ಕಿತ್ತೂರು ತಾಲೂಕಿನ ಎರಡು ಬಣದ ವಕೀಲರ ನಡುವಿನ ವಿವಾದಕ್ಕೆ ಮಧ್ಯಸ್ಥಿಕೆ ವಹಿಸಿ ವಕೀಲರ ನಡುವೆ ಸೌಹಾರ್ದಯುತ ಬಾಂಧವ್ಯ ಕಾಪಾಡುವಂತೆ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಿಗೆ ಕರ್ನಾಟಕ ಹೈಕೋರ್ಟ್ ಮನವಿ ಮಾಡಿದೆ.

07 ರಂದು ಕಿತ್ತೂರಿನ ವಕೀಲರ ಸಂಘದ ನೋಂದಣಿ ರದ್ದುಗೊಳಿಸಿದ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ನಿರ್ಣಯವನ್ನು ಪ್ರಶ್ನಿಸಿ ಕಿತ್ತೂರಿನ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಸಲಹೆ ನೀಡಿದೆ.