ಅನಗೋಳದಿಂದ ಅಸೋಗಾಕ್ಕೆ ತೆರಳಿ
ಮಲಪ್ರಭಾ ನದಿ ಸ್ವಚ್ಛತಾ ಕಾರ್ಯ
ಬೆಳಗಾವಿ: ಮಲಪ್ರಭಾ ನದಿ ಸ್ವಚ್ಛತೆಗಾಗಿ ಬೆಳಗಾವಿಯ ಅನಗೋಳ ಭಾಗದ ಜನರು ಅಸೋಗಕ್ಕೆತೆರಳಿ ತಮ್ಮ ಸಾಮಾಜಿಕ ಕಳಕಳಿ ತೋರಿಸಿಕೊಟ್ಟಿದ್ದಾರೆ.
ಪ್ರಕೃತಿ ಮತ್ತು ನದಿಯನ್ನು ತಾಯಿ ಎಂದು ಪರಿಗಣಿಸಿ ನಮ್ಮ ಪ್ರತಿಯೊಬ್ಬರ ಜೀವನದಲ್ಲೂಎಷ್ಟು ಉಪಯುಕ್ತವಾಗಿದೆ ಮತ್ತು ಪ್ರತಿಯೊಬ್ಬರೂ ಪ್ರಕೃತಿಯ ರಕ್ಷಣೆಗಾಗಿ ಸೇವೆಯನ್ನು
ಮಾಡಬೇಕು ಎಂದು ನಿರ್ಧರಿಸಿ ಪ್ರತಿ ಭಾನುವಾರ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯ
ಕೈಗೊಂಡಿದ್ದಾರೆ.

ಅದರ ಪ್ರಕಾರ ಜನವರಿ ೨೮ ಮತ್ತು ಫೆಬ್ರವರಿ ೪ ಭಾನುವಾರದಂದು ಖಾನಾಪುರ ತಾಲೂಕಿನ ಅಸೋಗ
ದೇವಸ್ಥಾನದ ವ್ಯಾಪ್ತಿಯ ಮಲಪ್ರಭಾ ನದಿಯನ್ನು ಸ್ವಚ್ಛಗೊಳಿಸಿ ಅಲ್ಲಿಯ ಜನರನ್ನು
ಜಾಗೃತಗೊಳಿಸುವ ಪ್ರಯತ್ನ ಮಾಡಲಾಯಿತು.
ಈ ಕಾರ್ಯದಲ್ಲಿ ಸಪ್ನಾ ಪಾಟೀಲ, ಅನಿತಾ ಕುಲಕರ್ಣಿ, ವಾಣಿ ಜೋಶಿ, ಸ್ನೇಹಲ್ ಹೇಮಗಿರೆ, ಪ್ರವೀಣ ಹೇಮಗಿರೆ, ಪೂಜಾ ಜೋಶಿ, ಅಮರ ಜೋಶಿ, ಅನಿಲ ಕುಲಕರ್ಣಿ, ಅಕ್ಷಯ ಕುಲಕರ್ಣಿ, ಕೇಶವ ಕುಲಕರ್ಣಿ, ಪ್ರಜ್ವಲ್ ಕುಲಕರ್ಣಿ, ವಿನಾಯಕ ದೇಶಪಾಂಡೆ, ಹೃತಿಕ್ ಕೊಲ್ಹಾಪುರೆ, ವಿನಯ್ ಬೆಟಗೇರಿ, ವಿಕ್ರಮ ಜೆ. ಪಾಟೀಲ, ಪ್ರವೀಣ ತಶಿಲ್ದಾರ್, ಗುರುಪ್ರಸಾದ್ ಕುಲಕರ್ಣಿ, ಪ್ರಸನ್ನ ದೇಶಪಾಂಡೆ ಖಾನಾಪುರ, ವಿಕ್ರಮ ಪಾಟೀಲ, ತೇಜಸ್ ಪಾಟೀಲ, ವಿಶಾಲ ಸೋಮನಾಚೆ, ಅವ್ಯಾನ ಕುಲಕರ್ಣಿ ಹಾಗೂ ಅಸೋಗ ಗ್ರಾಮದ ಜನರು ಉಪಸ್ಥಿತರಿದ್ದರು


