ಸೌಧ ನಿರ್ವಹಣೆಗೆ ಶಾಶ್ವತ ಯೋಜನೆ

ಬೆಳಗಾವಿ ಸುವರ್ಣಸೌಧ ನಿರ್ವಹಣೆಗೆ ಶಾಶ್ವತ ಯೋಜನೆಗೆ ಚಿಂತನೆ

ಬೆಳಗಾವಿ,

ಸುಮಾರು‌ 450 ಕೋಟಿ ರೂ ವೆಚ್ಚದಲ್ಲಿ‌ ನಿರ್ಮಾಣವಾಗಿರುವ ಸುವರ್ಷ ಸೌಧ ನಿರ್ವಹಣೆಯೇ ಈಗ ಒಂದು‌ ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ‌

ಸರ್ಕಾರ ಈ ಸೌಧಕ್ಕೆ ಅಗತ್ಯ ಕೆಲ ಪ್ರಮುಖ ಕಚೇರಿ ಸ್ಥಳಾಂತರ ಮಾಡಿದ್ದರೆ ಹತ್ತರಲ್ಲಿ ಹನ್ನೊಂದು ಎನ್ನುವಂತೆ ಸ್ವಚ್ಚತೆ ಆಗುತ್ತಿತ್ತು.

ಆದರೆ ಪ್ರತಿ ವರ್ಷಕ್ಕೊಮ್ಮೆ ಚಳಿಗಾಲ ಅಧಿವೇಶನಕ್ಕೊಮ್ಮೆ ಹಿಂಡು ಕಟ್ಟಿಕೊಂಡು ಜಾತ್ರೆಗೆ ಬಂದಂತೆ ಸರ್ಕಾರ ಬಂದರೆ ಅದರ ನಿರ್ವಹಣೆ ಬಲು ಕಷ್ಟವೇ ಸರಿ.

ಒಂದು ರೀತಿಯಲ್ಲಿ ಸೌಧ ನಿರ್ವಹಣೆ ಅಂದರೆ ಈಗ ಬಿಳಿ ಆನೆ ಸಾಕಿದಂತಾಗಿದೆ.

ಸಹಜವಾಗಿ ವರ್ಷವೀಡಿ ಒಂದಿಷ್ಟು ಸಭೆಗಳಿಗೆ ಮಾತ್ರ ಸಿಮೀತವಾದ ಈ ಸುವರ್ಣ ವಿಧಾನಸೌಧ ಸದಾ ಕ್ರಿಯಾಶೀಲವಾಗಿರಬೇಕು ಎನ್ನುವುದು ಈ ಭಾಗದ ಜನರ ಆಶಯ. ಅಂದರೆ ಉತ್ತರ ಕರ್ನಾಟಕ ಭಾಗದ ಜನರು ಪ್ರತಿಯೊಂದು ಕೆಲಸಕ್ಕೆ ಬೆಂಗಳೂರಿನ‌ ವಿಧಾನ ಸೌಧದಲ್ಲಿರುವ ಮಙತ್ರಿಗಳ ಕಚೇರಿ ಮೆಟ್ಟಿಲು ಹತ್ತುವ ಬದಲು ಅವು ಸುವರ್ಣ ಸೌಧದಲ್ಲಿರಬೇಕು..ಜನ ಬೆಳಗಾವಿ ಸೌಧಕ್ಕೆ ಬಂದು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತಾಗಬೇಕು. ಆಗ ಸೌಧಬಕಟ್ಟಿದ್ದು ಸಾರ್ಥಕವಾಗುತ್ತದೆ ಎನ್ನುವುದು ಇಲ್ಲಿನ ಜನರ ಮಾತು.

ಆದರೆ ಈಗ ಯಾವುದೇ ಕಚೇರಿಗಳು ಬೆಂಗಳೂರು ಬಿಟ್ಡು ಬೆಳಗಾವಿ ಬರುತ್ತಿಲ್ಲ. ಇಲ್ಲಿ ಆಡಳಿತಶಾಹಿಗಳೇ ಕಚೇರಿ ಸ್ಥಳಾಂತರಕ್ಕೆ ಅಡ್ಡಿಯಾಗುತ್ತಿದ್ದಾರೆ.

ಈಗ ಇದೇ ಡಿಸೆಂಬರ 4 ರಿಂದ 15 ರವರೆಗೆ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಿಗದಿಯಾಗಿದೆ.

:ಈ ಹಿನ್ನೆಲೆಯಲ್ಲಿ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್ ಹಾಗೂ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಅಧಿವೇಶನದ ಪೂರ್ವಸಿದ್ಧತೆಯನ್ನು ಮಂಗಳವಾರ(ನ.7) ಪರಿಶೀಲಿಸಿದರು.

ಸುವರ್ಣ ವಿಧಾನಸೌಧವನ್ನು ಬೆಂಗಳೂರಿನ ವಿಧಾನಸೌಧದ ಮಾದರಿಯಲ್ಲಿ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ಸಹ ನೀಡಿದರು.

ಆರಂಭದಲ್ಲಿ ಸುವರ್ಣ ವಿಧಾನಸೌಧ ಕಟ್ಟಡವನ್ನು ವೀಕ್ಷಿಸಿದ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಪಶ್ಚಿಮ ಪ್ರವೇಶದ್ವಾರದ ಕೆಲವು ಕಡೆಗಳಲ್ಲಿ ಬಣ್ಣ ಮಾಸಿರುವುದು ಹಾಗೂ ಕಲೆಗಳಿರುವುದನ್ನು ಸರಿಪಡಿಸಲು ಸೂಚಿಸಿದರಲ್ಲದೇ ವರ್ಷವಿಡೀ ಸುವರ್ಣ ಸೌಧದ ಉತ್ತಮ ನಿರ್ವಹಣೆಗೆ ಸಂಬಂಧಿಸಿದಂತೆ‌ ಶಾಶ್ವತ ಯೋಜನೆ ರೂಪಿಸಲಾಗುವುದು ಎಙದರು

ಧ್ವನಿವರ್ಧಕ, ಸ್ವಚ್ಛತೆ, ಆಸನ ವ್ಯವಸ್ಥೆ, ವಿದ್ಯುಚ್ಛಕ್ತಿ, ಅಂತರ್ಜಾಲ ಸಂಪರ್ಕ, ಟಿವಿ ಪರದೆ, ಕಂಪ್ಯೂಟರ್ ಸೇರಿದಂತೆ ಅಧಿವೇಶನ ಸಂದರ್ಭದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು.
ವಿಧಾನಸಭೆ ಸಭಾಂಗಣದಲ್ಲಿ ದೊಡ್ಡ ಪರದೆಯ ಟಿವಿ ಅಳವಡಿಸಬೇಕು. ಸಭಾಧ್ಯಕ್ಷರ ಕುರ್ಚಿ ಎದುರು ಎಲ್ಲ ಶಾಸಕರ ಹೆಸರು ಹಾಗೂ ಆಸನ ಸಂಖ್ಯೆಯ ಮಾಹಿತಿಯನ್ನು ಪ್ರದರ್ಶಿಸುವ ಚಾರ್ಟ್ ಅಳವಡಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ,ಪೊಲೀಸ್ ಆಯುಕ್ತರಾದ ಎಸ್.ಎನ್.ಸಿದ್ದರಾಮಪ್ಪ, ಜಿಲ್ಲಾ ಪಂಚಾಯತ್ ಮುಖ್ಯ‌ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ, ವಿಧಾನಸಭೆ ಕಾರ್ಯದರ್ಶಿವಿಶಾಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸೊಬರದ ಹಾಗೂ ಇತರೆ ಅಧಿಕಾರಿಗಳು, ಸುವರ್ಣ ವಿಧಾನಸೌಧದ ನಿರ್ವಹಣೆಯ ಕುರಿತು ವಿವರಿಸಿದರು.


Leave a Reply

Your email address will not be published. Required fields are marked *

error: Content is protected !!