ಬೆಳಗಾವಿ.
ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲರು ಮತ್ತೇ ತಮ್ಮ ಸೈಕಲ್ ಪಯಣ ಶುರು ಮಾಡಿದ್ದಾರೆ.
ಬಹುತೇಕ ಜನಪ್ರತಿನಿಧಿಗಳು ತಮ್ಮಐಶಾರಾಮಿ ಕಾರುಗಳಲ್ಲಿ ಜನರ ಸಮಸ್ಯೆ ಆಲಿಸಲು ಹೊರಟರೆ ಶಾಸಕ ಅಭಯ ಪಾಟೀಲರು ಸೈಕಲ್ ಏರಿ ಹೊರಟಿದ್ದಾರೆ.

ಇದು ಇಂದು ನಿನ್ನೆ ಆರಂಭ ಮಾಡಿದ್ದಲ್ಲ. ಅಥವಾ ಬರೀ ಪೊಟೊ ಪೋಜ್ ಗೂ ಹೊರಟ ಸೈಕಲ್ ಫೇರಿ ಅಲ್ಲ. ಕಳೆದ ಹಲವು ವರ್ಷಗಳಿಂದ ಅಭಯ ಪಾಟೀಲರು ಸೈಕಲ್ ಮೇಲೆಯೇ ದಕ್ಷಿಣ ಕ್ಷೇತ್ರದ ವಾರ್ಡುಗಳಿಗೆ ಸಂಚರಿಸಿ ಸಾರ್ವಜನಿಕರ ಅಹವಾಲು ಆಲಿಸುವ ಕೆಲಸ ಮಾಡುತ್ತಿದ್ದರು.
ಈಗ ಮತ್ತೇ ವಾರ್ಡಗಳತ್ತ ಸೈಕಲ್ ಫೇರಿ ಶುರುವಿಟ್ಡುಕೊಂಡಿದ್ದಾರೆ.

ಇಲ್ಲಿ ಸಾರ್ವಜನಿಕರು ತಾವು ತಮ್ಮ ಸಮಸ್ಯೆಗಳನ್ನು ಮೌಖಿಕವಾಗಿ ಹೇಳದೇ ಅದನ್ನೇ ಲಿಖಿತ ರೂಪದಲ್ಲಿ ಕೊಡಬೇಕು ಎನ್ನುವುದು ಶಾಸಕರ ಮನವಿ.

ಸೋಮವಾರ ವಾರ್ಡ 53 ಮತ್ತು 54 ರಲ್ಲಿ ಶಾಸಕ ಅಭಯ ಪಾಟೀಲರು ಸೈಕಲ್ ಫೇರಿ ನಡೆಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ತಮ್ನ ಬಗೆಹರಿಯದ ಸಮಸ್ಯೆಗಳನ್ನು ಹೇಳಿಕೊಂಡರು. ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಂಡರೆ ಇನ್ನೂ ಕೆಲವುಗಳಿಗೆ ಪರಿಹಾರ ಕೊಡಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು.

ಅನುದಾನ ಕಟ್ ಕಟ್.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದರೂ ಬೆಳಗಾವಿಗೆ ಒಂದು ನಯಾ ಪೈಸೆ ಹಣವೂ ಅಭಿವೃದ್ಧಿಗೆ ಮಂಜೂರಾಗಿಲ್ಲ.
ಪ್ರಸ್ತುತ ಬೆಳಗಾವಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಬಿಜೆಪಿ ಸರಕಾರದಿಂದ ಮಂಜೂರಾದ ಅನುದಾನದಲ್ಲಿ ಆರಂಭಿಸಲಾಗುತ್ತಿದೆ. ಆದರೆ, ಕಾಂಗ್ರೆಸ್ ಸರ್ಕಾರ ಆ ಆದೇಶ ರದ್ದು ಮಾಡುವ ಕೆಲಸ ಮಾಡಿದೆ. ಹೀಗಾಗಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ ಎಂದು ದೂರಿದರು.