ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಯ ರಜೌರಿಯಲ್ಲಿ ಬುಧವಾರ ಭಯೋತ್ಪಾದಕರೊಡನೆ ನಡೆದ ಗುಂಡಿನ ಚಕಮಕಿಯಲ್ಲಿ ಕ್ಯಾಪ್ಟನ್ ಎಂವಿ ಪ್ರಾಂಜಲ್ ಸೇರಿದಂತೆ ಇಬ್ಬರು ಸೇನಾಧಿಕಾರಿಗಳು ಹಾಗು ಮೂವರು ಯೋಧರು ಹುತಾತ್ಮರಾದ ವಿಷಯ ಸಿಡಿಲಿನಂತೆ ಬಂದೆರಗಿದೆ,

ಈ ಸಂದರ್ಭದಲ್ಲಿ ಹುತಾತ್ಮರಾದ ಅವರ ಆತ್ಮಕ್ಕೆ ಸದ್ಗತಿ ಪ್ರಾಪ್ರ್ತಿಯಾಗಲಿ ಅವರ ಕುಟುಂಬ ವರ್ಗಕ್ಕೆ ಹಾಗು ಬಂಧು ಮಿತ್ರರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ದಯಪಾಲಿಸಲಿ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಮಸ್ತ ಪದಾಧಿಕಾರಿಗಳು ಹಾಗು ಕಾರ್ಯಕಾರಿಣಿ ಸದಸ್ಯರು ಆ ಭಗವಂತನಲ್ಲಿ ಪ್ರಾರ್ಥಿಸಿ ಸಂತಾಪ ಸೂಚಿಸಿರುತ್ತಾರೆ.