Headlines

ಬೆಳಗಾವಿ ಪಾಲಿಕೆ- BJP ಅಧಿಕಾರ ತಪ್ಪಿಸುವ ಹುನ್ನಾರ

ಬೆಳಗಾವಿ.

ಗಡಿನಾಡ ಬೆಳಗಾವಿ‌ ಮಹಾನಗರ ಪಾಲಿಕೆಯ ಮೇಯರ ಮತ್ತು ಉಪಮೇಯರ್ ಚುನಾವಣೆ ಬರುವ ಫೆಬ್ರುವರಿ 6 ಕ್ಕೆ ಮುಗಿದು ಹೊಸಬರು ಆ ಗದ್ದುಗೆಗೆ ಏರಬೇಕು.

ಆದರೆ ಸಧ್ಯ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಿಗದಿತ ಅವಧಿಯಲ್ಲಿ ಈ ಚುನಾವಣೆ ನಡೆಯುವ ಯಾವುದೇ‌ ಲಕ್ಷಣಗಳು ಕಾಣಸಿಗುತ್ತಿಲ್ಲ

ಈ ಮೇಯರ್ ಮತ್ತು ಉಪಮೇಯರ ಚುನಾವಣೆಯನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತರು ನಡೆಸಬೇಕು. ಆದರೆ ಪಾಕಿಕೆಯಲ್ಲಿ ಬಿಜೆಪಿ ಹಿಡಿತ ಇರುವ ಕಾರಣ ಮೇಯರ ಚುನಾವಣೆ ವಿಳಂಬ ಮಾಡಿ ಬಿಜೆಪಿಗರನ್ನು ಅಧಿಕಾರ ವಂಚಿತರನ್ನಾಗಿ ಮಾಡುವ ಹುನ್ನಾರ ಸರ್ಕಾರ ಮಟ್ಟದಲ್ಲಿ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಈ ಹಿಂದೆ ಕೂಡ ಬೇರೆ ಬೇರೆ ಕಾರಣದಿಂದ ಮೇಯರ್‌ ಚುನಾವಣೆ ತಡವಾಗಿ ನಡೆದಿತ್ತು.ಗಮನಿಸಬೇಕಾದ ಸಂಗತಿ ಎಂದರೆ, ಈಗಾಗಲೇ ನಿಗದಿತ ಅವಧಿಯೊಳಗೆ ಚುನಾವಣೆ ನಡೆಸಬೇಕು ಎಂದು ಕೋರಿ ಖುದ್ದು ಮೇಯರ್ ಅವರೇ ಪ್ರಾದೇಶಿಕ ಆಯುಕ್ತರಿಗೆ ಪತ್ರವನ್ಬು ಬರೆದಿದ್ದಾರೆ ಎಂದು ಗೊತ್ತಾಗಿದೆ.

ಇಲ್ಲಿ ಫೆಬ್ರವರಿ 6 ಕ್ಕೆ ಹೊಸ ಮೇಯರ್ ಮತ್ತು ಉಪಮೇಯರ್ ಆಯ್ಕೆ ನಡೆಯಬೇಕು.ಆದರೆ ಇಲ್ಲಿಯವರೆಗೆ ಅಂತಹ ಪ್ರಕ್ರಿಯೆಗಳು‌ ನಡೆದ ಹಾಗೆ ಕಾಣಿಸುತ್ತಿಲ್ಲ. ಇಲ್ಲಿ ಚುನಾವಣೆ ನಡೆಸುವ ಜವಾಬ್ದಾರಿ ಪಾಲಿಕೆ ಆಯುಕ್ತರಿಗೆ‌ ಮತ್ತು ಡಿಸಿಗೆ ಇರುವುದಿಲ್ಲ.‌ ಎಲ್ಲವನ್ನು ಪ್ರಾದೇಶಿಕ ಆಯುಕ್ತರೇ ಮಾಡಬೇಕು. ಇಲ್ಲಿ ಸ್ವಲ್ಪ ವಿಳಂಬ ಮಾಡಿದರೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಆಗುತ್ತದೆ. ನಂತರ ಚುನಾವಣೆ ದಿನಾಂಕ ನಿಗದಿ ಮಾಡಲು ನಗರಾಭಿವೃದ್ಧಿ ಇಲಾಖೆ ಹಸಿರು ನಿಶಾನೆ ತೋರಬೇಕು. ಒಂದ್ಸಲ ಬೆಂಗಳೂರಿಗೆ ಕಡತ ಹೋದರೆ ಅದು ಬೇಗ ವಾಪಸ್ಸು ಬರುವುದು ಕಷ್ಟ ಎನ್ನಬಹುದು.ಏಕೆಂದರೆ ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಇರುವುದರಿಂದ ಸಹಜವಾಗಿ ಆ ಅಧಿಕಾರ ತಪ್ಪಿಸುವ ಕೆಲಸಕ್ಕೆ ಸರ್ಕಾರ ತಂತ್ರಗಾರಿಕೆ ಮಾಡಬಹುದು ಎನ್ನುವ ಮಾತಿದೆ

.ವಿಜಯಪುರ ದಾರಿಯಲ್ಲಿ ಬೆಳಗಾವಿ

ವಿಜಯಪುರ ‌ಪಾಲಿಕೆಯಲ್ಲಿ ಸದ್ದು ಗದ್ದಲವಿಲ್ಲದೆ ಬಿಜೆಪಿಯಿಂದ ಕಾಂಗ್ರೆಸ್ ಅಧಿಕಾರ ಗಿಟ್ಟಿಸಿಕೊಂಡಿದೆ. ಒಂದು ರೀತಿಯಲ್ಲಿ ಸಚಿವ ಎಂ.ಬಿ.ಪಾಟೀಲರು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಶಾಕ್ ಕೊಟ್ಟಿದ್ದರು..

ಇಲ್ಲಿ ಕೂಡ ಚುನಾವಣೆ ಸಂಬಂಧ ಬಿಜೆಪಿಗರು ಮಾಡಿಕೊಂಡ ಮನವಿಗೆ ಪ್ರಾದೇಶಿಕ ಆಯುಕ್ತರು ಡೋಂಟಕೇರ್ ಎಂದಿದ್ದರು.

ಆದರೆ ಅದೇ ರೀತಿ ಬೆಳಗಾವಿಯಲ್ಲಿಯೂ‌ ಆಗಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸಧ್ಯ ಪಾಲಿಕೆಯಲ್ಲಿ ಕೇಳಿ ಬರುತ್ತಿರುವ ಮಾಹಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ವಿಜಯಪುರ ದಾರಿಯಲ್ಲಿ ಬೆಳಗಾವಿ ಆಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಆ ಒಬ್ಬ ನಗರಸೇವಕ ಕೆಲವರ ಮುಂದೆ ಅನೌಪಚಾರಿಕ ವಾಗಿ ಆಡಿರುವ ಮಾತುಗಳೇ ಸಾಕ್ಷಿ.

ಈಗ ಆ ಮಾತುಗಳು ಪಾಲಿಕೆ ಕಿಂಗ್ ಮೇಕರ್ ಗಮನಕ್ಕೂ ಹೋಗಿದೆ ಎನ್ನಲಾಗಿದೆ. ಆದರೆ ಮುಂದೇನು ಎನ್ನುವ ಪ್ರಶ್ನೆ ಬಹುತೇಕರನ್ನು‌ ಕಾಡುತ್ತಿದೆ

Leave a Reply

Your email address will not be published. Required fields are marked *

error: Content is protected !!