ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಿನ್ನೆ ದಿ.4 ರಿಂದ ಆರಂಭವಾಗಿದೆ. ಮತ್ತೊಂದು ಕಡೆಗೆ ಸಮಸ್ಯೆ ಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹಣಿಯಲು ಬಿಜೆಪಿ ರಣತಂತ್ರ ರೂಪಿಸಿದೆ.

ಇದೆಲ್ಕದರನಡುವೆ ಕಳೆದ ದಿನ ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಪರಮಾಪ್ತ ಮತ್ತು ಬಿಜೆಪಿ ಎಸ್ ಸಿ ಮೋರ್ಚಾಮುಖಂಡ ಪೃಥ್ವಿ ಸಿಂಗ್ ಗೆ ಚಾಕು ಇರಿತ ಪ್ರಕರಣ ನಡೆಯಿತು. ಇಲ್ಲಿ ಹಲ್ಲೆಗೊಳಗಾಗಿದ್ದ ಎನ್ನಲಾದ ಫೃಥ್ವಿಸಿಂಗ್ ವಿಡಿಯೋ ಮೂಲಕ ಬಿಡುಗಡೆ ಮಾಡಿದ ಹೇಳಿಕೆ ಒಂದಿಷ್ಟು ಗೊಂದಲಕ್ಕೆ ಕಾರಣವಾಯಿತು.

ಅವರು ನೇರವಾಗಿ ವಿಡಿಯೋ ದಲ್ಲಿ ನೇರವಾಗಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೆಸರು ಪ್ರಸ್ತಾಪ ಮಾಡಿದರು. ಇದಕ್ಕೆ ಪ್ರತಿಯಾಗಿ ಚನ್ನರಾಜ ಅವರೂ ಕೂಡ ALL ಬೋಗಸ್ ಎಂದರು. ಇಷ್ಟಕ್ಕೆ ಇದು ಬಗೆಹರಿದಿದ್ದರೆ ಹೋಗಲಿ ಅನಬಹುದಿತ್ತು.ಆದರೆ ಬಿಜೆಪಿ ನಾಯಕರು ಆಸ್ಪತ್ರೆಗೆ ಧಾವಿಸಿ ಫೃಥ್ವಿಸಿಂಗ್ ಭೆಟ್ಡಿಯ ನಂತರ ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಬಂದಿತು.
ಇವತ್ತು ಮಾಜಿ ಸಚಿವ ಕೆ. ಎಸ್ .ಈಶ್ವರಪ್ಪ ಸೇರಿದಂತೆ ಮುಂತಾದವರು ಹೋಗಿ ಭೆಟ್ಟಿ ನೀಡಿದ್ದರು. ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ಹೋಗಬಹುದು ಎನ್ನುವುದನ್ನು ಊಹಿಸಲಾಗದು.