ಶ್ರೀರಾಮ ಮೂರ್ತಿಕಾರನಿಗೆ ಬಿಜೆಪಿ ಟಿಕೆಟ್..?

ಲೋಕಸಮರದಲ್ಲಿ ಬಿಜೆಪಿ ಟಿಕೆಟ್ ಗೆ ಭಾರೀ ಡಿಮ್ಯಾಂಡ್.

ಚುನಾವಣೆ ಪೂರ್ವ ಸಮೀಕ್ಷೆ ನಂತರ ಬಿಜೆಪಿಗೆ ಶ್ರೀರಾಮನ ಬಲ. ಅಚ್ಚರಿಯ ಅಭ್ಯರ್ಥಿಗಳು ಕಣದಲ್ಲಿ ಬರುವ ಸಾಧ್ಯತೆ.

ಬಹುತೇಕ ಹಾಲಿ ಸಂಸದರಿಗೆ ಪಕ್ಷ ಸಂಘಟನೆ ಹೊಣೆ. ಶ್ರೀರಾಮನ‌ ಮೂರ್ತಿಕಾರ ಅರುಣ, ತೇಜಸ್ವಿನಿ ಅನಂತಕುಮಾರಗೆ ಟಿಕೆಟ್ ಬಹುತೇಕ ಫಿಕ್ಸ್.

ಉತ್ತರ ಕರ್ನಾಟಕ ದಲ್ಲಿಯೂ ಹೊಸ ಮುಖ. ಬೆಳಗಾವಿ, ಚಿಕ್ಕೋಡಿಗೆ ಯಾರು? ಅವರೇನಾ ಅಥವಾ ಇವರಾ ಎನ್ನುವ ಚರ್ಚೆ ಜೋರು.

ಧಾರವಾಡಕ್ಕೆ ಪ್ರಲ್ಹಾದ ಜೋಶಿ ಫಿಕ್ಸ್. ಬೆಳಗಾವಿ ಬದಲು ಶೆಟ್ಟರ್ ಹಾವೇರಿಗಾ?

ವಿಜಯಪುರಕ್ಕೆ ರಮೇಶ ಜಿಗಜಿಣಗಿ ಬದಲು ಗೋವಿಂದ ಕಾರಜೋಳ್?

e belagavi ವಿಶೇಷ ವರದಿ

ಬೆಂಗಳೂರು.

ಮುಂಬರುವ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಬಹುಮತದ ಬಗ್ಗೆ ಸಮೀಕ್ಷೆಗಳು ಬರುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಮುಗಿಲು ನಮುಟ್ಟತೊಡಗಿದೆ .

ಆದರೆ ಬಿಜೆಪಿ ಹೈ ಕನಾಂಡ್ ಮಾತ್ರ ಅಭ್ಯರ್ಥಿಗಳ ಆಯ್ಕೆಯಲ್ಲಿ ಅವಸರಕ್ಕೆ ಬೀಳುತ್ತಿಲ್ಲ. ಅಷ್ಟೇ ಅಲ್ಲ ಬಹುತೇಕ ಕಡೆಗೆ ಪ್ರತಿಯೊಬ್ಬರೂ ಹೌದು ಎನ್ನುವಂತಹ ಅಭ್ಯರ್ಥಿಗಳ ಶೋಧನೆಯಲ್ಲಿ ಬಿಜೆಪಿ ನಿರತವಾಗಿದೆ.

ಸಧ್ಯ ಬಂದಿರುವ ಮಾಹಿತಿ ಪ್ರಕಾರ ಇದುವರೆಗೂ ಟಿಕೆಟ್ ಯಾರಿಗೂ ಅಂತಿಮವಾಗಿಲ್ಲ. ಆದರೆ ಬಿಜೆಪಿ ಮತ್ತು ಸಂಘ ಪರಿವಾರದವರು ಎರಡು ಹಂತದ ಸಮೀಕ್ಷೆ ನಡೆಸಿದ್ದಾರೆ. ಅಂತಿಮವಾಗಿ ಯಾರು ಎನ್ನುವುದು ಸ್ಪಷ್ಟವಾಗಿಲ್ಲ..ಇದರ ಜೊತೆಗೆ ಸಧ್ಯ ಬಂದಿರುವ ಮಾಹಿತಿ ಪ್ರಕಾರ ಕೆಲವೊಂದು ಹಾಲಿ ಸಂಸದರಿಗೆ ಪಕ್ಷ ಸಂಘಟನೆ ಜವಾಬ್ದಾರಿ ಕೊಟ್ಟು ಅಲ್ಲಿ ಬೇರೊಬ್ಬರಿಗೆ ಅವಕಾಶ ಮಾಡಿಕೊಡುವ ಮಾತುಗಳು ಕೇಳಿ ಬರುತ್ತಿವೆ.

ಸಿಂಪಲ್ ಆಗಿ ಹೇಳಬೇಕೆಂದರೆ, ಮೈಸೂರಿನಲ್ಲಿ ಹಾಲಿ ಸಙಸದ ಪ್ರತಾಪ ಸಿಂಹ ಅವರಿಗೆ ಪಕ್ಷ ಸಂಘಟನೆ ಜವಾಬ್ದಾರಿ ಹೊರೆಸಿ ಅಲ್ಲಿ ಅಯೋಧ್ಯೆ ಶ್ರೀರಾಮ ಮೂರ್ತಿಕಾರ ಅರುಣ ಅವರಿಗೆ ಟಿಕೆಟ್ ಕೊಡಬಹುದು ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಕೇಂದ್ರ ಸಚಿವ ಅಮಿತ್ ಶಾ ಕೂಡ ಅರುಣ ಅವರನ್ನು ಸನ್ಮಾನಿಸಿದ್ದರು. ಅಷ್ಟೇ ಅಲ್ಲ ಈ ನಿಟ್ಟಿನಲ್ಲಿ ತಮ್ಮದೇ ಆದ ಮೂಲಗಳಿಂದ ಮಾಹಿತಿ ಸಹ ತರಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.

ಇದನ್ನು ಹೊರತು ಪಡಿಸಿದರೆ ಬೆಂಗಳೂರು

ದಕ್ಷಿಣದಿಂದ ಏಜಸ್ವಿ ಸೂರ್ಯ ಅವರು ಪ್ರತಿನಿಧಿಸುವ ಕ್ಷೇತ್ರದಿಂದ ಬೇರೊಬ್ಬ ಬ್ರಾಹ್ಮಣರಿಗೆ ಟಿಕೆಟ್ ಕೊಡುವ ಸಾಧ್ಯತೆಗಳು ಹೆಚ್ಚಾಗಿವೆ. ಸಧ್ಯ ಬಂದಿರುವ ಮಾಹಿತಿ ಪ್ರಕಾರ ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ತೇಜಸ್ವಿನಿ ಅನಂತಕುಮಾರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಇದೆಲ್ಲದರ ಮಧ್ಯೆ ಬ್ರಾಹ್ಮಣ ಸಮುದಾಯದ ಏಳ್ಗೆ ಮತ್ತು ಒಗ್ಗಟ್ಟಿ ಗಾಗಿ ಶ್ರಮಿಸುತ್ತಿರುವ ಅಚ್ಚರಿಯ ಅಭ್ಯರ್ಥಿ ಗೆ ಟಿಕೆಟ್ ನೀಡಿದರೂ ಅಚ್ಚರಿಪಡಬೇಕಿಲ್ಲ

ಇದೇ ಕ್ಷೇತ್ರದಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಜೈ ಶಂಕರ ಹೆಸರೂ ಕೇಳಿ ಬರುತ್ತಿದೆ.

ಇನ್ನು ಉತ್ತರ ಕರ್ನಾಟಕ ಭಾಗದತ್ತ ಗಮನಹರಿಸಿದರೆ, ಅಲ್ಲಿ ಕೂಡ ಹೊಸ ಮುಖಗಳು ಲೋಕ ಸಮರದಲ್ಲಿ ಕಂಡರೂ ಅಚ್ಚರಿ ಪಡಬೇಕಿಲ್ಲ.

ಧಾರವಾಡದಿಂದ ಹಾಲಿ ಸಂಸದ ಪ್ರಲ್ಹಾದ ಜೋಶಿ ಫಿಕ್ಸ್. ಇಲ್ಲಿ ಘರ್ ವಾಪಸ್ಸಾದ ಜಗದೀಶ ಶೆಟ್ಟರ್ ಅವರಿಗೆ ಹಾವೇರಿ ಕ್ಷೇತ್ರದಿಂದ ಟಿಕೆಟ್ ಕೊಡಬಹುದು ಎನ್ನುವ ಮಾತಿದೆ. ಆದರೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮಾತ್ರ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಯಬಹುದು ಎನ್ನಲಾಗುತ್ತದೆ.

ಕಳೆದ ಬಾರಿ ನಡೆದ ಉಪಚುನಾವಣೆಯಲ್ಲಿ ಕೇವಲ ಬಿಜೆಪಿ 2 ಸಾವಿರ ಮತಗಳ ಅಂತರದಿಂದ ಗೆದ್ದಿತ್ತು. ಹೀಗಾಗಿ ಈ ವಾರಿ ಅಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ರಿಸ್ಕ್ ಬಿಜೆಪಿ ತೆಗೆದುಕೊಳ್ಳುತ್ತಿಲ್ಲ. ಇಲ್ಲಿ ಹಲವರ ಹೆಸರುಗಳು ಮುನ್ನಲೆಗೆ ಬರುತ್ತಿವೆ. ಸರ್ವರೀತಿಯಲ್ಲಿ ಸಮರ್ಥವಾಗಿರುವ ಅಭ್ಯರ್ಥಿ ಹುಡುಕಾಟ ನಡೆದಿದೆ. ಮಹಾಂತೇಶ ಕವಟಗಿಮಠ ರೇಸ್ ನಲ್ಲಿದ್ದಾರೆ.

ಚಿಕ್ಕೊಡಿ ಕ್ಷೇತ್ರದಿಂದಲೂ ಹೊಸ‌ಮುಖದ ಮಾತುಗಳು ಕೇಳಜ ಬರುತ್ತಿವೆ. ಪ್ರತಿಬಾರಿ ಒಂದೇ ಕುಟುಂಬಕ್ಕೆ ಟಿಕೆಟ್ ಕೊಟ್ಟರೆ ತಪ್ಪು ಸಂದೇಶ ಹೋಗಬಹುದು ಎನ್ನಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹೊಸ ಮುಖ ಬಂದರೂ ಅಚ್ಚರಿ ಪಡಬೇಕಿಲ್ಲ .

ವಿಜಯಪುರದಿಂದ ಹಾಲಿ ಸಂಸದ ರಮೇಶ ಜಿಗಜಿಣಗಿ ಬದಲು ಮಾಜಿ ಸಚಿವ ಗೋವಿಂದ ಕಾರಜೋಳ ಅಥವಾ ಅವರ ಪುತ್ರನಿಗೆ ಟಿಕೆಟ್ ಸಿಗಬಹುದು ಎಬ್ನಲಾಗುತ್ತಿದೆ

Leave a Reply

Your email address will not be published. Required fields are marked *

error: Content is protected !!