ಅಕ್ರಮವಾಗಿ ಅಂಗಡಿ ನಡೆಸಲು ಕೊಟ್ಟಿದ್ದು ಏಕೆ? ಅದರ ಹಿಂದಿನ ಉದ್ದೇಶವಾದರೂ ಏನು? ಜಿಲ್ಲಾಧಿಕಾರಿಗಳು ಕೊಟ್ಟರು ನೋಟೀಸ್. ಆಹಾರದ ಗುಣಮಟ್ಟವೂ ಅಷ್ಟಕಷ್ಟೇ.!
ಬೆಳಗಾವಿ.
ಪರವಾನಗಿ ಪಡೆಯದೇ ವ್ಯಾಪಾರು ವಹಿವಾಟು ನಡೆಸುತ್ತಿದ್ದ ಅಂಗಡಿಗಳ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಽಕಾರದ ಜಿಲ್ಲಾ ಅಽಕಾರಿಗಳು ದಾಳಿ ಮಾಡಿದ್ದಾರೆ.

ನಗರದ ಕೇಂದ್ರ ಬಸ್ ನಿಲ್ದಾಣ ದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ. ಅಷ್ಟೆ ಅಲ್ಲ
ನೋಟೀಸ್ ಸಹ ಜಾರಿ ಮಾಡಿದ್ದಾರೆ.
