Headlines

ಇದು ಕನ್ನಡ ಪ್ರೇಮ..!

ಪಾಲಿಕೆ ಆಯುಕ್ತರ ಕನ್ನಡ ಪ್ರೇಮಕ್ಕೊಂದು ಕನ್ನಡಿಗರ ಮೆಚ್ಚುಗೆ.

ಕನ್ನಡಿಗರ ಭಾವನೆ ಅರಿತ ಆಯುಕ್ತ ದುಡಗುಂಟಿ.

ಪಾಲಿಕೆಯಲ್ಲೂ ಕನ್ನಡತನ ಎತ್ತಿಹಿಡಿದಿದ್ದ ಆಯುಕ್ತರು.

ಬೆಳಗಾವಿ.

ಗಡಿನಾಡ ಬೆಳಗಾವಿಯಲ್ಲಿ ಅಧಿಕಾರಿಗಳದ್ದು ತಂತಿ ಮೇಲೆ ನಡಿಗೆ. ಎಲ್ಲೂ ಹೆಚ್ಚು ವಾಲಿ ಕೆಲಸ ಮಾಡೋಕೆ ಆಗಲ್ಲ.

ಎಲ್ಲೊ ಒಂದು ಕಡೆ ಸರಿಯಿದ್ದರೂ ಕೂಡ ಅದೇ ರೀತಿ ಮಾಡ ಹೊರಟರೆ ಹೆಸರಿಡುವವರೇ ಹೆಚ್ಚು. ಹೀಗಾಗಿ ಅಧಿಕಾರಿಗಳು ಎಲ್ಲಿಯೂ ಹೆಚ್ಚು ಎಂದು ತೋರಿಸಿಕೊಳ್ಳದೇ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮರಾಠಿ ಭಾಷಿಕ ಸದಸ್ಯರೊಬ್ಬರು ಮರಾಠಿಯಲ್ಲಿಯೇ ಆಯುಕ್ತರನ್ನು ಪ್ರಶ್ನೆ ಮಾಡಿದ್ದರು

ಆದರೆ ಅದಕ್ಕೆ ಆಯುಕ್ತ ಅಶೋಕ ದುಡಗುಂಟಿ ಅವರು ಉತ್ತರಿಸಲೇ ಇಲ್ಲ .ಕೊನೆಗೆ ಅವರು ಏನ್ ಹೇಳಿದರು ಎನ್ನುವುದೇ ನನಗೆ ಅರ್ಥ ಆಗಿಲ್ಲ ಎಂದರು. ಕೊನೆಗೆ ಆ ಸದಸ್ಯರು ಅದೇ ಪ್ರಶ್ನೆಯನ್ನು ಕನ್ನಡದಲ್ಲಿ ಹೇಳಿದಾಗ ಅದಕ್ಕೆ ಸ್ಪಷ್ಟ ಉತ್ತರ ನೀಡಿದರು. ಅಂದರೆ ಇಲ್ಲಿ ಪಾಲಿಕೆ ಆಯುಕ್ತರ ಕನ್ನಡ ಪ್ರೇಮವನ್ನು ಮೆಚ್ಚಲೇ ಬೇಕು.

Youtube- ssubscribe Ebelagavi

ರಾಜ್ಯದಲ್ಲಿ ಈಗ ಕನ್ನಡ ನಾಮಫಲಕ ಅಭಿಯಾನ ಆರಂಭವಾಗಿದೆ. ಕನ್ನಡ ಪರ ಸಙಘಟನೆಗಳು ದೊಡ್ಡ ಮಟ್ಟದಲ್ಲಿಯೇ ಉಗ್ರ ಹೋರಾಟವನ್ನು ಕೈಗೆತ್ತಿಕೊಂಡಿವೆ ಅನ್ಯ ಭಾಷಿಕ ಫಲಕಗಳು ಚಿಂದಿ ಚಿಂದಿ ಆಗುತ್ತಿವೆ. ಬೆಳಗಾವಿಯಲ್ಲೂ ಆಗುತ್ತಿವೆ.

ಕಳೆದ ದಿನ ಸಾಮಾಜಿಕ ಜಾಲತಾಣದಲ್ಲಿ ಅನ್ನೊತ್ಸವದ ಫಲಕಗಳಲ್ಲಿ ಕನ್ನಡಕ್ಕೆ ಮಾನ್ಯತೆ ಇರದಿರುವ ಬಗ್ಗೆ ಪೋಸ್ಟ್ ಹಾಕಿದ್ದರು. ಅದನ್ನು ಗಮನಿಸಿದ್ದೇ ತಡ ಪಾಲಿಕೆ ಆಯುಕ್ತರು ಸರ್ಕಾರದ ಆದೇಶ ಉಲ್ಲಂಘಿಸಿದ ಫಲಕವನ್ನು ಕಿತ್ತೊಗೆಯುವ ಕೆಲಸ ಮಾಡಿದರು. ಇದು ಕನ್ನಡಿಗರಿಗೆಬ ಸಂತಸ ತಂದಿದೆ.

Leave a Reply

Your email address will not be published. Required fields are marked *

error: Content is protected !!