Headlines

ಕನ್ನಡಕ್ಕೆ `ಸಲಾಮ್’ ಎನ್ನದವರ ಲೈಸನ್ಸ ರದ್ದು..!

ಕನ್ನಡ ಬರೆಸಿ, ಇಲ್ಲದಿದ್ದರೆ ಅಂಗಡಿ ಬಾಗಿಲ ಬಂದ್ ಮಾಡಿಸಿ.

ಪಾಲಿಕೆ ಆಯುಕ್ತ ಉದಯಕುಮಾರ ಅವರೊಂದಿಗೆ ಕರವೇ ಚರ್ಚೆ.‌

ಕರವೇ ಮನವಿಗೆ ಸ್ಪಂದಿಸಿದ ಉದಯ. ಕನ್ನಡ ಕಡ್ಡಾಯ ಕುರಿತಂತೆ ಆದೇಶ.


ಬೆಳಗಾವಿ.
ಗಡಿನಾಡ ಬೆಳಗಾವಿಯಲ್ಲಿ ಕನ್ನಡವೇ ಸಾರ್ವಭೌಮತ್ವ, ಇಲ್ಲಿ ಎಲ್ಲರೂ ಕನ್ನಡಕ್ಕೆ ಪ್ರಾತಿನಿಧ್ಯ ನೀಡಲೇಬೇಕು, ಅದನ್ನು ಯಾರೇ ಧಿಕ್ಕರಿಸಿ ಮುನ್ನಡೆದರೆ ಅವರ ಬಾಲ ಕಟ್ ಮಾಡುವ ಕೆಲಸವನ್ನು ಮಹಾನಗರ ಪಾಲಿಕೆ ಮಾಡಬೇಕು,


ಇಂತಹುದೊಂದು ಬಹುಮುಖ್ಯವಾದ ಬೇಡಿಕೆ ಇಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆಯವರು ಪಾಲಿಕೆಯ ಉಪ ಆಯುಕ್ತ ಉದಯಕಯಮಾರ ತಳವಾರ ಅವರೊಂದಿಗೆ ಸುಧೀರ್ಘ ಚರ್ಚೆ ನಡೆಸಿತು,


ಗಡಿನಾಡಲ್ಲಿ ಕನ್ನಡಕ್ಕೆ ಪ್ರಾತಿನಿಧ್ಯ ಸಿಗಬೇಕು, ಸರ್ಕಾರ ಹಾಕಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅಂಗಡಿಕಾರರು ಪಾಲನೆ ಮಾಡಬೇಕು, ಇಲ್ಲದಿದ್ದರೆ ಅವರ ಲೈಸನ್ಸ್ ರದ್ದು ಮಾಡಬೇಕು ಎಂದು ಕರವೇ ಮುಖಂಡರು ಮನವಿ ಮಾಡಿದರು,

ಇದಕ್ಕೆ ಸ್ಪಂದಿಸಿದ ಉಪ ಆಯುಕ್ತರು ಈ ನಿಟ್ಟಿನಲ್ಲಿ ಖಡಕ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು,
ಇದೇ ಸಂದರ್ಭದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಎಸ್ಸಿ ಎಸ್ಟಿ ಸಂಘದ ಅಡಾಕ್ ಅಧ್ಯಕ್ಷರಾಗಿ ನೇಮಕಗೊಂಡ ಉದಯಕುಮಾರ ತಳವಾರ ಅವರನ್ನು ಕರವೇ ಕಾರ್ಯಕರ್ತರು, ದಲಿತ ಸಂಘಟನೆಗಳವರು ಸನ್ಮಾನಿಸಿದರು.
ದೀಪಕ ಗುಡಗನಟ್ಟಿ, ಮಹಾದೇವ ತಳವಾರ, ಗಣೇಶ ರೋಕಡೆ, ಸತೀಶ ಗುಡದವರ, ರಮೇಶ ಯರಗನ್ನವರ, ಸಂತೋಷ ತೇಲಿಮನಿ, ಬಸವರಾಜ ಅವರೊಳ್ಳಿ,, ಪ್ರಕಾಶ ಲಮಾಣಿ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು,

Leave a Reply

Your email address will not be published. Required fields are marked *

error: Content is protected !!