Headlines

ಸಾಧಿಸಬೇಕಾಗಿದ್ದು ಇನ್ನೂ ಸಾಕಷ್ಟಿದೆ..

ಬೆಳಗಾವಿ. ನಾವು ನಿರ್ದಿಷ್ಟ ಗುರಿ ಇಟ್ಡುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಂಬೆಗಾಲನ್ಬು ಇಟ್ಟಿದ್ದೇವು.

ಆದರೆ ನಮಗೆ ಗೊತ್ತಿಲ್ಲದಂತೆ ತಮ್ಮೆಲ್ಲರ ಒ್ರೋತ್ಸಾಹದಿಂದ ನಾವು ಎಲ್ಲರನ್ನು ತಲುಪಿದ್ದೇವೆ ಎನ್ನುವ ಹೆಮ್ಮೆ ನಮಗಿದೆ

ನಾವು e belagavi.com ವೆಬ್ ಸೈಟ್ ಆರಂಭಮಾಡಿ ಅಗಸ್ಟ 14. ಅವತ್ತೇ ಮೊದಲ ಸುದ್ದಿಯನ್ಬು ಪೋಸ್ಟ ಮಾಡಿದ್ದೇವು. ಆದರೆ ಈಗ ಅದು ಹೆಮ್ಮರವಾಗಿ ಬೆಳೆದಿದೆ‌ ಇಲ್ಲಿ ನಾವು ಬರೀ ಸರ್ಕಾರಿ ಸುದ್ದಿನೋ ಅಥವಾ ಉಳಿದ ವೆಬ್ ಸೈಟಗಳಲ್ಲಿ ಬರುವಂತೆ ಎಲ್ಲ ಸುದ್ದಿಗಳನ್ಬು ಪೋಸ್ಟ್ ಮಾಡಿ ಓದುಗರಿಗೆ ಕಿರಿಕಿರಿ ಮಾಡುವ ಗೋಜಿಗೆ ಹೋಗಲಿಲ್ಲ.

ಬದಲಾಗಿ ಸುದ್ದಿಯೊಳಗಿನ ಸುದ್ದಿಯನ್ನು ಹೆಕ್ಕಿ ತೆಗೆದು ಅದನ್ನು ಯಥಾವತ್ತಾಗಿ ಓದುಗರ ಮುಂದಿಡುವ ಕೆಲಸವನ್ನು ಮಾಡಿದ್ದೇವೆ.

ಅಂತಹ ಸುದ್ದಿಗಳು ಬಂದ ಸಂದರ್ಭದಲ್ಲಿ ಕೆಲವರಿಗೆ ಇರಿಸು ಮುರಿಸು ಆಗಿರಬಹುದು. ಇನ್ನೂ ಕೆಲವರಿಗೆ ಅದನ್ನು ಅರಗಿಸಿಕೊಳ್ಳಲು ಆಗದೇ ಇರಬಹುದು. ಅದು ಅವರಿಗೆ ಬಿಟ್ಟಿದ್ದು. ಸ್ಪಷ್ಟ ವಾಗಿ ಹೇಳಬೇಕೆಂದರೆ, ಅಂತಹ ಸತ್ಯದ ಸುದ್ದಿಗಳನ್ನು ಅರಗಿಸಿಕೊಳ್ಳದವರು e belagavi. Com ಗೆ ಬೆದರಿಕೆ ಹಾಕುವ ಕೆಲಸ ಮಾಡಿದರು. ಧಮಕಿ ಸಹ ಕೊಟ್ಟರು. ಅಙತಹವರಿಗೆ ಯಾವ ರೀತಿ ಉತ್ತರ ಕೊಡಬೇಕೊ ಅದೇ ತಕ್ಕ ಉತ್ತರವನ್ನು ಸುದ್ದಿಯ ಮೂಲಕ ಕೊಡುವ ಕೆಲಸವನ್ನು ಮಾಡಲಾಗಿದೆ.

ಇಲ್ಲಿ ದಾಖಲೆ ಸಮೇತ ಮಾತನಾಡುವುದಾದರೆ, ಘಟಪ್ರಭಾ ದಲ್ಲಿ ದಲಿತ ಮಹಿಳೆ ಮೇಲೆ ನಡೆದ ದೌರ್ಜನ್ಯ ವನ್ನು ಯಾವುದೇ ಮುಲಾಜಿಲ್ಲದೆ ತೆರೆದಿಡುವ ಕೆಲಸವನ್ನು ಮಾಡಲಾಗಿತ್ತು. ಆದರೆ ಇಲ್ಲಿ ದಾಖಲೆ ಸಮೇತ ಬರೆದರೂ ಕೂಡ ತಪ್ಪಿತಸ್ಥರ ಮೇಲೆ ಕ್ರಮ ತೆಗೆದು ಕೊಳ್ಳಬೇಕಾದ ಪೊಲೀಸ್ ಅಧಿಕಾರಿಗಳು ವಾಸ್ತವ ವರದಿ ಪ್ರಕಟಿಸಿದ e belagavi.com. ಗೆ ನೋಟೀಸ್ ಕೊಡವ ಮೂಲಕ ಹೆದರಿಸುವ ಕೆಲಸ ಮಾಡಿದರು. ಆದರೆ ಅದಕ್ಕೆ ನಾವು ಕ್ಯಾರೆ ಎನ್ನಲಿಲ್ಲ. ಈಗ ಕೋರ್ಟ ಆ ದಲಿತ ಮಹಿಳೆಗೆ ನ್ಯಾಯ ಒದಗಿಸುವ ಕೆಲಸ ಮಾಡಿದೆ. ಒಂದು ರೀತಿಯಲ್ಲಿ ನಮ್ಮ ವರದಿಗೆ ಮಾನ್ಯತೆ ಸಿಕ್ಕಂತಾಗಿದೆ.‌ಇನ್ಬು ಬೆಳಗಾವಿ‌ ಮಹಾನಗರ ಪಾಲಿಕೆ ವಿಷಯದಲ್ಲೂ ಇದೇ ರೀತಿ ಬೆಳವಣಿಗೆಗಳು ಆಗಿವೆ.

ಈ ಎಲ್ಲ‌ಕಾರದಿಂದ ಅತ್ಯಂತ ಕಡಿಮೆ ಅವಧಿಯಲ್ಲಿ e belagavi.com ವೀಕ್ಷಕರ ಸಂಖ್ಯೆ ಬರೊಬ್ವರಿ 80 ಸಾವಿರ ಗಡಿ ದಾಟಿದೆ.

ಇನ್ನು ಕಳೆದ 70 ದಿನಗಳ ಹಿಂದೆ YouTube ಆರಂಭಿಸಲಾಯಿತು. ಅಚ್ಚರಿ ಸಂಗತಿ ಎಂದರೆ, ಈ e belagavi tyoutube subscribe ರ ಸಂಖ್ಯೆ 4 ಸಾವಿರ ಗಡಿ ದಾಟಿದರೆ, ವೀಕ್ಷಕರ ಸಂಖ್ಯೆ 1 ಮಿಲಿಯನ್ ದಾಟಿದೆ. ಇದರ ಶ್ರೇಯಸ್ಸು ತಮಗೆ ಸಲ್ಲಬೇಕು.

ಇಲ್ಲಿ ಸ್ಪಷ್ಟ ಮಾತುಗಳಲ್ಲಿ ಭರವಸೆ ಕೊಡುವುದು ಏನೆಂದರೆ, ಮುಂಬರುವ ದಿನಗಳಲ್ಲಿ ಕೂಡ ನಾವು ಸುದ್ದಿ ವಿಷಯದಲ್ಲಿ ರಾಜೀ ಮಾತೇ ಇಲ್ಲ. ಜೊತೆಗೆ ಯಾರಿಗೂ ಹೆದರುವ, ಬಗ್ಗುವ ಮಾತೇ ಇಲ್ಲ. ನಿಮ್ಮ‌ ಪ್ರೋತ್ಸಾಹದ ನಿರೀಕ್ಷೆಯಲ್ಲಿ..

ಇ ಬೆಳಗಾವಿ ಟೀಮ್. ಬೆಳಗಾವಿ

Leave a Reply

Your email address will not be published. Required fields are marked *

error: Content is protected !!