ಕವಟಗಿಮಠ ಏನ್ ಹೇಳ್ತಾರೆ…?
ಕುತೂಹಲ ಕೆರಳಿಸಿದ ಸುದ್ದಿಗೋಷ್ಠಿ. ಶುಕ್ರವಾರ ಬೆಳಿಹ್ಗೆ 11 ಕ್ಕೆ ಹೊಟೇಲ್ ಸಂಕಮದಲ್ಲಿ ನಡೆಯಲಿರುವ ಸುದ್ದಿಗೋಷ್ಠಿ. ಕವಟಗಿಮಠ ಎಂ.ಪಿ ಚುನಾವಣೆ ಬಿಜೆಪಿ ಟಿಕೇಟ್ ಆಕಾಂಕ್ಷಿ. ಬೆಳಗಾವಿ. ಕೆಎಲ್ ಇ ಸಂಸ್ಥೆಯ ನಿರ್ದೇಶಕ, ವಿಧಾನ ಪರಿಷತ್ತಿನ ಮಾಜಿ ಸದಸ್ಯರೂ ಆಗಿರುವ ಮಹಾಂತೇಶ ಕವಟಗಿಮಠ ಶುಕ್ರವಾರ ಬೆಳಿಗ್ಗೆ ಕರೆದಿರುವ ಸುದ್ದಿಗೋಷ್ಠಿಯಲ್ಲಿ ಯಾವ ವಿಷಯ ಪ್ರಸ್ತಾಪಿಸಬಹುದು? ಇಂತಹುದೊಂದು ಕುತೂಹಲ ಬಹುತೇಕರಲ್ಲಿದೆ. ಬೆಳಗಾವಿ ಲೋಕಸಭೆ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿರುವ ಅವರು ಯಾವ ವಿಷಯವನ್ಬು ಪ್ರಸ್ತಾಪಿಸಬಹುದು ಎನ್ನುವ ಚರ್ಚೆ ಕೂಡ ನಡೆದಿದೆ.