ಬೆಳಗಾವಿ.
ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಗೆ ಕಾರಣವಾದ ಹೊಸವಂಟಮೂರಿ ಮಹಿಳೆಯ ವುವಸ್ತ್ರ ಪ್ರಕರಣ ಈಗ ಸಿಐಡಿಗೆ ಹಸ್ತಾಂತರವಾಗಿದೆ.

ಈ ಕುರಿತು ಅಧಿಕೃತ ಆದೇಶ ಕೂಡ ಹೊರಬಿದ್ದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಕಾಕತಿ ಸಿಪಿಐ ವಿಜಯಕುಮಾರ ಸಿನ್ನೂರ ಅವರನ್ಬು ಅಮಾನತ್ ಮಾಡಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದರು.

ಈಗಾಗಲೇ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಚಾಟಿ ನೀಡಿತ್ತು. ನಂತರ ಮೂರು ಆಯೋಗಗಳು ಸಂತ್ರಸ್ತೆಯನ್ನು ಭೆಟ್ಟಿಯಾಗಿ ಸಾಂತ್ವನ ಹೇಳಿದ್ದವು.
ಈಗ ಈ ಪ್ರಕರಣ ಸಿಐಡಿಗೆ ಹಸ್ತಾಂತರವಾಗಿದೆ ರಾಜ್ಯ ಸರ್ಕಾರ ಈ ಪ್ರಕರಣ ಮುಂದಿಟ್ಟು ಕೊಂಡು ನಗರ ಸೇರಿದಂತೆ ಜಿಲ್ಲೆಯ ಪೊಲೀಸ್ ಇಲಾಖೆಗೆ ಸಮಗ್ರವಾಗಿ ಸರ್ಜರಿ ಮಾಡಬೇಕಾದ ಅನಿವರ್ಯತೆ ಇದೆ.
ಗೃಹ ಮಂತ್ರಿ ಜಿ. ಪರಮೇಶ್ವರ ಅವರೂ ಸಹ ಸ್ಥಳಕ್ಕೆ ಭೆಟ್ಟಿ ನೀಡಿದ್ದರು. ವಿರೋಧ ಪಕ್ಷದವರು ಬೀದಿಗಿಳಿದು ಪ್ರತಿಭಟಿಸಿದ್ದರು.