ಬೆಳಗಾವಿ.
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಅವರು ಇದೇ ದಿ.2 ರಂದು ಬೆಳಗಾವಿಗೆ ಭೆಟ್ಟಿ ನೀಡಲಿದ್ದಾರೆ.

155 ಪೌರಕಾರ್ಮಿಕರಿಗೆ ನೇಮಕಾತಿ ಪತ್ರ, ಪ್ಲ್ಯಾಸ್ಟಿಕ್ ರಸ್ತೆ ನಿರ್ಮಾಣ, ಹೂವಿನಿಂದ ಅಗರಬತ್ತಿ ತಯಾರಿಕೆಗೆ ಅವರು ಚಾಲನೆ ನೀಡಲಿದ್ದಾರೆ.


Youtube subscribe– e
ಪ್ರಾಯೋಗಿಕವಾಗಿ ಬೆಳಗಾವಿ ಮಹಾನಗರ ಪಾಲಿಕೆಯ ಮುಂದಿರುವ ರಸ್ತೆಯನ್ನು ಪ್ಲ್ಯಾಸ್ಟಿಕ್ ರಸ್ತೆ ನಿರ್ಮಾಣ ಮಾಡಲು ಪಾಲಿಕೆಯ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು.
ಶಾಸಕ ಅಭಯ ಪಾಟೀಲರ ಮಾರ್ಗದರ್ಶನ ದಲ್ಲಿ ಪಾಲಿಕೆ ಆಯುಕ್ತರು ಸೇರಿದಂತೆ ಮತ್ತಿತರರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದರು.