ಬೆಳಗಾವಿ. ಮಹಾನಗರ ಪಾಲಿಕೆ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಪಾಲಿಕೆಯ ಬಿಜೆಪಿ ನಗರಸೇವಕರು ಟಿಳಕವಾಡಿ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಅಕ್ರಮವಾಗಿ ಮೊಬೈಲ್ ಟಾವರ್ ಕೂಡಿಸಲು ವಿರೋಧ ವ್ಯಕ್ತಪಡಿಸಿದ ಎನ್ನುವ ಕಾರಣದಿಂದ ರಮೇಶ ಪಾಟೀಲ ಸೇರಿದಂತೆ ಹತ್ತಕ್ಕೂ ಹೆಚ್ಚು ಜನ ಜವಳಕರ ಮೇಲೆ ತೀವೃಸ್ವರೂಒದ ಹಲ್ಲೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಹಲ್ಲೆ ಕೋರರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ನಗರಸೇವಜರು ಪ್ರತಿಭಟನೆ ನಡೆಸಿದರು.