ಬೆಳಗಾವಿ.ಇಲ್ಲಿನ ಜಿಲ್ಲಾ ಆಸ್ಪತ್ರೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಖತರನಾಕ್ ಕಳ್ಳನನ್ನು ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ.
ಬೈಲಹೊಂಗಲ ತಾಲೂಕಿನ ಸಿಗೇಹಳ್ಳಿಯ ವಿಠ್ಠಲ ಆರೇರ ಎಂಬುವನೇ ಬಂಧಿತ ಆರೋಪಿ.

ಬಂಧಿತ ವ್ಯಕ್ತಿಯಿಂದ ಸುಮಾರು ಮೂರು ಲಕ್ಷ ಮೂವತ್ತೈದು ಸಾವಿರ ರೂ ಮೌಲ್ಯದ13 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ
ಪೊಲೀಸ್ ಆಯುಕ್ತರು, ಡಿಸಿಪಿ ಇವರ ಮಾರ್ಗದರ್ಶನ ದಲ್ಲಿ ಮಾರ್ಕೆಟ್ ಎಸಿಪಿ ಕಟ್ಟಿಮನಿ ನೇತೃತ್ವದಲ್ಲಿ ಸಿಪಿಐ ವಿಶ್ವನಾಥ ಕಬ್ಬೂರ ಮತ್ತು ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿದ್ದಾರೆ