ಪಾಲಿಕೆ ಸಭೆಯಲ್ಲಿ ಕಾವೇರಿದ ಚರ್ಚೆ ಸಾಧ್ಯತೆ,
39 ಖಂಜರಗಲ್ಲಿ ಮಳಿಗೆ ಯಲ್ಲೂ ಕಾರುಬಾರು. ಕಡತ ಕೊಟ್ಟು ವಾಪಸ್ಸು ತೆಗೆದುಕೊಂಡಿದ್ದರ ಬಗ್ಗೆಯೂ ಚರ್ಚೆ.
SFC GRANT ಬರೀ ಉತ್ತರಕ್ಕೆ ಸಿಮೀತನಾ? ಯಾವುದೇ ಅನುಮತಿ ಇಲ್ಲದೇ 18 ವಾರ್ಡಗಳಿಗೆ 30 ಲಕ್ಷ ಅನುದಾನ ಕೊಟ್ಟಿದ್ದು ಸರಿನಾ?

ಬೆಳಗಾವಿ..
ನಾಳೆ ದಿ. 29 ರಂದು ನಡೆಯುವ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದವರ ನಡುವೆ ವಾದ ವಿವಾದಗಳು ಜೋರಾಗಿ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.
ಬೆಳಗಾವಿ ಉತ್ತರ ಕ್ಷೇತ್ರದ 38 ಮಳಿಗೆಗಳಿಗೆ ವಿದ್ಯುತ್ ಸಂಪರ್ಕ ವಿಲ್ಕದೆ ಅನುಮತಿ ನೀಡಿದ್ದೂ ಸೇರಿದಂತೆ ಸ್ಥಾಯಿ ಸಮಿತಿಗೆ ಕೊಟ್ಟ ಕಡತಗಳನ್ನು ವಾಪಸ್ಸು ತೆಗೆದುಕೊಂಡು ಹೋಗಿದ್ದರ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ.

ಅಷ್ಟೇ ಅಲ್ಲ ಸ್ಥಾಯಿ ಸಮಿತಿ ಮತ್ತು ಪರಿಷತ್ ಸಭೆಯಲ್ಲಿ ಯಾವುದೇ ಚರ್ಚೆ ನಡೆಯದೇ ಕೇವಲ18 ನಗರಸೇವಕರಿಗೆ ತಲಾ 30 ಲಕ್ಷ ಅನುದಾನ ಬಿಡುಗಡೆ ಮಾಡಿದ್ದರ ಬಗ್ಗೆ ವ್ತಾಪಕ ಚರ್ಚೆ ನಡೆಯುವ ಲಕ್ಷಣಗಳು ಕಾಣಸಿಗುತ್ತವೆ.ಇಲ್ಲಿ ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತವೆ.
SFC ಅನುದಾನ ಇಡೀ ಮಹಾನಗರ ಪಾಲಿಕೆಗೆ ಸಂಬಂಧಿಸಿದ್ದು ಆದರೆ ಉತ್ತರ ಕ್ಷೇತ್ರದ ಶಾಸಕರು ಅದನ್ನು ಕೇವಲ ಉತ್ತರ ಕ್ಷೇತ್ರದವರಿಗೆ ಮಾತ್ರ ಎಂದು ಬರೆಯಿಸಿಕೊಂಡು ಬಂದಿದ್ದರ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಗಳಿವೆ.
ಆದೇಶಕ್ಕೆ ಬೆಲೆ ಇಲ್ಲವೇ?

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಯಾವ ಆದೇಶಕ್ಕೂ ಬೆಲೆ ಇಲ್ಲವೇ ಇಲ್ಲ ಎನ್ನುವ ಪರಿಸ್ಥಿತಿ ಬಂದ ಒಣಗಿದ.
ಪಾಲಿಕೆ ಆಯುಕ್ತರ ನ್ಯಾಯಾಲಯದಲ್ಲಿ ಆದೇಶವಾಗಿದ್ದರೂ ಅದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸಂಬಂಧಿಸಿದ ವಿಭಾಗದವರು ಮುಂದಾಗದೇ ಇರುವುದು ಚರ್ಚೆಯ ವಸ್ತುವಾಗಿದೆ. ಅಷ್ಟೆ ಅಲ್ಲ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಪಾಲಿಕೆಯ ಮೂಲಗಳ ಪ್ರಕಾರ ದಕ್ಷಿಣ ಮತ್ತು ಉತ್ತರ ಕ್ಷೇತ್ರದಲ್ಲಿ ಸುಮಾರು 150 ಕ್ಕೂ ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೆ ಮೂರು ಸಲ ನೋಟೀಸ್ ಕೊಟ್ಟು ಅಂತಿಮವಾಗಿ 321 ರ ನಿಯಮದನ್ವಯ ಆದೇಶ ಮಾಡಲಾಗಿದೆ. ಆದರೆ ಆದೇಶ ಮಾತ್ರ ಪಾಲನೆ ಆಗುತ್ತಿಲ್ಲ.
ಮೂಲಗಳ ಪ್ರಕಾರ ಅಂತಿಮ ಆದೇಶ ಮಾಡಿದ ಮತ್ತು ಮಾಡುವ ಹಂತಕ್ಕೆ ಬಂದ ಕಟ್ಟಡ ಮಾಲೀಕರ ಹತ್ತಿರ ವ್ಯವಹಾರ. ಕುದುರಿಸಿಕೊಳ್ಳುವ ಕೆಲಸ ತೆರೆನರೆಯಲ್ಲಿ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಮತ್ತೊಂದು ಸಂಗತಿ ಎಂದರೆ, ಇಲ್ಲಿ ಅಂತಿಮ ಆದೇಶವಾದ ಕಟ್ಟಡಗಳ ಮಾಲೀಕರಿಗೆ ಕೋರ್ಟನಿಂದ ತಡೆಯಾಜ್ಞೆ ತರಲು ಪರೋಕ್ಷವಾಗಿ ಸಹಾಯ ಮಾಡುವ ಕೆಲಸವನ್ನು ಪಾಲಿಕೆಯವರು ಮಾಡುತ್ತಿದ್ದಾರೆ. ಅಂದರೆ ಇದರ ಹಿಂದಿನ ಉದ್ದೇಶ ಸ್ಪಷ್ಟವಾಗಿ ಗೊತ್ತಾಗುತ್ತದೆ. ಈಗ ಇದರ ಬಗ್ಗೆ ಕೂಡ ನಾಳೆ ನಡೆಯುವ ಪರಿಷತ್ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ