ಬೆಳಗಾವಿ ಅಕ್ರಮವಾಗಿ ಮನೆಯ ಮೇಲೆ ಮೊಬೈಲ್ ಟಾವರ್ ಅಳವಡಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಗರಸೇವಕರ ಮೇಲೆ ನಡೆದ ಹಲ್ಲೆ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಳ್ಳತೊಡಗಿದೆ.
ಬಿಜೆಪಿಯವರು ಮತ್ತು ಅಲ್ಲಿನ ನಿವಾಸಿಗಳು ಹಲ್ಲೆ ಮಾಡಿದ ಆರೋಪ ಹೊತ್ತ ರಮೇಶ್ ಪಾಟೀಲ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಮೇಲಾಗಿ ಹಲ್ಲೆಗೊಳಗಾದ ನಗರಸೇವಕ. ಅಭಿಜಿತ್ ಜವಳಕರ ನೀಡಿದ ದೂರಿನ ಹಿನ್ನೆಲೆಯಲ್ಲಿ ರಮೇಶ್ ಪಾಟೀಲರನ್ನು ಪೊಲೀಸರು ಬಂಧಿಸಿದ್ದರು.
ಆದರೆ ಇವತ್ತು ಹಿಂದುಸ್ತಾನ ಶ್ರೀರಾಮ ಸೇನೆ ಮುಖಂಡ ರಮಾಕಾಂತ ಕೊಂಡುಸ್ಕರ ನೇತೃತ್ವದಲ್ಲಿ ಎಂಇಎಸ್ನ ಮಾಜಿ ಮೇಯರ್ ಕುರಣ ಸಾಯಿನಾಯ್ಕ ಮುಂತಾದವರು ನಗರಸೇವಕ ಜವಳಕರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕೆಂದು ಟಿಳಕವಾಡಿ ಠಾಣೆ ಎದುರು ಪ್ರತಿಭಟನೆ ನಡೆಸಿದರು.