Headlines

ರೈತ ಮಕ್ಕಳ ಆಕ್ರಂದನ ಕರಗದ ಖಾಕಿ ಮನಸ್ಸು

ಸೋಮವಾರ ಬಿಜೆಪಿಗೆ ಸಿಕ್ಕಿತು ಕುಲವಳ್ಳಿ ರೈತರ ಮೇಲೆ ಖಾಕಿ ದರ್ಪದ ಅಸ್ತ್ರ.

ಮಕ್ಕಳನ್ನು ಜಡೆ ಹಿಡಿದು ಎಳೆದರಂತೆ ಪೊಲೀಸರು.

ರೈತರಿಗೆ ಸೆಡ್ಡು ಹೊಡೆದ್ರಾ ಎಸ್ಪಿ ? ಗಾಯಗೊಂಸ ಮಕ್ಕಳು.

.ಜಡೆ ಹಿಡಿದು ಎಳೆದರು. ಮಕ್ಕಳ ಚೀರಾಟ ಕಂಡ್ರೂ ಮನಸ್ಸು ಕರಗಲಿಲ್ಲ…!


ಬೆಳಗಾವಿ.
ಚಳಿಗಾಲ ಅಧಿವೇಶನದಲ್ಲಿ ಇಡೀ ಸದನ ರೈತರ ಬಗ್ಗೆ ವಿಶೇಷ ಒತ್ತುಕೊಟ್ಟು ಚಚರ್ೆ ನಡೆಸಿದೆ,. ಸೌಧದ ಹೊರಗೆ ರೈತರ ಪ್ರತಿಭಟನೆಗಳು ನಡೆಯುತ್ತಿದ್ದರೂ ಕೂಡ ಅಲ್ಲಿ ಯಾವುದೇ ರೀತಿಯ ಕಿರಿಕ್ ಆಗದಂತೆ ಅಲ್ಲಿರುವ ಪೊಲೀಸರು ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ,
ಆದರೆ ಕಿತ್ತುರಿನಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದ ರೈತರು ಅಷ್ಟೇ ಅಲ್ಲ ಅವರ ಮಕ್ಕಳ ಜೊತೆಗೆ ಅಲ್ಲಿರುವ ಪೊಲೀಸರು ನಡೆದುಕೊಂಡ ರೀತಿ ಸೋಮವಾರ ಸದನ ಕಾವೇರುವಂತೆ ಮಾಡುವುದರಲ್ಲಿ ಅನುಮಾನವೇ ಇಲ್ಲ.


ಕಿತ್ತುರು ತಾಲೂಕಿನಲ್ಲಿ ಬರುವ ಕುಲವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 9 ಗ್ರಾಮಗಳ ರೈತರು ಕುಟುಂಬ ಸಮೇತ ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೀದಿಗೆ ಬಂದಿದ್ದರು, ಇಷ್ಟು ವರ್ಷಗಳ ಕಾಲ ಬರೀ ಅಧಿಕಾರಿಗಳ ಭರವಸೆಯನ್ನೇಋ ನಂಬಿದ ರೈತರ ಸಹನೆಯ ಕಟ್ಟೆ ಸಹ ಇಂದು ಒಡೆದಿತ್ತು, ಹೀಗಾಗಿ ಸಮಸ್ಯೆ ಕೇಳಲು ಖುದ್ದು ಕಂದಾಯ ಸಚಿವರು ಬರಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು,


ಆರಂಭದಲ್ಲಿ ಕಿತ್ತುರಿನಲ್ಲಿರುವ ಚನ್ನಮ್ಮವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ, ಆದರೆ ಮಂತ್ರಿಗಳು ಬರುವ ಲಕ್ಷಣ ಕಾಣದಿದ್ದಾಗ ಆಕ್ರೋಶಿತಗೊಂಡು ರಾಷ್ಟ್ರೀಯ ಹೆದ್ದಾರಿಗೆ ಬಂದು ಕುಳಿತರು, ಆದರೆ ಇಲ್ಲಿ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನ ಮಾಡಿದರು, ಅದಕ್ಕೆ ಯಾರೂ ಬಗ್ಗಲಿಲ್ಲ.

ಈ ಸಂದರ್ಭದಲ್ಲಿ ಮಕ್ಕಳನ್ನು ಹೆದ್ದಾರಿಯಿಂದ ಕರೆದುಕೊಂಡು ಹೋಗುವ ಕೆಲಸವನ್ನು ಪೊಲೀಸರು ಮಾಡಿದರು, ಆದರೆ ಅದರಿಂದ ಅವರ ಆಕ್ರೋಶ ಮತ್ತಷ್ಟು ಹೆಚ್ಚಾಯಿತು ,ಪೊಲೀಸರು ಮಕ್ಕಳು ಎನ್ನದೇ ಅವರನ್ನು ಜಡೆ ಹಿಡಿದು ಎಳೆದಾಡಿದಾಗ ಸಹಜವಾಗಿ ಮಕ್ಕಳ ಚೀರಾಟ, ಕೂಗಾಟ, ಆಕ್ರಂದನ ಹೆಚ್ಚಾಯಿತು, ಇದರಿಂದ ಅವರ ಪಾಲಕರ ಆಕ್ರೋಶ ಮುಗಿಲು ಮುಟ್ಟಿತು ಎನ್ನಲಾಗಿದೆ.

ಏನಿದು ಸಮಸ್ಯೆ?
ಕಿತ್ತುರು ತಾಲುಕಿನ ಕುಲವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ 9 ಗ್ರಾಮಗಳ ರೈತರು ತಾವು ಸಾಗುವಳಿ ಮಾಡುತ್ತಿರುವ ಸರಕಾರಿ ಭೂಮಿಯ ಹಕ್ಕು ಪತ್ರಗಳನ್ನು ನೀಡಬೇಕು ಎನ್ನುವ ಬೇಡಿಕೆ ಇಟ್ಟುಕೊಂಡು ಈ ಪ್ರತಿಭಟನೆ ನಡೆಸಿದರು,
ಪೊಲೀಸರ ಮೃಗಿಯ ವರ್ತನೆ.
ಪ್ರತಿಭಟನೆಯಲ್ಲಿ ಕಣ್ಣಿರು ಹಾಕುತ್ತಿರುವ ಶಾಲಾ ಮಕ್ಕಳನ್ನು ವಶಕ್ಕೆ ಪಡೆಯುವ ವೇಳೆ ತಳ್ಳಾಟ ನೂಕಾಟ ನಡೆಯಿತು.
ಒಂದು ಹಂತದಲ್ಲಿ ಪೊಲೀಸರು ಮಕ್ಕಳನ್ನು ಏಳೆದಾಡಿ ಅಮಾನವೀಯ ವರ್ತನೆ ತೋರಿದರು ಎನ್ನಲಾಗಿದೆ,
ಈ ಸಂದರ್ಭದಲ್ಲಿ ಕಿರುಚಿ ಭಯ ಭೀತಗೊಂಡ ಮಕ್ಕಳನ್ನು ಲೆಕ್ಕಿಸದೇ ಪೊಲಿಸರು ದರ್ಪ ತೋರಿದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಕೆಲ ಮಕ್ಕಳಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಯಿತು.

ರೈತರಿಗೆ ಶೆಡ್ಡು ಹೊಡೆದ ಎಸ್ಪಿ…!
ಪ್ರತಿಭಟನಾ ಸ್ಥಳಕ್ಕೆ ಬಂದ ಎಸ್ಪಿ ಭೀಮಾಶಂಕರ ಗುಳೆದ ಅವರು ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಮಹಿಳೆಯರ ಮುಂದೆ ಶೆಡ್ಡು ಹೊಡೆದಿದ್ದಾರೆಂದು ಗೊತ್ತಾಗಿದೆ,

ರೈತರತ್ತ ಹೋದ ಎಸ್ಪಿಯವರು ಸೆಡ್ಡು ಹೊಡೆದು ಈಗ ರಸ್ತೆಗೆ ಬನ್ನಿ ಎಂದು ಅವಾಜ್ ಹಾಕಿದರು ಎನ್ನಲಾಗಿದೆ,

ದೌರ್ಜನ್ಯ ಬಗ್ಗೆ ಎಸ್ಪಿ ಹೇಳಿದ್ದೇನು?


ಕಿತ್ತೂರಿನಲ್ಲಿ ರೈತರ ಮಕ್ಕಳ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂಬ ಆರೋಪದ ಬಗ್ಗೆ ಎಸ್ಪಿ ಭೀಮಾಶಂಕರ ಸ್ಪಷ್ಟನೆ ನೀಡಿದ್ದಾರೆ,
ಮಕ್ಕಳು ರಸ್ತೆಗೆ ಬಂದು ಇಡೀ ರಾಜ್ಯದ ಜೀವನಾಡಿಯಾಗಿರುವ ಪಿಬಿ ರಸ್ತೆಗೆ ಅಡ್ಡಿಪಡಿಸಿದಾಗ ಪೊಲೀಸರಿಗೆ ಯಾವುದೇ ಮಾರ್ಗವಿಲ್ಲದಂತಾಯಿತು, ಅವರನ್ನು ಹೆದ್ದಾರಿಯಿಂದ ಕರೆದೊಯ್ಯುವಾಗ, ಮೂವರು ಮಕ್ಕಳು ಹೆದ್ದಾರಿಯಿಂದ ದೂರ ಸರಿಯಲು ಕೇಳಿದಾಗ ವಿರೋಧಿಸಿದ ಸಂದರ್ಭದಲ್ಲಿ ಸ್ವಲ್ಪ ಗಾಯಗೊಂಡರು, ನಂತರ ಗಾಯಗೊಂಡ ಮಕ್ಕಳನ್ನು ಚಿಕಿತ್ಸೆಗಾಗಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು.

Leave a Reply

Your email address will not be published. Required fields are marked *

error: Content is protected !!