ಬೆಳಗಾವಿ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳಗಾವಿಗೆ ಐಟಿಗಳು ಬರಬೇಕು ಎನ್ನುವ ನಿಟ್ಟಿನಲ್ಲಿ ಮಾಡಿದ ಪ್ರಯತ್ನಕ್ಕೆ ಕಾಂಗ್ರೆಸ್ ಸರ್ಕಾರ ಎಳ್ಳುನೀರು ಬಿಡುತ್ತಿದೆ ಎಂದು ಶಾಸಕ ಅಭಯ ಪಾಟೀಲ ಆರೋಪಿಸಿದರು.
ಇಲ್ಲಿನ ವಿದ್ಯಾವಂತ ಯುವಕರು ಐಟಿ ಉದ್ಯಮದಲ್ಲಿ ಉದ್ಯೋಗಕ್ಕಾಗಿ ಪುಣೆ, ಮುಂಬೈ, ಬೆಂಗಳೂರು, ಹೈದರಾಬಾದ್ ಮುಂತಾದ ಸ್ಥಳಗಳಿಗೆ ಹೋಗುತ್ತಿದ್ದಾರೆ. ಅವರಿಗೆ ಬೆಳಗಾವಿಯಲ್ಲಿಯೇ ಐಟಿ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಯತ್ನ ಮಾಡಲಾಗಿತ್ತು ಎಂದು ಶಾಸಕ ಅಭಯ ಪಾಟೀಲರು ಹೇಳಿದರು,.

ಮುರುಗೇಶ್ ನಿರಾಣಿ ಕೈಗಾರಿಕಾ ಸಚಿವರಾಗಿದ್ದಾಗ ಬೆಳಗಾವಿಯಲ್ಲಿ ಐಟಿ ಪಾರ್ಕ ಪ್ರಸ್ತಾವನೆ ಸಲ್ಲಿಸಿದ್ದೆನು. ರಷ್ಯಾದಿಂದ ಎಲೆಕ್ಟ್ರಿಕ್ ವಾಹನ ಕಂಪನಿಯನ್ನು ಬೆಳಗಾವಿಗೆ ತರಲು ಪ್ರಯತ್ನಿಸಿದ್ದೆ.

ಅದರೆ. ಈಗಿನ ಕಾಂಗ್ರೆಸ್ ಸರಕಾರ ಕೇವಲ ಭರವಸೆ ಸರಕಾರವಾಗಿದೆ. ಇದು ಈ ಎರಡು ಯೋಜನೆಗಳಿಗೆ ಎಷ್ಟರಮಟ್ಟಿಗೆ ವೇಗ ನೀಡುತ್ತದೆ ಎಂಬುದು ಅನುಮಾನವಿದೆ. ಎಂದರು. ಬಾಕಿ ಉಳಿದಿರುವ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು
