ಕಚೇರಿಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡು ವಿವಾದಕ್ಕೊಳಗಾದ ಅಧಿಕಾರಿ
ಖಾನಾಪುರ.
ಅಧಿಕಾರ ಮತ್ತು ಅದಕ್ಕೆ ತಕ್ಕಂತೆ ಕುರ್ಚಿ ಸಿಕ್ಕರೆ ಸಾಕು ಕೆಲವರು ಸರ್ಕಾರವೇ ನಾವ್ ಹೇಳಿದಂತೆ ನಡೆಯುತ್ತದೆ ಎಂದು ಭಾವಿಸುತ್ತಾರೆ.
ಅವರಿಗೆ ಸರ್ಕಾರದ ಆದೇಶಗಳು ಲೆಕ್ಕಕ್ಕೇ ಬರಲ್ಲ ಬ ಇನ್ನು ಅವರ ಮೇಲಾಧಿಕಾರಿಗಳ ಮಾತು ಎಷ್ಟರ ಮಟ್ಟಿಗೆ ಕೇಳಬಹುದು ಎನ್ನುವ ಊಹೆ ತಮಗೆ ಬಿಟ್ಟಿದ್ದು.
ಸರ್ಕಾರಿ ಕಚೇರಿಗಳಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಬಾರದು ಎನ್ನುವುದು ಸರ್ಕಾರದ ಆದೇಶ. ಹಿಂದೆ ಅಂತಹ ಘಟನೆಗಳು ನಡೆದಾಗ ಸರ್ಕಾರ ಹಿಂದೆ ಮುಂದೆ ನೋಡದೇ ಕಠಿಣ ಕ್ರಮಬತೆಗೆದುಕೊಂಡಿದ್ದೂ ಉಂಟು.

ಆದರೆ ಇಷ್ಟೆಲ್ಲ ಇದ್ದಾಗಲೂ ಖಾನಾಪುರ ತಾಲೂಕಿನ ರಾಮಗುರವಾಡಿ PDO ಉಪ್ಪಿನ ಎಂಬುವರು ತಮ್ಮ ಹುಟ್ಟು ಹಬ್ಬವನ್ನು ಸರ್ಕಾರಿ ಕಚೇರಿಯಲ್ಲಿ ಆಚರಿಸಿಕೊಂಡಿದ್ದು ಬೆಳಿಕಗೆ ಬಂದಿದೆ.
:ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತಿ ಸಿಇಓ ಅವರು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು