ಜನೇವರಿ 22 ರಂದು ಪ್ರತಿ ಮನೆ ಮುಂದೆ ಭಗವಾಶ್ವಜ.
ಐದು ಹಣತೆ ದ್ವೀಪ ಹಚ್ಚುವ ತೀರ್ಮಾನ.
ಮಂದಿರದಲ್ಲಿ ರಾಮಜಪ. ಪ್ರತಿ ವಾರ್ಡನಲ್ಲೂ ಪೂರ್ವಸಿದ್ಧತಾ ಸಭೆಗಳು
ವಾರ್ಡ ನಂಬರ 43 ರಲ್ಲಿ ಗುರುವಾರ ನಡೆದ ಸಭೆ
ಬೆಳಗಾವಿ.
ಅಯೋಧ್ಯೆ ಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಯನ್ಬು ಕಣ್ತುಂಬಿಕೊಳ್ಳಲು ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿ ಗಣ್ಯರ ಉಪಸ್ಥಿತಿ ಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕೂಡ ರಾಮಮಂದಿರ ಉದ್ಘಾಟನೆ ದಿನ ಯಾವ ರೀತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎನ್ನುವುದರ ಬಗ್ಗೆ ಚರ್ಚೆಗಳು ನಡೆದಿವೆ

ಸಂಘ ಪರಿವಾರದ ಮುಖಙಡರು ಪಕ್ಷ ಬೇಧ ಮರೆತು ಅಯೋಧ್ಯೆ ರಾಮಮಂದಿರದ ಆಮಂತ್ರಣ ಪತ್ರಿಕೆಯನ್ನು ಮನೆ ಮನೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.

ಇನ್ನು ಜನರೇ ಸ್ವಯಂ ಸ್ಪೂರ್ತಿಯಾಗಿ ಜನೇವರಿ 22 ರಂದು ದೀಪಾವಳಿಯಂತೆ ಆಚರಿಸುವ ತೀರ್ಮಾನ ಮಾಡಿದ್ದಾರೆ
ಪ್ರತಿ ಮನೆಯ ಮುಂದೆ ಐದು ಪಣತಿ ದೀಪ ಹಚ್ಚುವುದು, ಪ್ರತಿ ಮನೆಯ ಮುಂದೆ ಭಗವಾ ಧ್ವಜ ಹಚ್ಚುವ ಮಹತ್ತರ ತೀರ್ಮಾನವನ್ನು ಮಾಡಲಾಗುತ್ತಿದೆ.

ಗಮನಿಸಬೇಕಾದ ಸಂಗತಿ ಎಂದರೆ ಈ ನಿಟ್ಟಿನಲ್ಲಿ ಪ್ರತಿ ವಾರ್ಡಗಳಲ್ಲಿ ಪೂರ್ವ ಸಿದ್ಧತೆಯ ಸಭೆಗಳು ನಢಯುತ್ತಿವೆ. ಗುರುವಾರ ಸಂಜೆ ವಾರ್ಡ ನಂವರ 43 ರಲ್ಲಿ ಪೂರ್ವ ಸಿದ್ಧತೆಯ ಕುರಿತು ಚರ್ಚೆ ಮಾಡಲಾಯಿತು. ಅಷ್ಟೆ ಅಲ್ಲ. ಪ್ರತಿಯೊಂದು ಮನೆಗೆ ಹೋಗಿ ಅಕ್ಷತೆ , ಆಮಂತ್ರಣ ಪತ್ರಿಕೆ ಕೊಟ್ಟು ಆಹ್ವಾನ ತಲುಪಿಸಲು ತೀರ್ಮಾನಿಸಲಾಯಿತು.