ಸವಿತಾ ಮೇಯರ್, ಚವ್ಹಾಣ ಉಪಮೇಯರ್

ಬೆಳಗಾವಿ. ತೀವೃ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆಗೆ ಸವಿತಾ ಕಾಂಬಳೆ ಮೇಯರ್ ಮತ್ತು ಆನಂದ ಚ್ವಹಾಣ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಷ್ಟೇ ಅಲ್ಲ ಬಿಜೆಪಿ ನಗರಸೇವಕರ ಅಭಿಪ್ರಾಯ ಆಲಿಸಿ ಈ ಆಯ್ಕೆ ಮಾಡಲಾಯಿತು. ಇನ್ನುಳಿದಂತೆ ಆಡಳಿತ ಪಕ್ಷದ ನಾಯಕನಾಗಿ ಗಿರೀಶ ಧೋಂಗಡಿ ನೇಮಕವಾಗಿದ್ದಾರೆ.

Read More

ಕಿತ್ತೂರು ವಕೀಲರ ಬಣ ಮಧ್ಯಸ್ಥಿಕೆಗೆ ಸೂಚನೆ

ಕಿತ್ತೂರು ತಾಲೂಕಿನ ಎರಡು ಬಣದ ವಕೀಲರ ನಡುವಿನ ವಿವಾದಕ್ಕೆ ಮಧ್ಯಸ್ಥಿಕೆ ವಹಿಸಿ ವಕೀಲರ ನಡುವೆ ಸೌಹಾರ್ದಯುತ ಬಾಂಧವ್ಯ ಕಾಪಾಡುವಂತೆ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಿಗೆ ಕರ್ನಾಟಕ ಹೈಕೋರ್ಟ್ ಮನವಿ ಮಾಡಿದೆ. 07 ರಂದು ಕಿತ್ತೂರಿನ ವಕೀಲರ ಸಂಘದ ನೋಂದಣಿ ರದ್ದುಗೊಳಿಸಿದ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ನಿರ್ಣಯವನ್ನು ಪ್ರಶ್ನಿಸಿ ಕಿತ್ತೂರಿನ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಸಲಹೆ ನೀಡಿದೆ.

Read More

ಮೇಯರ್ ಲೆಕ್ಕಾಚಾರ ತಪ್ಪಿದರೆ 3 ಕ್ಷೇತ್ರದಲ್ಲಿ ಬಿಜೆಪಿಗೆ ಪೆಟ್ಟು

ವಿಶೇಷ ವರದಿಬೆಳಗಾವಿ.ಲೋಕಸಭೆ ಚುನಾವಣೆ ಸನ್ನಿಹಿತವಾದ ಸಂದರ್ಭದಲ್ಲಿಯೇ ಎದುರಾದ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ನಾಯಕರು ಎಚ್ಚರದ ಹೆಜ್ಜೆ ಇಡುವುದು ಅನಿವಾರ್ಯವಾಗಿದೆ,. ಲೋಕಸಮರಲ್ಲಿ ಎಲ್ಲ ಸ್ಥಾನಗಳನ್ನು ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ನಾಯಕರು ಪ್ರತಿಯೊಂದು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ, ಯಾವುದೇ ಒಬ್ಬ ಅಭ್ಯರ್ಥಿ ಯನ್ನು ಬೆಂಬಲಿಸೇಕಾದರೂ ಕೂಡ ಅವರ ಹಿಂದಿರುವ ವ್ಯಕ್ತಿಗಳ ಬಗ್ಗೆ ಚಿಂತನೆ ನಡೆಸಿದ್ದಾರೆ, ಅಂದರೆ ಬಿಜೆಪಿ ಈ ವಿಷಯದಲ್ಲಿ ರಾಜೀ ಇಲ್ಲ ಎನ್ನುವ ಸಂದೇಶವನ್ನು ರವಾನಿಸಿದೆಈಗ ನಾಳೆ ದಿ. 15 ರಂದು…

Read More

ಡಾ. ಗಿರೀಶ ಸೋನವಾಲ್ಕರ ಅಭ್ಯರ್ಥಿ ಏಕೆ ಆಗಬೇಕು?

ಬೆಳಗಾವಿ.ಸಹಜವಾಗಿ ಚುನಾವಣೆ ಬಂದಾಗ ಎಲ್ಲಾ ಎಲ್ಲ ರಾಜಕೀಯ ಪಕ್ಷಗಳು ಇದ್ದುದರಲ್ಲಿಯೇ ಉತ್ತಮ ಅಭ್ಯರ್ಥಿ ಆಯ್ಕೆಯ ಕಸರತ್ತು ನಡೆಸುತ್ತವೆ.ಮೊದಲು ಹೇಗಿತ್ತು ಅಂದರೆ, ಹೈಕಮಾಂಡ ವಸೂಲಿ ಇದ್ದರೆ ಸಾಕು, ಅವರಿಗೆ ಅರ್ಹತೆ, ಇರಲಿ,ಬಿಡಲಿ ಟಿಕೇಟ್ ಕೊಡಲಾಗುತ್ತಿತ್ತು.ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಕಾಲಕ್ಕೆ ತಕ್ಕಂತೆ ಬದಲಾವಣೆ ಕೂಡ ಆಗಿದೆ.ಇದೆಲ್ಲದರ ಜೊತೆಗೆ ಮತದಾರರು ಕೂಡ ನಮ್ಮ ಪ್ರತಿನಿಧಿ ಸಂಸತ್ ನಲ್ಲಿ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಮಾತಾಡಬೇಕು ಎನ್ನುವ ಆಸೆ ಇಟ್ಟುಕೊಂಡಿರುತ್ತಾರೆ.ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಅಭ್ಯರ್ಥಿ ಆಗುವವರ ಬಗ್ಗೆ ಅಳೆದು ತೂಗಿ ಆಯ್ಕೆ…

Read More

Mayor Election ಹಿಂದಿರುವ ವ್ಯಕ್ತಿಗಳದ್ದೇ ತಲೆನೋವು ಜಾಸ್ತಿ’

ಮೇಯರ್ ಚುನಾವಣೆ-ಎಚ್ಚರಿಕೆ ಹೆಜ್ಜೆಯತ್ತ ನಾಯಕರ ಚಿತ್ತ`ಹಿಂದಿರುವ ವ್ಯಕ್ತಿಗಳದ್ದೇ ತಲೆನೋವು ಜಾಸ್ತಿ’ ಆಯ್ಕೆ ಬಗ್ಗೆ ಗುಟ್ಟು ಬಿಟ್ಡುಕೊಡದ ಅಭಯ ಬೆಳಗಾವಿ.ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ಇದೇ ದಿ. 15 ರಂದು ನಡೆಯಲಿದೆ. ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಮತ್ತು ಉಪಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.ಮಃಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಹೀಗಾಗಿ ಕಾಂಗ್ರೆಸ್ ತಿಪ್ಪರಲಾಗ ಹಾಕಿದರೂ ಬಿಜೆಪಿ ಒಡೆಯುವುದು ಕಷ್ಟ. ಈ ಹಿನ್ನೆಲೆಯಲ್ಲಿ ಮೇಯರ್ ಮತ್ತು ಉಪಮೇಯರ್ ಆಯ್ಕೆ ಅವಿರೋಧವಾಗಿ…

Read More

ಕೊಂಡುಸ್ಕರ ವಿರುದ್ಧ ಖಾನಾಪುರದಲ್ಲಿ ಪ್ರತಿಭಟನೆ

ಬಿಜೆಪಿ ಯುವ ಮುಖಂಡ ಪಂಡಿತ್ ಓಗ್ಲೆ ಮೇಲೆ ಹೇಡಿಗಳ ದಾಳಿ. ಖಾನಾಪುರದಲ್ಲಿ ರಮಾಕಾಂತ್ ಕೊಂಡುಸ್ಕರ್ ಅವರ ಸಾರ್ವಜನಿಕ ಪ್ರತಿಭಟನೆ. ಖಾನಾಪುರ. ಹಿಂದುಸ್ತಾನ ಶ್ರೀರಾಮ ಸೇನೆಯ ಮುಖಂಡ ರಮಾಕಾಂತ ಕೊಂಡುಸ್ಕರ ಮತ್ತೆ ಹಲ್ಲೆ ಮೂಲಕ ವಿವಾದ ದಲ್ಲಿ ಸಿಲುಕಿದ್ದಾರೆ. :ಕಳೆದ ದಿ. 11ರ ಹಲ್ಯಾಳದಲ್ಲಿ ನಡೆದ ಮರಾಠಾ ಸಮಾಜದ ಗುರುಕುಲ ಭೂಮಿಪೂಜೆ ಸಮಾರಂಭದಲ್ಲಿ ಕೊಂಡುಸ್ಕರ್ ಅವರು ಖಾನಾಪುರದ ಬಿಜೆಪಿ ಯುವ ಮುಖಂಡ ಪಂಡಿತ್ ಓಗ್ಲೆ ಅವರ ಮೇಲೆ ಹಲ್ಲೆ ಮಾಡಿದ ಆರೋಪ ಹೊತ್ತಿದ್ದರು. ಅಷ್ಟೇ ಅಲ್ಕ. ತಾಯಿ ಮತ್ತು…

Read More

ಮಂದಿರ ಉದ್ಘಾಟಿಸಿದ MLC ಚನ್ನರಾಜ

ಸೋನೋಲಿಯಲ್ಲಿ ನೂತನ ಮಂದಿರ ಉದ್ಘಾಟಿಸಿದ ಚನ್ನರಾಜ ಹಟ್ಟಿಹೊಳಿ ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸೋನೋಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಬ್ರಹ್ಮಲಿಂಗ ಮಂದಿರದ ಕಟ್ಟಡವನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೋಮವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಡೀ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಅವಕಾಶ ನಮಗೆ ಸಿಕ್ಕಿದೆ. ಸಹೋದರಿ ಲಕ್ಷ್ಮೀ ಹೆಬ್ಬಾಳಕರ್ ಅವರು ಶಾಸಕರಾದ ನಂತರ ಕ್ಷೇತ್ರದ ಅಭಿವೃದ್ಧಿಯ ದಿಕ್ಕು ಬದಲಾಗಿದೆ. ಈಗ ಅವರು ಸಚಿವರಾದ ನಂತರ ಎಲ್ಲರ ಸಹಕಾರದಿಂದ ಇನ್ನಷ್ಟು ಯೋಜನೆಗಳನ್ನು ತರುವ…

Read More

ಸೋನವಾಲ್ಕರಗೆ ಗ್ರೀನ್ ಸಿಗ್ನಲ್?

ಬೆಳಗಾವಿ ಲೋಕ ಅಖಾಡಕ್ಕಿಳಿದ ಡಾ. ಗಿರೀಶ್ ಸೋನವಾಲ್ಕರ್. ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್. ಎಲ್ಲೆಡೆ ಪ್ರಚಾರಕ್ಕೆ ಹೊರಟ ಗಿರೀಶ್. ಕೈ ನಾಯಕರ ಅಭಯ ಪಡೆದುಕೊಂಡ ಡಾ.ಸೋನವಾಲ್ಕರ್. ಬೆಳಗಾವಿ. ಅಂತೂ ಇಂತೂ ಬೆಳಗಾವಿ‌ ಲೋಕ. ಸಮರಕ್ಕೆ ಡಾ.ಗಿರೀಶ ಸೋನವಾಲ್ಕರ ಹೆಸರು ಬಹುತೇಕ ಫೈನಲ್ ಆಗಿದೆ. ಬೆಳಗಾವಿಯ ಹೆಸರಾಂತ ವೈದ್ಯ ಎನಿಸಿಕೊಂಡ ಡಾ. ಗಿರೀಶ ಸೋನವಾಲ್ಕರ ಅವರು ವೈದ್ಯಕೀಯ ಕ್ಷೇತ್ರ ಅಷ್ಟೇ ಅಲ್ಲ ಸಾಮಾಜಿಕ ಕ್ಷೇತ್ರದಲ್ಲಿ ಕೂಡ ತಮ್ಮದೇ‌ ವರ್ಚಸ್ಸು ಹೊಂದಿದ್ದಾರೆ. ಸಧ್ಯ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಅಖೆದುತೂಗಿ…

Read More

ಕಾರ್ಪೋರೇಟರ್ ಧೋಂಗಡಿ ಸದಸ್ಯತ್ವ ರದ್ದು..!

ಹುಬ್ಬಳ್ಳಿ. ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯೆ ಸರಸ್ವತಿ ಧೋಂಗಡಿ ಅವರ ಸದಸ್ಯತ್ವವನ್ನು ರದ್ದು ಮಾಡಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ಸಂದರ್ಭದಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಆರೋಪ ಸಂಬಂಧ ಬಿಜೆಪಿ ಸದಸ್ಯೆ ಸರಸ್ವತಿ ದೋಂಗಡಿ ಅವರ ಸದಸ್ಯತ್ವವನ್ನು ರದ್ದು ಮಾಡಲಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ನೀಡಿದ ದೂರಿನ ಅನ್ವಯ ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟಣ್ಣವರ ಅವರು ಸರಸ್ವತಿ…

Read More

11ಕೋಟಿ ರೂ ಕಾಮಗಾರಿಗೆ ಚಾಲನೆ

ದಂಡಾಪೂರ ಗ್ರಾಮದಲ್ಲಿ 6.11 ಕೋಟಿ ರೂಪಾಯಿ ವೆಚ್ಚದ ಶೈಕ್ಷಣಿಕ ಕಾಮಗಾರಿಗಳನ್ನು ನೆರವೇರಿಸಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ 1.55 ಕೋ.ರೂ ವೆಚ್ಚದ ದಂಡಾಪೂರ ಸರಕಾರಿ ಪ್ರಾಥಮಿಕ ಶಾಲೆಯ ಬಹು ಮಹಡಿ ಕಟ್ಟಡಕ್ಕೆ ಭೂಮಿ ಪೂಜೆ 4.55 ಕೋ.ರೂ ವೆಚ್ಚದ 31 ವಿವೇಕ ಶಾಲಾ ಕೊಠಡಿಗಳ ಉದ್ಘಾಟನೆ. 7.47 ಲಕ್ಷ ರೂ ಮೊತ್ತದ ವಿಶೇಷ ಚೇತನ ಮಕ್ಕಳಿಗೆ ಸಾಧನಾ ಸಲಕರಣೆಗಳ ವಿತರಣೆ. ಪಾಮಲದಿನ್ನಿ ಹಳ್ಳದಿಂದ ದಂಡಾಪೂರವರೆಗಿನ ಜಾಕ್ ವೆಲ್ ಕಾಮಗಾರಿ ನಿರ್ಮಾಣಕ್ಕೆ ಭರವಸೆಯನ್ನು ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ…

Read More
error: Content is protected !!