Headlines

ಘಟಪ್ರಭಾ ಕೇಸ್ – 2 ವಾರದೊಳಗೆ ಉತ್ತರ ಕೊಡಿ..!

ದಲಿತ ಮಹಿಳೆಗೆ ಅವಮಾನ ಕೇಸ್
ಎಸ್ಪಿಗೆ ಉತ್ತರಿಸುವಂತೆ ಹೈಕೋರ್ಟ ಸೂಚನೆ
.

ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದರ ವಿಡಿಯೋ ಪರಿಗಣಿಸದ ಘಟಪ್ರಭಾ ಪೊಲೀಸ್.

ಆರೋಪಿಗಳ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದ ಖಾಕಿ.

ಹೈಕೋರ್ಟ್ ಗೆ ದೂರು ನೀಡಿದ ದಲಿತ ಮಹಿಳೆ. ತನಿಖೆ ವ್ಯಾಪ್ತಿ ಬದಲಿಸಲು ಮನವಿ.


ಬೆಳಗಾವಿ.

ತಾಲೂಕಿನ ಹಳ್ಳಿಯೊಂದರಲ್ಲಿ ನಡೆದ ಅವಮಾನವೀಯ ಘಟನೆ ಹೈಕೋರ್ಟ ಗಂಭೀರವಾಗಿ ಪರಿಗಣಿಸಿದ ಬೆನ್ನ ಹಿಂದೆಯೇ ಘಟಪ್ರಭಾದಲ್ಲಿ ದಲಿತ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಪ್ರಕರಣದಲ್ಲಿ ಬೆಳಗಾವಿ ಎಸ್ಪಿಗೆ ವಿವರಣೆ ಕೇಳಿ ಧಾರವಾಡ ಹೈಕೋರ್ಟ್ ನೋಟಿಸ್ ನೀಡಿದೆ.


ಘಟಪ್ರಭಾ ಪ್ತಕರಣದಲ್ಲಿ ಮಹಿಳೆಯನ್ನು ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದರ ಬಗ್ಗೆ ವಿಡಿಯೋ ದೃಶ್ಯಾವಳಿಗಳು ಇದ್ದರೂ ಕೂಡ ಪೊಲೀಸರು ಅದನ್ನು ಸಾಕ್ಷಿ ಎಂದು ಪರಿಗಣಿಸದೇ ಇರುವುದರ ಬಗ್ಗೆ ಸಂತ್ರಸ್ತೆ ಹೈಕೋರ್ಟ ಗಮನಕ್ಕೆ ತಂದಿದ್ದರು.,
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾರಗಳಲ್ಲಿ ಉತ್ತರಿಸುವಂತೆ ಧಾರವಾಡ ಹೈಕೋರ್ಟ ಎಸ್ಪಿಗೆ ಸೂಚನೆ ನೀಡಿದೆ
ಘಟಪ್ರಭಾ ಪೊಲೀಸರು ಆರೋಪಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ

ಇದರಿಂದ ತನಗೆ ಸರಿಯಾದ ನ್ಯಾಯ ಸಿಗುವುದಿಲ್ಲವೆಂದು ಆರೋಪಿಸಿ ದಾರವಾಡದಲ್ಲಿರುವ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಸಂತ್ರಸ್ತ ಮಹಿಳೆಯ ಮನವಿ ಸ್ವೀಕರಿಸಿದ ನ್ಯಾಯಾಲಯ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಸಂತ್ರಸ್ತ ಹೇಳಿಕೆ:– ಈ ಬಗ್ಗೆ ಸಂತ್ರಸ್ತ ಮಹಿಳೆ ಹೇಳಿಕೆ ನೀಡಿದ್ದು ನಾನು 36 ಜನರ ಮೇಲೆ ಮೊದಲು ದೂರು ನೀಡಿದ್ದೆ ಆದರೆ ಘಟಪ್ರಭಾ ಪೊಲೀಸರು 14 ಜನರ ಮೇಲೆ ಮಾತ್ರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅದರಲ್ಲಿ ಒಬ್ಬ ಆರೋಪಿಯನ್ನು ಮಾತ್ರ ಬಂಧಿಸಿದ್ದಾರೆ. ಉಳಿದ ಆರೋಪಿಗಳು ಘಟಪ್ರಭಾದಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದು ಅವರೆಲ್ಲ ನನಗೆ ಈಗಾಗಲೆ ಹಲವಾರು ಬಾರಿ ದೂರನ್ನು ವಾಪಾಸು ತೆಗೆದುಕೊಳ್ಳಬೇಕೆಂದು ಬೇದರಿಕೆ ಹಾಕಿದ್ದಾರೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದರು ಸಹ ನನ್ನ ಸಹಾಯಕ್ಕೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ,


ಅಲ್ಲದೆ ಬೆಳಗಾವಿಯಲ್ಲಿ ನಡೆದ ವಿಧಾಸಭೆಯ ಚಳಿಗಾಲದ ಅಧಿವೇಶನಕ್ಕೆ ಎರಡು ದಿನ ಮೊದಲು ತರಾತುರಿಯಲ್ಲಿ ರಾತ್ರೋರಾತ್ರಿ ಆರೋಪ ಪಟ್ಟಿಯನ್ನು ತಯಾರಿಸಿ ನ್ಯಾಯಾಲಯಕ್ಕೆ ನೀಡಿದ್ದಾರೆ. ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿ ವಿಡಿಯೋ ಹಾಗೂ ಪೋಟೋಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸದೆ ಎಕಪಕ್ಷಿಯಾಗಿ ಆರೋಪಿಗಳ ಪರವಾಗಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ನನ್ನನ್ನು ಅರೆಬೆತ್ತಲೆಗೊಳಿಸಿ ಮಾರಣಾಂತಿಕ ಹಲ್ಲೆಗೊಳಿಸಿದರು ಸಹ 307 ಕೊಲೆ ಯತ್ನದ ಸೆಕ್ಷನ್ ತೆಗೆದು ಹಾಕಿದ್ದಾರೆ. ಜಿಲ್ಲಾ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ನಿರಾಕರಿಸಿದರೂ ಸಹ ಘಟಪ್ರಭಾ ಪೊಲೀಸರು ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಿಲ್ಲ ಆದ್ದರಿಂದ ಈ ಪ್ರಕರಣದ ತನಿಖೆಯನ್ನು ಮಾನ್ಯ ನ್ಯಾಯಾಲಯ ಬೇರೆ ವಿಭಾಗದ ತನಿಖೆಗೆ ನೀಡಿ ನನಗೆ ನ್ಯಾಯ ಒದಗಿಸಬೇಕೆಂದು ಕೇಳಿಕೊಂಡು ಹೈಕೋಟರ್್ಗೆ ಮೊರೆ ಹೋಗಿದ್ದೇನೆ ಮಾನ್ಯ ನ್ಯಾಯಾಲಯ ನನ್ನ ಮನವಿಯನ್ನು ಸ್ವೀಕರಿಸಿ ಪೊಲೀಸರಿಗೆ ನೋಟಿಸು ಜಾರಿ ಮಾಡಿದ್ದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!