ಬೆಳಗಾವಿ. ಲೋಕಸಮರದ ಕಲಿಗಳ ಆಯ್ಕೆ ಬೆಳಗಾವಿ ಹೊರತುಪಡಿಸಿ ಉಳಿದವುಗಳು ಮುಗಿದಿದೆ. ಬೆಳಗಾವಿ ಅಭ್ಯರ್ಥಿ ಆಯ್ಕೆ ಒಂದು ರೀತಿಯ ಕಗ್ಗಂಟಾಗಿದೆ. ಬೆಳಗಾವಿಯಲ್ಲಿಯೇ ಘಟಾನುಘಟಿಗಳು ಇರುವಾಗ ಹುಬ್ಬಳ್ಳಿ ಯ ಜಗದೀಶ ಶೆಟ್ಟರಗೆ ಯಾಕೆ ಎನ್ನುವ ಬಹುದೊಡ್ಡ ಪ್ರಶ್ನೆ ಎದುರಾಗಿದೆ.


ಬೆಳಗಾವಿ ಲೋಕಸಭಾ ವ್ಯಾಪ್ತಿಯ ಬೇಕಾದವರಿಗೆ ಟಿಜೆಟ್ ಕೊಡಿ. ಅದನ್ನು ಬಿಟ್ಟು ಹುಬ್ಬಳ್ಳಿ ಯ ಜಗದೀಶ ಶೆಟ್ಟರಗೆ ಟಿಕೇಟ್ ಕೊಟ್ಟರೆ ಬಿಜೆಪಿಗೆ ಆರಂಭಿಕ ಹಿನ್ನೆಡೆ ಆರಂಭವಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ಯಿವೆ.
ಹಾವೇರಿ, ಧಾರವಾಡ ಟಿಕೆಟ್ ತಪ್ಪಿದ ನಂತರ ಬೆಳಗಾವಿ ಕಡೆಗೆ ಮುಖ ಮಾಡಿರುವ ಜಗದೀಶ ಶೆಟ್ಟರ್ ಬೆಳಗಾವಿ ಕಡೆಗೆ ಮುಖ ಮಾಡಿದ್ದಾರೆ.

ಅಚ್ಚರಿಯ ಸಂಗತಿ ಎಂದರೆ ಬೆಳಗಾವಿ ಲಿಂಗಾಯತ ಎನ್ನುವ ಫೇಸಬುಕ್ ಪೇಜನಲ್ಲಿ ಶೆಟ್ಟರ್ ಅವರಿಗೆ ಗೋ ಬ್ಯಾಕ್ ಅಭಿಯಾನ ಶುರುವಿಟ್ಡುಕೊಂಡಿದ್ದಾರೆ.
ಬೆಳಗಾವಿ ಲೋಕಸಭಾ ವ್ಯಾಪ್ಯಿಯ ಭಹುತೇಕ ಬಿಜೆಪಿಗರು ಶೆಟ್ಟರ ಆದರೆ ಕಷ್ಟ ಎನ್ನುವ ಅಭಿಪ್ರಾಯ ಕೊಟ್ಟಿದ್ದಾರೆಂದು ಹೇಳಲಾಗಿದೆ.
ಹೀಗಾಗಿ ಬಿಜೆಪಿ ಹೈ ಕಮಾಂಡಗೆ ಬೆಳಗಾವಿ ಬಿಜೆಪಿ ಆಯ್ಕೆ ಹೊಸ ತಲೆನೂವು ಶುರು ಆದಂತಾಗಿದೆ.