ್ಯತೆ..

ಬಿಜೆಪಿಯನ್ನು ಖೆಡ್ಡಾಕ್ಕೆ ಕೆಡವಲು ರೆಡಿಯಾದ ಕಾಂಗ್ರೆಸ್ ನೇತೃತ್ವದ ರಹಸ್ಯ ತಂಡ.

ಪ್ರತಿ ಹಂತದಲ್ಲೂ ತಪ್ಪು ಹುಡುಕುತ್ತಿರುವ ಪೌರಾಡಳುತ ಇಲಾಖೆ. ಸ್ಥಾಯಿ ಸಮಿತಿಯಲ್ಲೂ‌ ನಡೆಯದ ನಿಯಮಾವಳಿಗಳು

ಬೆಳಗಾವಿ.

ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಕೆಲವೇ ಕೆಲ ನಗರಸೇವಕರ ‘ತಿಳಿದವರ’ ತಪ್ಪುಗಳು ಮುಂದೊಂದು ದಿನ‌ ದೊಡ್ಡ ಮಟ್ಟದ ಆಪತ್ತು ತಂದಿಡುವ ಎಲ್ಲ ಲಕ್ಷಣಗಳು ಕಾಣಸಿಗುತ್ತಿವೆ.

ಇಲ್ಲಿ ಮೊದಲ ಸಲ ಪಾಲಿಕೆಯ ಮೆಟ್ಟಿಲು ಹತ್ತಿದವರು ತಿಳಿಯದೇ ತಪ್ಪು ಮಾಡಿದ್ದರೆ ಹೋಗಲಿ ಬಿಡು ಅನಬಹುದಿತ್ತು. ಆದರೆ ತಿಳಿದವರೇ ಉದ್ದೇಶಪೂರ್ವಕವಾಗಿ ಮಾಡುತ್ತಿರುವ ತಪ್ಪುಗಳು ಈಗ ವಿವಾದಕ್ಕೆ ಕಾರಣವಾಗುತ್ತಿವೆ.

ಇಲ್ಲಿ ಕೆಲವೇ ಕೆಲ‌ನಗರ ಸೇವಕರು ಶಾಸಕರ ಸೂಚನೆಯನ್ನು ಲೆಕ್ಕುಸದೇ ತಮ್ಮುಷ್ಟದಂತೆ ಹೊರಟಿದ್ದು ಬಿಜೆಪಿ ಗೆ ಮುಳುವಾಗುವ ಲಕ್ಷಣವಾಗುವ ಸಾಧ್ಯತೆಗಳಿವೆ

ಅಂದರೆ ಇಲ್ಲಿ ಆಡಳಿತ ಗುಂಪಿನ ನಾಯಕರು ಆ ಗುಂಪಿನ ಮೇಲೆ ಹಿಡಿತವನ್ನು ಕಳೆದುಕೊಂಡಿದ್ದಾರೋ ಅಥವಾ ಅವರೂ ಸಹ ಬಿಜೆಪಿಯಲ್ಲಿಯೇ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೋ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿಯೇ ಕೇಳಿ ಬರುತ್ತಿವೆ.

ಇಲ್ಲಿ ಹೇಗಾಗಿದೆ ಅಂದರೆ, ಕೆಲವೇ ಕೆಲ ನಗರಸೇವಕರ ಈ ತಪ್ಪುಗಳನ್ನು ದೀರ್ಘಕ್ಕೆ ತೆಗೆದುಕೊಂಡು ಬಿಜೆಪಿ ಹಿಡಿತದಲ್ಲಿರುವ ಪಾಕಿಕೆಯನ್ನು ಹಣಿಯುವುದು ಕಾಂಗ್ರೆಸ್ ಉದ್ದೇಶವಾಗಿದೆ.

ಕಳೆದ ಬಾರಿ ಅಂತಹ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿತ್ತು. ಆದರೆ ಸಕಾಲಕ್ಕೆ ಬಿಜೆಪಿ ಶಾಸಕ ಅಭಯ ಪಾಟೀಲರು ನೇತೃತ್ವ ವಹಿಸಿಕೊಂಡು ಅದಕ್ಕೆ ಎದಿರೇಟು ಕೊಟ್ಟಿದ್ದರಿಂದ ಬಿಜೆಪಿ‌ ನಗರಸೇವಕರು ಪಾರಾದರು

ಇಲ್ಲಿ ಅಭಯ ಪಾಟೀಲ, ಮಹಾಂತೇಶ ಕವಟಗಿಮಠ, ಅನಿಲ ಬೆನಕೆ ಮತ್ತಿತರರು ಹೆಚ್ಚಿನ‌ ಆಸಕ್ತಿ ವಹಿಸದಿದ್ದರೆ ಪಾಕಿಕೆಯ ಬಿಜೆಪಿ ಆಡಳಿತಕ್ಜೆ ಗ್ರಹಣ ಹಿಡಿಯುತ್ತಿತ್ತು.

ಇಲ್ಲಿ ಕಾಂಗ್ರೆಸ್ ದವರು ಮೊದಲ ಹಂತದಲ್ಲಿ ಫೇಲ್ ಆದರು ಅಂತ ಕೈಕಟ್ಡಿಕೊಂಡು ಸುಮ್ಮನೆ ಕುಳಿತಿಲ್ಲ. ಎರಡನೇ ಅವಕಾಶಕ್ಕೆ ಕಾಯುತ್ತಿದ್ದಾರೆ.

ಆದರೆ ಬಿಜೆಪಿಯ ಕೆಲ ಬುದ್ದಿವಂತ ನಗರಸೇವಕರು ಎಚ್ಚರಗೊಂಡಂತೆ ಕಾಣುತ್ತಿಲ್ಲ. ಬಿಜೆಪಿಯ ಆರು ಜನ ಕಮಿಟಿಯಲ್ಲಿ ನಡೆದ ಪ್ರತಿಯೊಂದು ಭೆಳವಣಿಗೆಗಳು ದಾಖಲೆ ಸಮೇತ ವಿರೋಧ ಪಕ್ಷದವರ ಕೈ ಸೇರುತ್ತಿವೆ. ಇದು ಆತಂಕಕ್ಕೆ ಕಾರಣವಾಗಿದೆ.

ಸಧ್ಯ ಬಂದಿರುವ ಮಾಹಿತಿ ಪ್ರಕಾರ ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಯೇ ಬಿಜೆಪಿ ಹಿಡಿತದಲ್ಲಿರುವ ಪಾಲಿಕೆಗೆ ಮರ್ಮಾಘಾತ ನೀಡಲು ಕಾಂಗ್ರೆಸ್ ದೊಡ್ಡ ಮಟ್ಟದ ಸ್ಕೆಚ್ ಹಾಕಿದೆ. ಅದರಲ್ಲಿ ಬಿಜೆಪಿಯ ಕೆಲ ನಗರಸೇವಕರು ಸಿಲುಕಿಕೊಂಡರೆ ಪಾರಾಗುವುದು ಕಷ್ಟ ಎನ್ನುವ ಮಾತಿದೆ. ಇದು ಹೈಕಮಾಂಡ ಮತ್ತು ಶಾಸಕರ ಕಿವಿಗೂ ಅಪ್ಪಳಿಸಿದೆಹ ಜನ

ಕಾಂಗ್ರೆಸ್ ನ ಉನ್ನತ ಮೂಲಗಳ ಪ್ರಕಾರ ಕಾಂಗ್ರೆಸ್ ಮೇಯರ್ ಪತ್ರ ಕಾಣೆ ಮತ್ತು ಪೌರ ಕಾರ್ಮಿಕರ ವಿಷಯವನ್ನು ಜೀವಙತವಿಟ್ಟಿದೆ. ಮೇಯರ್ ಪತ್ರದ ಬಗ್ಗೆ ಪೊಲೀಸ್ ವಿಚಾರಣೆ ನಡೆಯುತ್ತಿದೆ. ಇನ್ನು ಪೌರ ಕಾರ್ಮಿಕರ ಬಗ್ಗೆ ಸರ್ಕಾರ ಅವರಿಗೆ ಮಾನವೀಯತೆಯಿಂದ ಎರಡು ತಿಂಗಳ ಸಂಬಳ ಹಾಕಿದೆ. ಈ ವಿಷಯದಲ್ಲಿ ಎದ್ದಿದ್ದ ಬಿರುಗಾಳಿ ಅಭಯ ಪಾಟೀಲರ ಮಧ್ಯಸ್ಥಿಕೆ ಯಿಂದ ಅದರ ವೇಗ ಕಡಿಮೆ ಆಯಿತು ಎನ್ನಬಹುದು.ಮತ್ತೊಂದು ಮೂಲಗಳ ಪ್ರಕಾರ ಈ ವಿಷಯದಲ್ಲಿ ಹನುಮಂತ ಕಲಾದಗಿ ಮಾಡಿದ ಯಡವಟ್ಟುಗಳ ಬಗ್ಗೆ ದೊಡ್ಡ ಲೀಸ್ಟ ಕಾಂಗ್ರೆಸ್ ಬಳಿ ಇದೆ. ಅದು ಮುಂದಿನ ದಿನಗಳಲ್ಲಿ ಸ್ಪೋಟ ಆಗುವ ಸಾದ್ಯತೆಗಳನ್ನು ಅಲ್ಲಗಳೆಯಲಾಗದು.

Leave a Reply

Your email address will not be published. Required fields are marked *

error: Content is protected !!