
ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗಿತ್ತಂತೆ..
ಸಚಿವೆ ಹೆಬ್ಬಾಳಕರ ವಿವಾದಾಸ್ಪದ ಹೇಳಿಕೆ. ಕನ್ನಡಿಗರ ವ್ಯಾಪಕ ಆಕ್ರೋಶ. ಚಿಕ್ಕೋಡಿ ಕಾರದಗಾದಲ್ಲಿ ಹೇಳಿದ ಸಚಿವೆ. ಬೆಳಗಾವಿ. ಮಾತಿನ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತೇ ಸುದ್ದಿಯಾಗಿದ್ದಾರೆ. ಅಷ್ಟೆ ಕನ್ನಡಿಗರ ಮನಸ್ಸಿಗೆ ಘಾಸಿಯನ್ನುಂಟು ಮಾಡಿದ್ದಾರೆ. ಕಾರದಗಾ ಗ್ರಾಮದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿಕೆ ನೀಡಿ ಅನಗತ್ಯ ವಿವಾದವನ್ನು ಮೈಮೇಲೆ ಎಳೆದು ಕೊಂಡಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂದು ಅವರು ಉಲ್ಲೇಖ ಮಾಡಿದ್ದಾರೆ.ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮ. ಕನ್ನಡ…