ಬೆಳಗಾವಿ. ಚಳಿಗಾಲ ಅಧಿವೇಶನಕ್ಕೆ ಪರ್ಯಾಯವಾಗಿ ನಾಡದ್ರೋಹಿ ಎಂಇಎಸ್‌ನವರು ಮಹಾಮೇಳಾವ್ ನಡೆಸಲು ತೀರ್ಮಾನಿಸಿದ್ದಾರೆ.
ನಮಗೇನು ಪೊಲೀಸ್ ಅನುಮತಿ ಅಗತ್ಯನೇ ಇಲ್ಲ.ಪ್ರತಿ ವರ್ಷ ಮಹಾಮೇಳಾವ್ ಮಾಡುತ್ತ ಬಂದಿದ್ದೇವೆ. ಈ ವರ್ಷನೂ ಮಾಡ್ತೇವೆ.
ಬೆಳಗಾವಿಯಲ್ಲಿಂದು ಪೊಲೀಸ್ ಆಯುಕ್ತರನ್ಬು ಭೆಟ್ಟಿಯಾದ ನಂತರ ನಾಡದ್ರೋಹಿಗಳು ತೆಗೆದುಕೊಂಡ ನಿರ್ಧಾರವಂತೆವಿದು.
ಮೇಳಾವ್ ಹೇಗೆ ಮತ್ತು ಎಲ್ಲಿ ಮಾಡಬೇಕು ಎನ್ನುವುದರ ಬಗ್ಗೆ ಶನಿವಾರ ದಿ.2 ರಂದು ಸಂಜೆ. 4 ಕ್ಕೆ ವನಿತಾ ವಿದ್ಯಾಲಯ ಬಳಿಯಿರುವ ಸಹ್ಯಾದ್ರಿ ಕೋ ಆಪ್ ಸೊಸೈಟಿ ಯಲ್ಲಿ ನಡೆಯುವ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ ಎಂದು ಸಮಿತಿ ಮೂಲಗಳು ತಿಳಿಸಿವೆ.
ಈಗಾಗಲೇ ಮಹಾರಾಷ್ಟ್ರ ದವರಿಗೆ ಮೇಳಾವ್ ಗೆ ಆಮಂತ್ರಣ ನೀಡಲಾಗಿದೆ. ಅವರು ಬರ್ತಾರೊ ಇಲ್ಲವೊ ಗೊತ್ತಿಲ್ಲ. ಆದರೆ ಮೇಳಾವ್ ಮಾಡೊದು ಪಕ್ಕಾ ವಂತೆ.