
ಸಿಸಿಟಿವಿ ಸಾಕ್ಷ್ಯಕ್ಕೂ ಡೋಂಟ್ ಕೇರ್
ಮಹಿಳೆಯ ಸೀರೆ ಎಳೆದು ಹಲ್ಲೆಸಿಸಿಟಿವಿ ಸಾಕ್ಷ್ಯಕ್ಕೂ ಡೋಂಟ್ ಕೇರ್ ಎಂದ ಖಾಕಿಬೆಳಗಾವಿ.ಅದೊಂದು ಸಿಸಿಟಿವಿ ಸಾಕ್ಷಿಯನ್ನು ಯಾವುದೇ ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನೋಡಿದರೆ ಮೊದಲು ಹಲ್ಲೆಕೋರನ್ನು ಒದ್ದು ಒಳಗೆ ಹಾಕಿ ಎನ್ನುತ್ತಾರೆ, ಅದರಲ್ಲಿಯೂ ಇಪ್ಪತ್ತಕ್ಕೂ ಹೆಚ್ಚು ಜನ ಮಹಿಳೆಯನ್ನು ನಡು ರಸ್ತೆಯಲ್ಲಿ ಸೀರೆ ಜಗ್ಗಿ ಹಲ್ಲೆ ಮಾಡಿದ್ದನ್ನು ಕೇಳಿದರೆ ಎಂಥಹವರ ಮೈ ಸಹ ಉರಿದು ಹೋಗುತ್ತದೆ,ಆದರೆ ಪಾಪ. ಬೆಳಗಾವಿ ಜಿಲ್ಲೆಯ ರಾಯಬಾಗ ಪೊಲೀಸರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಏನೂ ಕಾಣದಂತೆ ಕುಳಿತುಬಿಟ್ಟಿದ್ದಾರೆ, ತನ್ನ ಹೆತ್ತ ಮಕ್ಕಳ ಸಮ್ಮುಖದಲ್ಲಿ…