Headlines

‘ಬಿ ಫಾರ್ಮ ಬರೋವರೆಗೆ ಏನೂ ‘ಗ್ಯಾರಂಟಿ’ ಅಲ್ಲ

ಬೆಳಗಾವಿ. ರಾಜಕಾರಣದಲ್ಲಿ ಪಕ್ಷ ನಿಷ್ಠೆ , ಕಾರ್ಯಕರ್ತರೇ ನಮ್ಮ‌ ದೇವರು ಎನ್ನುವುದು ಬರೀ ಬೊಗಳೆ.

ರಾಜಕೀಯ ನಾಯಕರಿಗೆ ಭಾಷಣಕ್ಕೆ ಸಿಮೀತ. ಅದನ್ಬು ಬಿಟ್ಟರೆ ಎಲ್ಲವೂ ಬರೀ ಓಳು ಸಾರ್ ಬರೀ ಓಳು..!

ಸಹಜವಾಗಿ ಚುನಾವಣೆ ಬಂದಾಗ ನಿಷ್ಠಾವಂತ ಕಾರ್ಯಕರ್ತರಿಗೆ ಆಧ್ಯತೆ ಎನ್ನುವ ಮಾತುಗಳು ಈಗ ಒಂದು ರೀತಿಯಲ್ಲಿ ಹಾಸ್ಯಾಸ್ಪದವಾಗುತ್ತಿವೆ. ಆದರೆ ಟಿಕೆಟ್ ಕೊಡುವಾಗ ಕುಟುಂಬ ವರ್ಗ, ತಪ್ಪಿದರೆ ಹಣಬಲ, ತೋಳ್ಬಲ ಉಳ್ಳವರಿಗೆ ಟಿಕೇಟು ಹೋಗುತ್ತದೆ ಎನ್ನುವುದು ಸುಳ್ಳಲ್ಲ.

ಸಧ್ಯ ಮುಂಬರುವ ಲೋಕಸಭೆ‌ ಚುನಾವಣೆ ಮುಂದಿಟ್ಟುಕೊಂಡು ಕೆಲವರು ನಡೆಸಿದ ಬೆಳವಣಿಗೆಯನ್ನು ಗಮನಿಸಿದರೆ ಪಕ್ಷ ನಿಷ್ಠೆ ಎನ್ನುವುದು ಮಣ್ಣು ಪಾಲಾಗಿದೆ.

ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಸ್ಮಶಾನಕ್ಕೆ ಹೋದ ಹೆಣ ಹೇಗೆ ವಾಪಸ್ಸು ಬರುವುದಿಲ್ಲವೋ ಹಾಗೇ ಚುನಾವಣೆಯಲ್ಲಿ ಬಿ ಫಾರ್ಮ ಕೂಡ ಉಳ್ಳವರನ್ನು ಬಿಟ್ಟು ಬೇರೆಯವರಿಗೆ ಸಿಗಲ್ಲ.

ಮುಂಬರುವ ಲೋಕಸಭೆ ಚುನಾವಣೆಗೆ ಯಾವುದೇ ಕ್ಷಣದಲ್ಲಿ ಅಧಿಸೂಚನೆ ಹೊರಬೀಳಬಹುದು, ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಇನ್ನುಳಿದಂತೆ ಎರಡನೇ ಪಟ್ಟಿ ಬಗ್ಗೆ ಆಕಾಂಕ್ಷಿಗಳಲ್ಲಿ ಒಂದು ರೀತಿಯ ಆತಂಕ ಶುರುವಾಗಿದೆ,
ಗಮನಿಸಬೇಕಾದ ಸಂಗತಿ ಎಂದರೆ, ಮೊದಲ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಎರಡೂ ಕ್ಷೇತ್ರಗಳಅಭ್ಯರ್ಥಿಗಳ ಉಲ್ಲೇಖವಿಲ್ಲ. ಆಧರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಅಂತೆ ಕಂತೆಗಳ ಸುದ್ದಿಗಳು ಹರಿದಾಡುತ್ತಿವೆ.
ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಆರಂಭದಿಂದ ಕಾಂಗ್ರೆಸ್ ನಿಂದ ಡಾ, ಗಿರೀಶ ಸೋನವಾಲ್ಕರ ಹೆಸರಿತ್ತು, ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಲಕ್ಷ್ಮೀ ಹೆಬ್ಬಾಳಕರ ಪುತ್ರ ಮೃನಾಲ್ ಹೆಬ್ಬಾಳಕರ ಹೆಸರು ಮುನ್ನೆಲೆಗೆ ಬಂದಿತು. ಅಷ್ಟೇ ಅಲ್ಲ ಅವರ ಹೆಸರೇ ಅಂತಿಮವಾಗಿದೆ ಎನ್ನುವ ಮಾತುಗಳು ಕೇಳಿ ಬಂದವು.,

ಇದರ ಜೊತೆಗೆ ಚಿಕ್ಕೋಡಿಗೆ ಸಚಿವ ಸತೀಶ ಜಾರಕಿಹೊಳಿ ಪುತ್ರ ಪ್ರಿಯಾಂಕಾ ಜಾರಕಿಹೊಳಿ ಹೆಸರು ಕೇಳಿ ಬರುತ್ತಿದೆ,


ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ಕಳೆದ ಬಾರಿ ನಡೆದ ಲೋಕಸಭೆ ಉಪ ಚುನಾವಣೆಯಲ್ಲಿ ಡಾ, ಗಿರೀಶ ಸೋನವಾಲ್ಕರ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕೇ ಬಿಟ್ಟಿತು ಎನ್ನುವ ಮಾತುಗಳು ಜೋರಾಗಿ ಕೇಳಿ ಬಂದಿದ್ದವು, ಆದರೆ ಕೊನೆಗಳಿಗೆಯಲ್ಲಿ ಕೈತಪ್ಪಿತು,

ಇಲ್ಲಿ ಗಿರೀಶ ಸೋನವಾಲ್ಕರ ಅವರು ಎಲ್ಲ ಪಕ್ಷದವರಿಗೂ ಮತ್ತು ಎಲ್ಲ ವರ್ಗಕ್ಕೂ ಬೇಕಾದ ವ್ಯಕ್ತಿತ್ವ ಹೊಂದಿದವರು, ಹೀಗಾಗಿ ಅವರನ್ನು ಸೆಳೆದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಸತೀಶ ಜಾರಕಿಹೊಳಿ ಪ್ರಯತ್ನ ನಡೆಸಿದ್ದರು, ಆರಂಭದ ದಿನಗಳಲ್ಲಿ ಅವರೊಂದಿಗೆ ಸತೀಶ್ ಎರಡ್ಮೂರು ಸಭೆ ನಡೆಸಿದ್ದರು, ಅವರ ಸೂಚನೆ ಮೇರೆಗೆ ಡಾ, ಸೋನವಾಲ್ಕರ ಅವರು ಅಖಾಡಾದಲ್ಲಿ ಧುಮುಕಿದ್ದರು, ಈಗಲೂ ಕೂಡ ಸತೀಶ ಅವರು ತಯಾರಿಯಲ್ಲಿ ಇರುವಂತೆ ಮತ್ತು ಕ್ಷೇತ್ರದಲ್ಲಿ ಸಂಚರಿಸುವಂತೆ ಸೂಚನೆ ನೀಡಿದ್ದಾರೆಂದು ಗೊತ್ತಾಗಿದೆ,

ಅಂದರೆ ಇಲ್ಲಿ ಬಿ ಫಾರ್ಮ ಕಥಗೆ ಬರುವ ತನಕ ಯಾರು ಅಭ್ಯಥರ್ಿ ಎನ್ನುವುದು ಪಕ್ಕಾ ಅಲ್ಲ ಎನ್ನುವುದು ಸ್ಪಷ್ಟ.

ಬಿಜೆಪಿಯಲ್ಲಿ ನಿಲ್ಲದ ಗೊಂದಲ..!
ಕಾಂಗ್ರೆಸ್ನಲ್ಲಿ ಒಂದು ರೀತಿಯಾದರೆ ಬಿಜೆಪಿಯಲ್ಲಿ ಅಭ್ಯರ್ಥಿಗಳ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ.
ಇತ್ತೀಚೆಗೆ ಪಕ್ಷದ ಅಧ್ಯಕ್ಷ ಜೆ,ಪಿ.ನಡ್ಡಾ ಬೆಳಗಾವಿಗೆ ಬಂದು ಹೋದರೂ ಅಭ್ಯರ್ಥಿಗಳ ಬಗ್ಗೆ ಚರ್ಚ ನಡೆಯಲಿಲ್ಲ. ಕಾರ್ಯಕಾರಿಣಿ ಸಭೆ ನಡೆದರೂ ಕೂಡ ಯಾವುದೇ ರೀತಿಯ ಮಾತುಕತೆಗಳು ನಡೆಯಲಿಲ್ಲ. ಆದರೆ ಅದಕ್ಕಿಂತ ಮುಂಚೆ ಜಿಲ್ಲಾ ಕಮಿಟಿಯಿಂದ ಎರಡೂ ಕ್ಷೇತ್ರದಿಂದ ತಲಾ ಮೂರು ಹೆಸರನ್ನು ಶಿಫಾರಸ್ಸು ಮಾಡಲಾಗಿದೆ ಎನ್ನುವುದು ಗೊತ್ತಾಯಿತು, ಆದರೆ ಕಾಂಗ್ರೆಸ್ ಯಾರನ್ನು ಕಣಕ್ಕಿಳಿಸುತ್ತದೆ ಎನ್ನುವುದರ ಮೇಲೆ ಬಿಜೆಪಿಯಲ್ಲಿ ಕೊನೆಗಳಿಗೆಯಲ್ಲಿ ಅಚ್ಚರಿ ಅಭ್ಯಥರ್ಿ ಕಣಕ್ಕಿಳಿದರೆ ಆಶ್ಚರ್ಯ ಪಡಬೇಕಿಲ್ಲ.


ಬೆಳಗಾವಿ ಕ್ಷೇತ್ರದಿಂದ ಮಹಾಂತೇಶ ಕವಟಗಿಮಠ, ಅನಿಲ ಬೆನಕೆ ಮತ್ತು ಸಂಜಯ ಪಾಟೀಲರ ಹೆಸರು ಶಿಫಾರಸ್ಸಾಗಿದೆ, ಇದರ ಜೊತೆಗೆ ಜಗದೀಶ ಶೆಟ್ಟರ ಹೆಸರೂ ಪ್ರಸ್ತಾಪವಾಗತೊಡಗಿದೆ.

ಚಿಕ್ಕೋಡಿ ಕ್ಷೇತ್ರದಿಂದ ಅಣ್ಣಾಸಾಹೇಬ ಜೊಲ್ಲೆ ಮತ್ತು ಅಮಿತ್ ಕೋರೆ ಹೆಸರು ಶಿಫಾರಸ್ಸಾಗಿದೆ ಎನ್ನುವುದನ್ನು ಇಲ್ಲಿ ಸ್ಮರಿಸಬಹುದು,

Leave a Reply

Your email address will not be published. Required fields are marked *

error: Content is protected !!