BJP ನಗರಸೇವಕನ ಮೇಲೆ ಹಲ್ಲೆ

ಬೆಳಗಾವಿ. ಕಾನೂನು ಬಾಹಿರವಾಗಿ ಮೊಬೈಲ್ ಟವರ್ ಕೂಡಿಸುತ್ತಿದ್ದುದನ್ಬು ಪ್ರಶ್ನಿಸಿದ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಮೇಲೆ ಕಿಡಿಗೇಡಿಗಳ ಗುಂಪೊಂದು ಹಲ್ಲೆ ಮಾಡಿದ ಘಟನೆ ಇಂದು ಮಧ್ಯಾಹ್ನ ಭಾಗ್ಯನಗರದಲ್ಲಿ ನಡೆದಿದೆ.

ಬಾಗ್ಯನಗರ 9 ನೇ ಕ್ರಾಸ್ ನ ಮಬೆಯೊಂದರ ಮೇಲೆ ರಮೇಶ್ ಎಂಬುವರು ಯಾವುದೇ ಪೂರ್ವಾನುಮತಿ ಇಲ್ಲದೇ ಮೊಬೈಲ್ ಟವರ್ ಕೂಡಿಸುತ್ತಿದ್ದರು. ಇದರ ಬಗ್ಗೆ ಅಲ್ಲಿನ ನಿವಾಸಿಗಳು ನಗರಸೇವಕ ಅಭಿಜಿತ್ ಜವಳಕರ ಮೂಲಕ ದೂರು ಸಹ ನೀಡಿದ್ದರು.

ಈ ದೂರನ್ನು ಪರಿಗಣಿಸಿದ ಪಾಲಿಕೆಯವರು ಅದಕ್ಕೆ ಅನುಮತಿ ನೀಡಿರಲಿಲ್ಲ. ಆದರೆ ಇದೆಲ್ಕವನ್ನು ಲೆಕ್ಕಿಸದೇ ರಮೇಶ್ ಅವರು ರಾತ್ರೊರಾತ್ರಿ ಟವರ್ ಕೂಡಿಸುವ ಕೆಲಸ ಮಾಡುತ್ತಿದ್ದರು.

ಟವರ್ ಅಖವಡಿಕೆಗೆ ಅನುಮತಿ ನಿರಾಕರಿಸಿದ ಪಾಲಿಕೆ ಪತ್ರ.

ಇಂದು ಮಧ್ಯಾಹ್ನ ಇದನ್ನು ಪ್ರಶ್ನೆ ಮಾಡಿದ್ದರು ಎನ್ನುವ ಕಾರಣಕ್ಕೆ ರಮೇಶ್ ಪಾಟೀಲ ಸೇರಿದಂತೆ ಹತ್ತಕ್ಕೂ ಹೆಚ್ಚು ಜನ ನಗರಸೇವಕ ಜವಳಕರ ಅವರನ್ಬು ಅಡ್ಡಗಟ್ಟಿ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದೆ. ಅಷ್ಟೇ ಅಲ್ಲ ಕಲ್ಲಿನಿಙದ ಕೂಡ ಹೊಡೆಯಲಾಗಿದೆ ಎಂದು ಗೊತ್ತಾಗಿದೆ.

ಮೂಲಗಳ ಪ್ರಕಾರ, ಕಿಡಿಗೇಡಿಗಳ ಗುಂಪು ಕೈಯಲ್ಲಿ ಹರಿತವಾದ ಆಯುಧವನ್ನು ಹಿಡಿದುಕೊಂಡು ಬಂದಿತ್ತು ಎಂದು ಹೇಳಲಾಗಿದೆ.

ಈ ಸಂದರ್ಭದಲ್ಲಿ ಕಿಡಿಗೇಡಿಗಳು ಜವಳಕರ ಮೈಮೇಲಿದ್ದ ಚಿನ್ಬದ ಸರವನ್ಬು ಕಿತ್ತುಕೊಂಡಿದೆ ಎಂದು ಹೇಳಲಾಗಿದೆ.

ಈ ಹಲ್ಲೆಯಿಂದ ತೀವೃ ಭಯಭೀತಗೊಂಡ ಜವಳಕರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರಸೇವಕರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಅಲ್ಲಿನ‌ ನಿವಾಸಿಗಳು ಆಗ್ರಹಿಸಿದ್ದಾರೆ.

0

Leave a Reply

Your email address will not be published. Required fields are marked *

error: Content is protected !!