ತುಮಕೂರು.
ನವೆಂಬರ್ 15ರಂದೇ ಬೆಂಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಹಿರಿಯರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸುತ್ತೇನೆಂದು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.
ಪಕ್ಷದ ಅಧ್ಯಕ್ಷರಾದ ನಂತರ ಇಲ್ಲಿನ ಸಿದ್ಧಗಂಗಾ ಮಠಕ್ಜೆ ಭೆಟ್ಟಿ ನೀಡಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ವಿಪಕ್ಷ ನಾಯಕ ಆಯ್ಕೆ ನಂತರ ದೆಹಲಿಗೆ ಭೇಟಿ ನೀಡಲಾಗುವುದು ಎಂದು ವಿಜಯೇಂದ್ರ ಮಾಹಿತಿ ನೀಡಿದರು.

16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕರ್ತ ಸಭೆ ಆಯೋಜಿಸಲಾಗುವುದು ಎಂದು ತಿಳಿಸಿದರು.

ಅಂದೇ ಶಾಸಕಾಂಗ ಪಕ್ಷ ಸಭೆ ಸಹನಡೆಸಲಾಗುವುದು ಎಂದರು
ಸದ್ಯ ದೇಶದ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಕೇಂದ್ರದಿಂದ ಯಾರೂ ಬರುವುದಿಲ್ಲ ಎಂದರು.

ಕೇಂದ್ರದಿಂದ ವೀಕ್ಷಕರು ರಾಜ್ಯಕ್ಕೆ ಬರಲಿದ್ದಾರೆ. ಜವಾಬ್ದಾರಿ ಸ್ವೀಕರಿಸಿದ ನಂತರ ಬರದಿಂದ ತತ್ತರಿಸಿದ ಜನರಿಗೆ ಪರಿಹಾರ ಒದಗಿಸಲಾಗುವುದು ಎಂದು ತಮ್ಮ ಆದ್ಯ ಕೆಲಸ ಕುರಿತು ವಿವರಿಸಿದರು.

ಪಕ್ಷದಲ್ಲಿ ಯಾರನ್ನು ಸೈಡ್‌ಲೈನ್ ಮಾಡಿಲ್ಲ:
ಬಿಜೆಪಿಯಲ್ಲಿ ಯಾರನ್ನು ಕಡೆಗಣನೆ (ಸೈಡ್‌ಲೈನ್) ಮಾಡಿಲ್ಲ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿನ ಬಳಿಕ ಬಿಎಸ್ ಯಡಿಯೂರಪ್ಪನವರು ಮತ್ತಷ್ಟು ಆಕ್ಟಿವ್ ಆಗಿ ಪಕ್ಷ ಸಂಘಟನೆಯಲ್ಲಿ ಅವರು ತೊಡಗಿದ್ದಾರೆಂದು ವಿಜಯೇಂದ್ರ ಹೇಳಿದರು.