ಗೋಕಾಕದಲ್ಲಿ ಮುಂದುವರೆದ ಜಾರಕಿಹೊಳಿ ಹಿಡಿತ
ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ ಗೋಕಾಕ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಎಲ್ಲ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ಗೋಕಾಕ- ಇಲ್ಲಿಯ ಗೋಕಾಕ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಆಡಳಿತ ಮಂಡಳಿಯ ಎಲ್ಲ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ನಡೆದಿದೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಕೆ.ಗೋಖಲೆ ತಿಳಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ “ಅ” ವರ್ಗದಿಂದ ಸುಣಧೋಳಿಯ ಬಸಪ್ಪ ಲಕ್ಷ್ಮಪ್ಪ ಕುರಿಬಾಗಿ, ಗೊಡಚಿನಮಲ್ಕಿಯ ಮಹಾಂತೇಶ ಬಾಳಪ್ಪ ಅವರಗೋಳ, ಅರಭಾವಿಯ ಮುತ್ತೆಪ್ಪ…