ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲೂ ಏಳು ಕಡೆಗೆ ದೊಡ್ಡ ಪರದೆ ಅಳವಡಿಕೆ. ಶಾಸಕ ಅಭಯ ಪಾಟೀಲರಿಂದ ವಿಶೇಷ ಪ್ರಯತ್ನ.
ಬೆಳಗಾವಿ.
ಆಸ್ಟ್ರೇಲಿಯಾದವರು ತಿಪ್ಪರಲಾಗ ಹಾಕಿದರೂ ವಿಶ್ವಕಪ್ ಗೆಲ್ಲೊದು ಭಾರತವೇ. . NO DOUBT. ಏಕೆಂದರೆ ಕ್ರಿಕೆಟ್ ಪಂದ್ಯ ನಡೆಯುತ್ತಿರುವುದು ಗುಜರಾತನ ಅಹ್ಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂದಲ್ಲಿ. ಹೀಗಾಗಿ ಇಲ್ಲಿ ಭಾರತ ಬಿಟ್ಟು ಬೇರೆಯವರು ಗೆಲ್ಲೋಕೆ ಸಾಧ್ಯವೇ ಇಲ್ಲ.

ಹೊಸ ವರ್ಷದ ಸನಿಹದಲ್ಲಿ ಮೋದಿ ಹೆಸರಿನ ಗೆಲುವು ಆರಂಭಿಕ. ಮುಂದೆ ಭಾರತಕ್ಕೆ ಸೋಲು ಎನ್ನುವುದೇ ಬರಲ್ಲ. ಇದು ಕ್ರಿಕೆಟ್ ಪ್ರೇಮಿಯೂ ಆಗಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದ ಮಾತು.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುವ ಪಂದ್ಯದ ವೀಕ್ಷಣೆಗೆ ಅಭಯ ಪಾಟೀಲರು ದಕ್ಷಿಣ ಕ್ಷೇತ್ರದ ಏಳು ಕಡೆಗೆ ದೊಡ್ಡ ದೊಡ್ಡ ಪರದೆ ಅಳವಡಿಸಿದ್ದಾರೆ.
ಕಳೆದ ದಿನವೇ ಆಯಾ ಭಾಗದ ನಗರಸೇವಕರು ಸಂಬಂಧಿಸಿದ ಠಾಣೆಗಳಿಗೆ ಅನುಮತಿ ಕೋರಿ ಪತ್ರವನ್ನೂ ನೀಡಿದ್ದಾರೆ. ಆದರೆ ಎಲ್ಲ ವ್ಯವಸ್ಥೆ ಆದ ನಂತರ ತಡರಾತ್ರಿ ಪೊಲೀಸರು ಸ್ವಲ್ಪಮಟ್ಟಿಗೆ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಮಾಡುವ ಕೆಲಸ ನಡೆಸಿದ್ದು ಕಂಡು ಬಂದಿತು.

ಆದರೆ ಯಾವುದೇ ಪರಿಸ್ಥಿತಿಯಲ್ಲಿ ಏನೂ ಬದಲಾವಣೆ ಆಗಲ್ಲ ಎಂದೂ ಶಾಸಕರು ಸ್ಪಷ್ಡಪಡಿಸಿದ್ದಾರೆ. ನಿಗದಿ ಪಡಿಸಿದ ಸ್ಥಳದಲ್ಲಿಯೇ ಎಲ್ಲವೂ ಶಾಂತಿಯುತವಾಗಿ ನಡೆಯುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

1983 ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡ
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 2023 ರ ODI ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.

ಟೂರ್ನಿಯಲ್ಲಿ ಭಾರತ ತಙಡದ ಪಯಣ ಅದ್ಭುತವಾಗಿದೆ. ಭಾರತ ತಂಡ ಇದುವರೆಗೆ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತ ಫೈನಲ್‌ಗೆ ತಲುಪಿದೆ. ಅದೇ ಸಮಯದಲ್ಲಿ, ಆಸ್ಟ್ರೇಲಿಯದ ಪ್ರಯಾಣವು ಆರಂಭದಲ್ಲಿ ನಿರಾಶಾದಾಯಕವಾಗಿತ್ತು. ಆಸ್ಟ್ರೇಲಿಯ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಸೋತಿತು,
ಖ್ಯಾತ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ ಭಾನುವಾರ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಕಪ್ ನಮ್ಮದೇ ಎಂದು ಉಲ್ಲೇಖ ಮಾಡಿದ್ದಾರೆ.