ಬೆಳಗಾವಿಗೆ ನುಗ್ಗಿದ ಕಾಡಾನೆ..
ಬೆಳಗಾವಿ ಇಂದು ಬೆಳ್ಳಂ ಬೆಳಗ್ಗೆ ಕಾಡಾನೆಯೊಂದು ಬೆಳಗಾವಿ ಮಹಾನಗರದ ಬಡಾವಣೆಗೆ ನುಗ್ಗಿದ ಘಟನೆ ಬೆಳಗಾವಿಯ ಬಾಟ್ ರಸ್ತೆಯ ಬಸವ ಕಾಲನಿಯಲ್ಲಿ ನಡೆದಿದೆ. ಇಂದು ಬೆಳಗಿನ ಜಾವ ಕಾಡಾನೆ, ಬೆಳಗಾವಿಯ ಬಸವ ಕಾಲೋನಿಯಲ್ಲಿ ಕಾಣಿಸಿಕೊಂಡಾಗ,ಅಲ್ಲಿಯ ಕೆಲವರಿಗೆ ಖುಷಿ,ಇನ್ನು ಕೆಲವರಿಗೆ ಹೆದರಿಕೆ, ಆನೆ ಬಂದಿದೆ ಆನೆ,ಎನ್ನುವ ಸುದ್ದಿ ಹರಡಿ ಅಲ್ಲಿ ನೂರಾರು ಜನ ಸೇರಿದ್ರು.ಸೆಲ್ಸಿ,ಮೋಬೈಲ್ ಶೂಟೀಂಗ್ ಮಾಡಿ ಅಲ್ಲಿಯ ಜನ ಎಂಜಾಯ್ ಮಾಡಿದ್ರು. ಕಾಡಾನೆ ಬಡಾವಣೆಗೆ ಬಂತಲ್ಲ ಎಂದು ಅಲ್ಲಿಯ ಕೆಲವು ಜನ ಹೆದರಿ ಫಾರೆಸ್ಟ್ ಆಫೀಸರುಗಳಿಗೆ ಫೋನ್ ಮಾಡಿದ್ರು…