Headlines

ಪಾಲಿಕೆಯಲ್ಲಿ ಆಪರೇಶನ್ ಹಸ್ತ ನಿಜಾನಾ?

ಪಾಲಿಕೆಯಲ್ಲಿ 1-13 (1 ಮೈನಸ್ 13) formula ready ಆಗ್ತಿದೆಯಾ? ಏನಿದು 1-13? ಒಬ್ಬರ ಸಲುವಾಗಿ 13 ಜನರನ್ನು ಕಳೆದುಕೊಳ್ಳುತ್ತಿರುವ ಬಿಜೆಪಿ

.ಶಾಸಕರು ಮತ್ತು ಪಕ್ಷದ ಅಧ್ಯಕ್ಷರ ಮಾತು ಮೀರಿ ಹೊರಟರಾ ಅವರು? ಮತ್ತೊಮ್ಮೆ ಅನಿಲ‌ ಬೆನಕೆ ಮತ್ತು ಅಭಯ ಪಾಟೀಲರ ಭೆಟ್ಟಿಗೆ ಸಿದ್ಧವಾಗಿರುವ ಅಸಮಾಧಾನಿತರು.

ಅಸಮಾಧಾನಿತ ಬಿಜೆಪಿಗರು ಪಕ್ಷ ಬಿಡಲ್ಲ. ಆದರೆ ಮಹಾ ಮಾದರಿಯಲ್ಲಿ ಪ್ರತ್ಯೇಕ ಗುಂಪು ರಚನೆ ಮಾಡೊಕೊಳ್ಳುವ ಸಾಧ್ಯತೆ? ವಾರ್ಡನಲ್ಲಿ ಹೊರಗಿನವರ ಹಸ್ತಕ್ಷೇಪ, ಅಭಿವೃದ್ಧಿ ಆಗುತ್ತಿಲ್ಲ ಎನ್ನುವ ಅಸಮಾಧಾನ. ಬಿಜೆಪಿಯಲ್ಲಿನ ಮಾಹಿತಿಯನ್ನು ಕಾಂಗ್ರೆಸ್ ನಾಯಕರಿಗೆ ಲೈವ ತಲುಪಿಸುತ್ತಿರುವವರು ಯಾರು?

ಬೆಳಗಾವಿ.

ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಪರೇಶನ್ ಹಸ್ತ ದ ಮಾತು ಕಳೆದ ಹಲವು ದಿನಗಳಿಂದ ಕೇಳಿ ಬರುತ್ತಿದೆ.

ಈ ಬಗ್ಗೆ ಆಂಗ್ಲ ಮತ್ತು ಕನ್ನಡ ದಿನಪತ್ರಿಕೆ ಸೇರಿದಂತೆ ಟಿವಿ ಮಾಧ್ಯಮದಲ್ಲೂ ದೊಡ್ಡ ಮಟ್ಟದ ಸುದ್ದಿ ಆಯಿತು. ಇಲ್ಲಿ ಆಪರೇಶನ್ ರೂವಾರಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಯಾರಿಗೂ ಗೊತ್ತಾಗದಂತೆ ಎಲ್ಲವನ್ನೂ ಮಾಡತೊಡಗಿದ್ದಾರೆ.

ಮತ್ತೊಂದು ಕಡೆಗೆ ಪಾಲಿಕೆಯ ಆಡಳಿತ ಪಕ್ಷದವರು ಅದೆಲ್ಲಾ ಠುಸ್ ಪಟಾಕಿ ಎನ್ನುತ್ತ ಕುಳಿತಿದ್ದಾರೆ.

ಆದರೆ ವಾಸ್ತವವಾಗಿ ಬಿಜೆಪಿಯ ನಗರಸೇವಕರಲ್ಲಿ ಅಂತಹ ಅಸಮಾಧಾನ ಮಡುಗಟ್ಟಿದೆಯೇ? ಎನ್ನುವುದರ ಬಗ್ಗೆ ಕೆದಕುತ್ತ ಹೊರಟರೆ ಕೆಲವೊಂದು ಸಂದರ್ಭಗಳಲ್ಲಿ ‘ಹೌದು‘ ಎನ್ನುವ ಉತ್ತರ ಬರುತ್ತದೆ.

ಶಾಸಕ ಅಭಯ ಪಾಟೀಲ ಮತ್ತು ಬಿಜೆಪಿ ಮಹಾನಗರ ಅಧ್ಯಕ್ಷ ಅನಿಲ ಬೆನಕೆ ಅವರ ಶತಪ್ರಯತ್ನದ ಫಲವಾಗಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತು. ಇಲ್ಲಿ ಅಭಯ ಪಾಟೀಲ ಕಿಂಗ್ ಮೇಕರ್ ಎನ್ನುವಯದರಲ್ಲಿ ಎರಡು ಮಾತಿಲ್ಲ.

ಗಮನಿಸಬೇಕಾದ ಸಂಗತಿ ಎಂದರೆ ಸ್ಥಾಯಿ ಸಮಿತಿ ರಚನೆ ಮಾಡುವ‌‌ ಸಂದರ್ಭದಲ್ಲಿ ಕೂಡ ಅವರು ಅಳೆದುತೂಗಿ ಯಾರಿಗೂ ಅನ್ಯಾಯವಾಗದಂತೆ ರಚನೆ ಮಾಡಿದರು. ಆದರೆ ಅವರ ಆಶಯಕ್ಕೆ ತಕ್ಕಂತೆ ಎಲ್ಲವೂ ಸುರಳಿತವಾಗಿ ನಡೆದಿದ್ದರೆ ಪಾಲಿಕೆಯಲ್ಲಿ ಕಾಂಗ್ರೆಸ್ ಆಪರೇಶನ್ ಮಾತು ಬರುತ್ತಿರಲೇ ಇಲ್ಲ. ಆದರೆ ಮಹಿಳೆಯರೇ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಅನಗತ್ಯ ಹಸ್ತಕ್ಷೇಪ, ಪ್ರತಿಯೊಂದು ವಾರ್ಡನಲ್ಲಿ ಕೆಕವರು ನಡೆಸಿದ ಕಾರುಬಾರು, ಅಭಿವೃದ್ಧಿ ಗೆ ಅನುದಾನ ಬಿಡುಗಡೆ ಆಗದಿರುವುದು ಬಿಜೆಪಿ 14 ನಗರಸೇವಕರ ಅಸಮಾಧಾನಕ್ಕೆ ಕಾರಣವಾಗ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಈಗಾಗಲೇ ಈ ಬಗ್ಗೆ ಬಹಳಷ್ಟು ನಗರಸೇವಕರೂ ಸಹ ಅನಿಲ ಬೆನಕೆ‌ ಮತ್ತು ಅಭಯ ಪಾಟೀಲರ ಗಮನಕ್ಕೆ ತಂದುದ್ದರಂತೆ. ಅವರು ಅದಕ್ಕೆ ಸಂಬಂಧಿಸಿದವರನ್ನು ಕರೆದು ತಾಕೀತು ಕೂಡ ಮಾಡಿದ್ದರು. ಆದರೆ ಅದಕ್ಕೂ ಅವರು ಬಗ್ಗಲೇ ಇಲ್ಲ.

ಗಮನಿಸಬೇಕಾದ ಸಂಗತಿ ಎಂದರೆ, ನಗರಸೇವಕರಲ್ಲಿ ಏನಾದರೂ ಭಿನ್ನಮತ ಬಂದರೆ ಅದನ್ನು ಬಗೆಹರಿಸಲು ಆರು ಜನರ ಕೋ ಆರ್ಡಿನೇಶನ್ ಕಮಿಟಿ ಕೂಡ ರಚನೆಯಾಗಿದೆ. ಆದರೆ ಆ ಕಮಿಟುಯಲ್ಲಿದ್ದ ಕೆಲವರು ಉಳಿದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿಲ್ಲ. ಇದು ಮತ್ತೊಂದು ರೀತಿಯ ಗೊಂದಲಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!