ಬೆಳಗಾವಿ ಟಿಳಕವಾಡಿ ಸಿಪಿಐ ವಿರುದ್ಧ ಕ್ರಮಕ್ಕೆ ಓಕೆ ಅಂದ ಗೃಹ ಸಚಿವರು. ಧರಣಿ ಕೈ ಬಿಟ್ಟ ಶಾಸಕ ಅಭಯ ಪಾಟೀಲ. ನಗರಸೇವಕನ ಮೇಲೆ ಖಾಕಿ ದೌರ್ಜನ್ಯ ಪ್ರಕರಣ
ವಿಧಾನಸೌಧ.
ಬೆಳಗಾವಿ ಮಹಾನಗರ ಪಾಲಿಕೆ ನಗರಸೇವಕ ಅಭಿಜಿತ್ ಜವಳಕರ ಬಂಧನ ಪ್ರಕರಣದಲ್ಲಿ ತಪ್ಪಿತಸ್ಥ ಆರೋಪ ಹೊತ್ತ ಟಿಳಿಕವಾಡಿ ಸಿಪಿಐ ಸೇರಿದಂತೆ ಮತ್ತಿಬ್ಬರ ವಿರುದ್ಧ ಕ್ರಮಕ್ಕೆ ಗೃಹ ಸಚಿವರು ಸಮ್ಮತಿ ಸೂಚಿಸಿದ್ದಾರೆ.

ಕಳೆದ ದಿನವಷ್ಟೇ ಶಾಸಕ ಅಭಯ ಪಾಟೀಲರು ಸದನದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸವಿಸ್ತಾರವಾಗಿ ಮಾತನಾಡಿದ್ದರು. ಅದಕ್ಕೆ ಪ್ರತಿಯಾಗಿ ಗೃಹ ಸಚಿವರಿಂದ ಉತ್ತರ ಕೊಡಿಸುವುದಾಗಿ ಸಭಾಧ್ಯಕ್ಷರು ಭರವಸೆ ನೀಡಿದ್ದರು

ಇಂದು ಸದನದಲ್ಲಿ ಫೃಥ್ವಿಸಿಂಗ್ ಮತ್ತು ಜವಳಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ನೀಡಿದ ಉತ್ತರಕ್ಕೆ ಬಿಜೆಪಿಯವರು ತೃಪ್ತಿಯಾಗಲಿಲ್ಲ. ಪ್ರತಿಪಕ್ಷದ ನಾಯಕ ಆರ್. ಅಶೋಕ, ವಿಜಯೇಂದ್ರ ಮುಂದಾಳತ್ವದಲ್ಲಿ ಸಭಾತ್ಯಾಗ ನಡೆಸಲಾಯಿತು.
ಆದರೆ ಈ ಸಂದರ್ಭದಲ್ಲಿ ಶಾಸಕ ಅಭಯ ಪಾಟೀಲರು ಧರಣಿ ನಡೆಸಿದರು. ಇದನ್ನು ಗಮನಿಸಿದ ಗೃಹ ಸಚಿವರು, ಸಿಪಿಐ ಸೇರಿದಂತೆ ಇನ್ನಿಬ್ಬರ ವಿರುದ್ಧ ಕ್ರಮ ತೆಗೆದುಕೊಖ್ಖುವುದಾಗಿ ಭರವಸೆ ನೀಡಿದರು. ಅಷ್ಟೇ ಅಲ್ಲ ವಿಚಾರಣೆ ಕೂಡ ನಡೆಸುವುದಾಗಿ ಸಚಿವರು ಹೇಳಿದರು.