ಬಿಜೆಪಿ ಯುವ ಮುಖಂಡ ಪಂಡಿತ್ ಓಗ್ಲೆ ಮೇಲೆ ಹೇಡಿಗಳ ದಾಳಿ. ಖಾನಾಪುರದಲ್ಲಿ ರಮಾಕಾಂತ್ ಕೊಂಡುಸ್ಕರ್ ಅವರ ಸಾರ್ವಜನಿಕ ಪ್ರತಿಭಟನೆ.
ಖಾನಾಪುರ. ಹಿಂದುಸ್ತಾನ ಶ್ರೀರಾಮ ಸೇನೆಯ ಮುಖಂಡ ರಮಾಕಾಂತ ಕೊಂಡುಸ್ಕರ ಮತ್ತೆ ಹಲ್ಲೆ ಮೂಲಕ ವಿವಾದ ದಲ್ಲಿ ಸಿಲುಕಿದ್ದಾರೆ.

:ಕಳೆದ ದಿ. 11ರ ಹಲ್ಯಾಳದಲ್ಲಿ ನಡೆದ ಮರಾಠಾ ಸಮಾಜದ ಗುರುಕುಲ ಭೂಮಿಪೂಜೆ ಸಮಾರಂಭದಲ್ಲಿ ಕೊಂಡುಸ್ಕರ್ ಅವರು ಖಾನಾಪುರದ ಬಿಜೆಪಿ ಯುವ ಮುಖಂಡ ಪಂಡಿತ್ ಓಗ್ಲೆ ಅವರ ಮೇಲೆ ಹಲ್ಲೆ ಮಾಡಿದ ಆರೋಪ ಹೊತ್ತಿದ್ದರು.
ಅಷ್ಟೇ ಅಲ್ಕ. ತಾಯಿ ಮತ್ತು ಪತ್ನಿ ವಿರುದ್ಧವೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆಯನ್ನೂ ಹಾಕಿದ್ದರು.
ಈ ಹಿನ್ನೆಲೆಯಲ್ಲಿ ಖಾನಾಪುರದ ಶ್ರೀ ಲಕ್ಷ್ಮೀ ದೇವಸ್ಥಾನದಲ್ಲಿಂದು ನಡೆದ ಸಭೆಯಲ್ಲಿ ತಾಲೂಕಿನ ಪ್ರಮುಖ ಹಿಂದೂ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಸಭೆ ನಡೆಸಿ ರಮಾಕಾಂತ್ ಕೊಂಡುಸ್ಕರ್ ಅವರನ್ನು ಸಾರ್ವಜನಿಕವಾಗಿ ಖಂಡಿಸಿ ನಿರ್ಣಯ ಅಂಗೀಕರಿಸಲಾಯಿತು. ಅವರ ವಿರುದ್ಧ ಆಡಳಿತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಾಳೆ ಬೆಳಗಾವಿ ಜಿಲ್ಲಾ ಸಮಿತಿಯ ಸಭೆ ನಡೆಯಲಿದ್ದು, ಅದರಲ್ಲಿ ಸಹ ಚರ್ಚೆ ನಡೆಸಲಾಗುವುದು ಎಂದು ತಿಳಿಸಲಾಯಿತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೇರಿ, ಬಿಜೆಪಿ ಗ್ರಾಮಾಂತರ ಮುಖಂಡ ಧನಂಜಯ ಜಾಧವ, ಬಿಜೆಪಿ ತಾಲೂಕಾಧ್ಯಕ್ಷ ಸಂಜಯ ಕುಬಾಲ್, ಕಾರ್ಪೊರೇಟರ್ ರಾಜು ಭಾತಖಾಂಡೆ, .ಸದಾನಂದ ಪಾಟೀಲ, ಗುಂಡು ತೋಪಿನಕಟ್ಟಿ, ವಸಂತ ದೇಸಾಯಿ, ಕಿರಣ ಏಳೂರಕರ, ರಾಜೇಂದ್ರ ರಾಯ್ಕರ, ವಿಜಯ ಕಾಮತ್, ಕಾರ್ಪೋರೇಟರ್ ಜಯಂತ್ ಅಪ್ಪೇಕರ, ಕೊಡೋಳಿ, ಚೇತನ್ ಮನೇರಿಕರ್, ಸಂಜಯ ಕಂಚಿ, ಆಕಾಶ ಅಥ್ರ್, ಉಪಸ್ಥಿತರಿದ್ದರು.