Headlines

ಕನ್ನಡಿಗರೊಂದಿಗೆ ವಾದಕ್ಕಿಳಿದ ಪಾಲಿಕೆ ಆಯುಕ್ತರು..!

ಬೆಳಗಾವಿ. ಇಲ್ಲಿನ ಅನಗೋಳ ಭಾಗದಲ್ಲಿ ಮಹಾರಾಷ್ಟ್ರ ಚೌಕ ಫಲಕ ಹಾಕಿದ್ದನ್ನು ವಿರೋಧಿಸಿ ಪ್ರತಿಭಟನೆಗೆ ಇಳಿದ ಕನ್ನಡ ಸಂಘಟನೆಯವರೊಂದಿಗೆ ಪಾಲಿಕೆ ಆಯುಕ್ತರು ವಾದಕ್ಕಿಳಿದ ಘಟನೆ ಇಙದು ನಡೆಯಿತು.

ಆ ವಿವಾದಿತ ನಾಮಫಲಕವನ್ಬು ತಕ್ಷಣ ತೆಗೆಯಬೇಕು ಎನ್ನುವ ವಾದ ವಿವಾದ ಜೋರಾಗಿ ನಡೆದುರುವಾಗಲೇ ಕನ್ನಡ ಸಂಘಟನೆಯ ಕೆಲವರು ಆಯುಕ್ತರಿಗೆ ಧಿಕ್ಕಾರ ಹೇಳಿದ್ದು ಇದಕ್ಕೆ ಕಾರಣವಾಯಿತು

ಈಗಾಗಲೇ ಕನ್ನಡ ಫಲಕಕ್ಕೆ ಆಧ್ಯತೆ ಕೊಡುವ ಕೆಲಸ ಮಾಡಲಾಗುತ್ತಿದೆ. ಈ ಸಂಬಂಧ ನೋಟೀಸ್ ಕೊಟ್ಟು ಅನ್ಯಭಾಷಿಕ ಫಲಕವನ್ಬು ತೆರವುಗೊಳಿಸಲಾಗಿದೆ ಎಂದರು. ಆದರೆ ತಕ್ಷಣವೇ ಈ ಫಲಕವನ್ಬು ತೆರೆಯಬೇಕೆಂದು ಕನ್ನಡ ಸಂಘಟನೆಯವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಆಯುಕ್ತರ ಕಾರಿನ ಮುಂಭಾಗ ಧರಣಿ ನಡೆಸಿದರು.

Leave a Reply

Your email address will not be published. Required fields are marked *

error: Content is protected !!